ಸೋಮವಾರ, ಮೇ 10, 2021
28 °C

ವರ್ಗಾವಣೆ; ಶಿಕ್ಷಕರಿಗೆ ಅನ್ಯಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಕೌನ್ಸಿಲಿಂಗ್ ಮೂಲಕ ಪಾರದರ್ಶಕ ವರ್ಗಾವಣೆ ನೀತಿ - 2007 ಜಾರಿಯಲ್ಲಿದೆ. ಇದು ಸ್ವಾಗತಾರ್ಹ.ಆದರೆ ಘಟಕದ ಹೊರಕ್ಕೆ ವರ್ಗಾವಣೆ ಅವಕಾಶವನ್ನು ಶೇ 1ಕ್ಕೆ ನಿಗದಿ ಮಾಡಲಾಗಿದೆ. ವಿಶೇಷ ಪ್ರಕರಣಗಳ ಅಡಿಯಲ್ಲಿ ಅಥವಾ ಪತಿ ಮತ್ತು ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿರುವ ಪ್ರಕರಣದ ವ್ಯಾಪ್ತಿಗೆ ಬಾರದ ಶಿಕ್ಷಕರಿಗೆ ವರ್ಗಾವಣೆ ಅವಕಾಶವನ್ನು ಕಳೆದ ಮೂರು ವರ್ಷಗಳಿಂದ ನಿರಾಕರಿಸಲಾಗಿದೆ.ಇದು ಅನ್ಯಾಯದ ಪರಮಾವಧಿ. ಶೇ 1ರಷ್ಟು ವರ್ಗಾವಣೆ ಅವಕಾಶದಿಂದ ಲಭ್ಯವಾಗುವ ಖಾಲಿ ಜಾಗಗಳು ವಿಶೇಷ ಪ್ರಕರಣಗಳ ನಂತರದಲ್ಲಿ ಬರುವ ಪತಿ ಮತ್ತು ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿರುವವರಿಗೆ ಮಾತ್ರವೇ ಸಿಗುತ್ತಿವೆ.ಇತರ ಶಿಕ್ಷಕರಿಗೆ ವರ್ಗಾವಣೆಗೆ ಅವಕಾಶ ಒದಗಿಸುವುದು ಇಲಾಖೆ ಕರ್ತವ್ಯವಲ್ಲವೇ? ವಿಶೇಷ ಪ್ರಕರಣಗಳನ್ನು ಹೊರತುಪಡಿಸಿ ಉಳಿದೆಲ್ಲ ಪ್ರಕರಣಗಳಲ್ಲಿ ಬರುವ ಅವಕಾಶಗಳನ್ನು ಸೇವಾ ಹಿರಿತನದ ಮೇಲೆ ವರ್ಗಾವಣೆ ಮಾಡಿ ನ್ಯಾಯ ಒದಗಿಸಬಹುದಲ್ಲವೇ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.