ವರ್ಮಾ ಸಮಿತಿ ಶಿಫಾರಸು ಜಾರಿಗೆ ಆಗ್ರಹ

7

ವರ್ಮಾ ಸಮಿತಿ ಶಿಫಾರಸು ಜಾರಿಗೆ ಆಗ್ರಹ

Published:
Updated:

ಬಾಗೇಪಲ್ಲಿ: ಮಹಿಳೆಯರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ, ಆತ್ಯಾಚಾರಗಳಿಂದ ಸಮಾಜ ತಲೆ ತಗ್ಗಿಸು­ವಂತಾಗಿದೆ ಎಂದು ಜನವಾದಿ ಮಹಿಳಾ ಸಂಘಟನೆ (ಜೆಎಂಎಸ್) ರಾಜ್ಯ ಉಪಾಧ್ಯಕ್ಷೆ ಕೆ.ನಿರ್ಮಲಾ  ವಿಷಾದಿಸಿದರು.ಪಟ್ಟಣದ ಕನ್ನಿಕಾ ಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಜನವಾದಿ ಮಹಿಳಾ ಸಂಘಟನೆ ಹಮ್ಮಿ­ಕೊಂಡಿದ್ದ 2ನೇ ತಾಲ್ಲೂಕು ಸಮ್ಮೇ­ಳನದಲ್ಲಿ ಮಾತನಾಡಿ, ‘ಮಹಿಳೆ­ಯರು ಒಬ್ಬಂಟಿಯಾಗಿ ಬದುಕಲು ಸಾಧ್ಯವಿಲ್ಲ. ಮಹಾನಗರಗಳಲ್ಲಿ ಮಹಿಳೆ, ಮಕ್ಕಳ ಮೇಲೆ ನಡೆಯುವ ದೌರ್ಜನ್ಯ, ಅತ್ಯಾ­ಚಾರಗಳು ಬೆಳಕಿಗೆ ಬರುತ್ತಿವೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಹೊರ­ಬರುತ್ತಿಲ್ಲ ಎಂದು ತಿಳಿಸಿದರು.ಅತ್ಯಾಚಾರ, ದೌರ್ಜನ್ಯಕ್ಕೆ ಒಳಗಾದ­ವರನ್ನು ಸಮಾಜ ಅವಮಾನಕರವಾಗಿ ನೋಡುತ್ತಿದೆ. ಮಹಿಳೆಯರಿಗೆ ಸುರಕ್ಷತೆ ಇಲ್ಲವಾಗಿದೆ. ಎಲ್ಲರಿಗೂ ಸಮಾನ ರೀತಿ­ಯಲ್ಲಿ ಪಡಿತರ ಸಿಗುವಂತಾಗಬೇಕು. ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ವರ್ಮಾ ಸಮಿತಿ ಶಿಫಾರಸು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.ಜಿಲ್ಲಾ ಪಂಚಾಯಿತಿ ಸದಸ್ಯೆ ಹಾಗೂ ಜೆಎಂಎಸ್ ಅಧ್ಯಕ್ಷೆ ಬಿ.ಸಾವಿತ್ರಮ್ಮ ಮಾತ­ನಾಡಿ, ತಾಲ್ಲೂಕಿನ ಅಂತರ್ಜಾಲ­ದಲ್ಲಿ ಪ್ಲೋರೋಸಿಸ್ ಇದ್ದು, ಜನತೆ ನರದೌರ್ಬಲ್ಯದಿಂದ ಬಳಲುತ್ತಿ­ದ್ದಾರೆ. ಶೇ 55ರಷ್ಟು ಮಹಿಳೆಯರು ಅಪೌಷ್ಟಿಕತೆ­ಯಿಂದ ನರಳುತ್ತಿದ್ದಾರೆ ಎಂದು ತಿಳಿಸಿದರು. ಜಿ.ಪಂ. ಸದಸ್ಯೆ ನಾರಾ­ಯಣಮ್ಮ, ತಾ.ಪಂ. ಅಧ್ಯಕ್ಷೆ ಮುನಿರತ್ನಮ್ಮ, ಸದಸ್ಯೆ ಶೋಭಾ­ರಾಣಿ, ಹಾಲು ಒಕ್ಕೂಟದ ಸದಸ್ಯೆ ­ಶೋಭಾ, ಪುರಸಭೆ ಸದಸ್ಯೆ ಬಿ.ಬಿ.­ಜ್ಯೋತಿ, ಸಂಘ­ಟನೆ ಪದಾಧಿಕಾರಿಗಳಾದ ಜೈನಾಭೀ, ಪವಿತ್ರಾ ಮತ್ತಿತರರು ಉಪಸ್ಥಿತರಿದ್ದರು.ಪದಾಧಿಕಾರಿಗಳ ಆಯ್ಕೆ

ಬಾಗೇಪಲ್ಲಿ ತಾಲ್ಲೂಕು ಜನವಾದಿ ಮಹಿಳಾ ಸಂಘಟನೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷೆ– ಬಿ.ಸಾವಿತ್ರಮ್ಮ, ಉಪಾಧ್ಯಕ್ಷೆ– ನಾರಾ­ಯಣಮ್ಮ, ಕಾರ್ಯದರ್ಶಿ– ಶೋಭಾ, ಖಜಾಂಚಿ–ಶೋಭಾರಾಣಿ, ಸಹ­ಕಾರ್ಯ­­ದರ್ಶಿ– ಮುನಿರತ್ನಮ್ಮ, ಪದಾ­ಧಿ­ಕಾರಿಗಳಾಗಿ ಪಾತ­ಪಾಳ್ಯ­ಜೈನಾಭೀ, ನಾರಾಯಣಮ್ಮ, ಸಾಕಮ್ಮ, ವರಲಕ್ಷ್ಮೀ, ಗಂಗರತ್ನಮ್ಮ, ಅಂಬಿಕಾ, ದುರ್ಗಮ್ಮ, ಮಿಟ್ಟೇಮರಿ­ದಿಲ್‌ಶಾದ್,  ನಾಗವೇಣಿ,  ಭಾಗ್ಯಮ್ಮ,  ತಿರುಮಲಕ್ಕ ಆಯ್ಕೆಯಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry