ವರ್ಷದಲ್ಲಿ ಏಳು ಶಿಶು, ಮಹಿಳೆ ಸಾವು: ಆರೋಪ

7
ಚಿಂಚಲಿ ಆಸ್ಪತ್ರೆಯಲ್ಲಿ ದೊರೆಯದ ಸೂಕ್ತ ಚಿಕಿತ್ಸೆ

ವರ್ಷದಲ್ಲಿ ಏಳು ಶಿಶು, ಮಹಿಳೆ ಸಾವು: ಆರೋಪ

Published:
Updated:

ರಾಯಬಾಗ: ತಾಲ್ಲೂಕಿನ ಚಿಂಚಲಿ ಗ್ರಾಮದಲ್ಲಿರುವ  24X7 ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ  ದೊರೆಯ ಬೇಕಾದ ಆರೋಗ್ಯ ಸೌಲಭ್ಯ ಸಿಗುತ್ತಿಲ್ಲ. ಹೀಗಾಗಿ ಕಳೆದ ವರ್ಷದ ಅವಧಿಯಲ್ಲಿ ಈ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಏಳು ಶಿಶು ಹಾಗೂ ಒಬ್ಬ ಮಹಿಳೆ ಸಾವನ್ನಪ್ಪಿದ್ದಾರೆ.ಚಿಂಚಲಿ ಪ್ರಾಥಮಿಕ ಕೇಂದ್ರದ  ವ್ಯಾಪ್ತಿಯಲ್ಲಿ ನಾಲ್ಕು ಉಪ ಕೇಂದ್ರ­ಗಳಿಗಿವೆ. ಈ ಕೇಂದ್ರಗಳಲ್ಲಿನ ಶಿರಗೂರ, ಗುಂಡವಾಡ, ಸಿದ್ದಾಪುರ, ಕುಡಚಿ ಗ್ರಾಮೀಣ, ಚಿಂಚಲಿ ರೇಲ್ವೆ ಸ್ಟೇಶನ್‌, ಗಣಿಕೋಡಿ, ಉಪ್ಪಾರವಾಡಿ ಹಾಗೂ ಲಕ್ಷ್ಮಿ ತೋಟಗಳಲ್ಲಿ ಈ ಕೇಂದ್ರದ ಮೂಲಕ 2013 ಜನವರಿಯಿಂದ ಈ ವರೆಗೂ ಚುಚ್ಚು ಮದ್ದು, ಲಸಿಕಾ ಕಾರ್ಯಕ್ರಮಗಳು ನಡೆಯದೆ ಇರುವು­ದರಿಂದ ಶಿಶು ಮರಣಗಳಾಗಿವೆಯಲ್ಲದೆ ಒಬ್ಬ ತಾಯಿಯೂ ಮರಣ ಹೊಂದಿದ್ದಾಳೆ  ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ.ಈ ಕೇಂದ್ರದಲ್ಲಿ ಐದು ಜನ ಕಿರಿಯ ಮಹಿಳಾ ಸಹಾಯಕಿಯರು, ಮೂರು ಜನ ಕಿರಿಯ ಪುರುಷ ಆರೋಗ್ಯ ಸಹಾಯಕರು ಇದ್ದರೂ ಸಹ ಕಳೆದ ಏಳೆಂಟು ತಿಂಗಳುಗ ಳಿಂದ ತಾಯಿ ಕಾರ್ಡ್‌ ವಿತರಣೆ, ಗರ್ಭಿಣಿಯರ ದಾಖಲಾತಿ, ಅಂಗನವಾಡಿ ಕೇಂದ್ರ ಗಳಿಗೆ ಭೇಟಿ, ಶಾಲಾ ಮಕ್ಕಳಿಗೆ ಡಿ.ಟಿ.ಪಿ ಹಾಗೂ ಟಿ.ಟಿ. ಇಂಜಕ್ಸನ್‌ಗಳು ಆಗಿಲ್ಲ ಎಂದು ಆಪಾದಿಸಿದ್ದಾರೆ.ಉಪಕೇಂದ್ರಗಳಲ್ಲಿ ಕಿರಿಯ ಮಹಿಳಾ ಸಹಾಯಕಿಯರಿಗೆ ವಸತಿ ಸೌಕರ್ಯ ಸಹ ಇದ್ದರೂ ಕೂಡಾ ಅಲ್ಲಿ ಯಾರೂ ವಾಸ ಮಾಡುತ್ತಿಲ್ಲ. ಸ್ಥಳೀಯ ವೈದ್ಯಾಧಿಕಾರಿಗಳು ಸಹ ಗ್ರಾಮಸ್ಥರ ಮನವಿಗೆ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಗ್ರಾಮಸ್ಥರು ಜಿಲ್ಲಾ ಪಂಚಾಯ್ತಿ ಸದಸ್ಯ ಜಿತೇಂದ್ರ ಜಾಧವ ಅವರ ಗಮನಕ್ಕೆ ತಂದಿದ್ದಾರೆ.ಇದು ತಮ್ಮ ಗಮನಕ್ಕೆ ಸಹ ಬಂದಿದೆ. ಆದರೆ ಇಲ್ಲಿನ ವೈದ್ಯಾಧಿಕಾರಿ ಜೊತೆ ಮಾತನಾಡಿ ಪ್ರಯೋಜನವಿಲ್ಲ. ಆದ್ದರಿಂದ ಈ ಸಮಸ್ಯೆಯ ಬಗ್ಗೆ ತಾವು ಜಿಲ್ಲಾ ಆರೋಗ್ಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಸರಿಪಡಿಸುತ್ತೇನೆ ಎಂದು ಜಾಧವ ತಿಳಿಸಿದ್ದಾರೆ.ಉಳಿದ ಕಡೆ ಸರಾಸರಿ ಹೋಲಿಸಿದರೆ ಇಲ್ಲಿನ ಶಿಶು ಮರಣ ಸಂಖ್ಯೆ ಕಡಿಮೆಯಾಗಿದೆ. ಇಲ್ಲಿ ಸಿಬ್ಬಂದಿ ಕೊರತೆ ಇದೆ. ಇದ್ದ ಸಿಬ್ಬಂದಿಯವರಿಂದಲೇ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಆರ್‌.ಎಚ್‌. ರಂಗನ್ನವರ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry