ವರ್ಷಕ್ಕೊಂದು ಭಿನ್ನ ಚಿತ್ರ

7

ವರ್ಷಕ್ಕೊಂದು ಭಿನ್ನ ಚಿತ್ರ

Published:
Updated:

ಪ್ರಿಯಾಂಕಾ ಚೋಪ್ರಾ ಪ್ರತಿವರ್ಷವೂ ಭಿನ್ನ ಚಿತ್ರವೊಂದರಲ್ಲಿ ನಟಿಸಬೇಕು ಎಂದು ತೀರ್ಮಾನಿಸಿದ್ದಾರಂತೆ. ಕಳೆದ ವರ್ಷ `ಸಾಥ್ ಖೂನ್ ಮಾಫ್'ನಲ್ಲಿ ಕಾಣಿಸಿಕೊಂಡಿದ್ದರು.2012ರಲ್ಲಿ `ಬರ್ಫಿ' ಚಿತ್ರದಲ್ಲಿ ಆಟಿಸನ್ ಪೀಡಿತ ಹುಡುಗಿಯ ಪಾತ್ರ ನಿರ್ವಹಿಸಿದ್ದರು. ಮುಂದಿನ ವರ್ಷ ಮೇರಿ ಕೋಮ್ ಚಿತ್ರವು ಭಿನ್ನ ಚಿತ್ರವಾಗಲಿದೆ ಎಂದು ಪ್ರಿಯಾಂಕಾ ಹೇಳಿಕೊಂಡಿದ್ದಾರೆ.ಪ್ರತಿ ಚಿತ್ರಕ್ಕೂ ಗಂಭೀರವಾಗಿ ತಯಾರಿ ನಡೆಸುವ ಪ್ರಿಯಾಂಕಾ ಇದೀಗ ಬಾಕ್ಸಿಂಗ್ ಪಟ್ಟುಗಳನ್ನು ಕಲಿಯುತ್ತಿದ್ದಾರೆ. ಮೇರಿ ಕೋಮ್ ತುಂಬ ಸರಳ ಮತ್ತು ಸವಿಯಾದ ವ್ಯಕ್ತಿತ್ವ ಹೊಂದಿರುವ ಮಹಿಳೆ. ಅವರೊಂದಿಗೆ ಮಾತನಾಡುವಾಗ ಬಾಕ್ಸರ್‌ನೊಂದಿಗೆ ಮಾತನಾಡುತ್ತಿದ್ದೇವೆ ಎಂದೆನಿಸುವುದೇ ಇಲ್ಲ. ಈ ಮೃದು ವ್ಯಕ್ತಿತ್ವದ ಕಠಿಣ ಕೈಗಳ ಮಹಿಳೆಯಾಗುವುದು ಸುಲಭವಲ್ಲ ಎಂದು ಹಲವು ಸಲ ಎನಿಸಿದ್ದಿದೆ' ಎನ್ನುವುದು ಪ್ರಿಯಾಂಕಾ ಅಭಿಪ್ರಾಯ.ಮುಂದಿನ ವರ್ಷ ನಾಲ್ಕು ಚಿತ್ರಗಳಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಲಿದ್ದಾರೆ. `ಕ್ರಿಶ್ 3' ಚಿತ್ರೀಕರಣ ಆರಂಭವಾಗಿದೆ. ರಿಮೇಕ್ ಚಿತ್ರ `ಜಂಝೀರ್' ಸಹ ಆರಂಭವಾಗಿದೆ. ಗುಂಡೆ ಚಿತ್ರ ಹಾಗೂ ಮೇರಿ ಕೋಮ್ ಜೀವನಾಧಾರಿತ ಚಿತ್ರಗಳು 2013ರಲ್ಲಿ ತೆರೆ ಕಾಣಲಿವೆ.ಈ ವರ್ಷ ಗಾಯಕಿಯಾಗಿಯೂ `ಇನ್ ಮೈ ಸಿಟಿ' ಅಲ್ಬಮ್ ಬಿಡುಗಡೆ ಮಾಡಿರುವ ಪ್ರಿಯಾಂಕಾಗೆ ಹಾಡುಗಾರ್ತಿಯಾದದ್ದೂ ಖುಷಿ ನೀಡಿದೆಯಂತೆ. ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಬೆಂಬಲಿಸಿದ್ದಾರೆ. ಬಾಲಿವುಡ್‌ನಲ್ಲಿರುವುದರಿಂದಲೇ ಈ ಮಟ್ಟದ ಯಶಸ್ಸು ದೊರೆತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ ಎನ್ನುವ ಪ್ರಿಯಾಂಕಾ, ಬಾಲಿವುಡ್ ಚಿತ್ರಗಳಲ್ಲಿ ಹಾಡುವಿರಾ ಎಂಬ ಪ್ರಶ್ನೆಗೆ ಮಾತ್ರ ನಕ್ಕು ಸುಮ್ಮನಾಗುತ್ತಾರೆ. `ಹಾಡು, ಹಿನ್ನೆಲೆ ಗಾಯನ ಇದೆಲ್ಲವೂ ನನಗಿನ್ನೂ ಹೊಸತು. ಯಾವುದನ್ನೂ ನಿರ್ಧರಿಸಿಲ್ಲ. ಅವಕಾಶಗಳು ದೊರೆತರೆ ನೋಡುವ' ಎನ್ನುವುದು ಅವರ ಉತ್ತರವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry