ಗುರುವಾರ , ಮೇ 19, 2022
24 °C

ವರ್ಗಾವಣೆ ನೀತಿ ಬದಲಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆಯ ಬಗ್ಗೆ ಹಾಲಿ ಇರುವ ಸರ್ಕಾರಿ ಆದೇಶದಲ್ಲಿ ಅನೇಕ ನ್ಯೂನತೆಗಳಿರುವುದು ಕಂಡು ಬರುತ್ತದೆ. ಶಿಕ್ಷಕರ ವರ್ಗವಣೆ ನೀತಿಯಲ್ಲಿ ಅಂತರ ಜಿಲ್ಲಾ ವರ್ಗವಣೆಯಲ್ಲಿ ಒಬ್ಬ ಶಿಕ್ಷಕರು ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ವರ್ಗವಣೆ ಗೊಂಡಿದ್ರೆ ಮತ್ತೆ ಮರುವರ್ಗಾವಣೆಯನ್ನು ಬಯಸಲು ಸಾಧ್ಯವಿಲ್ಲವೆಂಬ ಆದೇಶವು ಅನೇಕ ಶಿಕ್ಷಕರಿಗೆ ತುಂಬಾ ಅನಾನುಕೂಲವಾಗಿರುತ್ತದೆ.ಒಬ್ಬ ಶಿಕ್ಷಕ/ ಶಿಕ್ಷಕಿ ತನ್ನ ಹೆಂಡತಿ/ ಗಂಡನು ಸರ್ಕಾರಿ/ ಖಾಸಗಿ ಸೇವೆಯಲ್ಲಿ ಇರುವ ಸ್ಥಳಕ್ಕೆ ಅಥವಾ ಆ ಸ್ಥಳದಲ್ಲಿರುವ ಸಮೀಪದಲ್ಲಿ ಕೆಲಸ ಮಾಡುತ್ತಿರುತ್ತಾರೆ/ಳೆ. ಕೆಲವು ವರ್ಷಗಳ ನಂತರ ಗಂಡನಿಗೆ/ ಹೆಂಡತಿಗೆ ಬೇರೆ ಜಿಲ್ಲೆಗೆ ವರ್ಗಾವಣೆಗೊಂಡು ಹೋಗಿ ಕರ್ತವ್ಯ ನಿರ್ವಹಿಸುತ್ತಿರುತ್ತಾನೆ/ಳೆ.

 ಅಂಥಹ ಸಂದರ್ಭದಲ್ಲಿ ಗಂಡ ಒಂದು ಜಿಲ್ಲೆಯಲ್ಲಿ ಹೆಂಡತಿ ಒಂದು ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುತ್ತಾ ಎರಡೆರಡು ಕಡೆ ಸಂಸಾರವನ್ನು ನಡೆಸಲು ತುಂಬಾ ತೊಂದರೆಯಗುತ್ತದೆ. ಹಾಗೂ ಒಬ್ಬರಿಗೊಬ್ಬರಿಗೆ ಕಷ್ಟ ಸುಖಗಳಲ್ಲಿ ಭಾಗಿಯಾಗಲು ಅವಕಾಶವಿರುವುದಿಲ್ಲ.

ಹೀಗಾಗಿ ಸಂಸಾರಗಳು ಕಷ್ಟದಲ್ಲಿ ಸಿಲುಕಿ ತೊಂದರೆಯನ್ನು ಅನುಭವಿಸುವ ಸ್ಥಿತಿ ಉಂಟಾಗಿದೆ. ಇಂತಹ ಸಂದರ್ಭಗಳಲ್ಲಿ ಗಂಡ ನಿರುವೆಡೆ ಹೆಂಡತಿಗಾಗಲಿ ಅಥವಾ ಹೆಂಡತಿ ಇರುವ ಕಡೆ ಗಂಡನಿಗಾಗಲಿ ವರ್ಗಾವಣೆ ನೀಡುವಲ್ಲಿ ಸರ್ಕಾರವು ಮನಗೊಂಡು ಈ ಅನುಕೂಲವನ್ನು ಕಲ್ಪಿಸಿ ಕೊಡಬೇಕೆಂದು ಕೋರುತ್ತೇವೆ.

ಗಂಡ ಹೆಂಡತಿಯರಿಬ್ಬರೂ ಬೇರೆ ಬೇರೆ ಇಲಾಖೆಯಲ್ಲಿ ಸರ್ಕಾರಿ/ ಖಾಸಗಿ ಸೇವೆಯಲ್ಲಿ ಸೇವೆ ಸಲ್ಲಿಸುತ್ತಿರುವವರಿಗೂ ಈ ಅನುಕೂಲವನ್ನು ಕಲ್ಪಿಸಿಕೊಟ್ಟರೆ ಅವರ ಭವಿಷ್ಯಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ.

-

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.