ವರ್ಷಾಂತ್ಯಕ್ಕೆ ಸ್ವಂತ ಸೂರಿನ ಊರು ಘೋಷಣೆ

7

ವರ್ಷಾಂತ್ಯಕ್ಕೆ ಸ್ವಂತ ಸೂರಿನ ಊರು ಘೋಷಣೆ

Published:
Updated:

ಮೈಸೂರು:ನಗರದ ಹೊರವಲಯದ ಸರ್ದಾರ್ ವಲ್ಲಭಬಾಯಿ ಪಟೇಲ್ ನಗರ ಬಳಿ ಇರುವ ಜೆಎಸ್‌ಎಸ್ 2ನೇ ಹಂತದ ಬಡಾವಣೆ ನಿವೇಶನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ನಗರದಲ್ಲಿ ಒಟ್ಟು 1.85 ಲಕ್ಷ ಸ್ವಂತ ಮನೆ ಹೊಂದಿರುವವರು ಇದ್ದಾರೆ.ಸುಮಾರು 23 ಸಾವಿರ ಮಂದಿ ಬಾಡಿಗೆ ಮನೆಯಲ್ಲಿ ವಾಸ  ಇರುವುದು ಪ್ರಾಥಮಿಕ ಹಂತದ ಸರ್ವೆಯಿಂದ ತಿಳಿದುಬಂದಿದೆ. ಈಗಾಗಲೇ ಸೂರಿಲ್ಲದವರಿಗೆ ಮನೆಗಳನ್ನು ಕಟ್ಟಿಸಿ ನೀಡಲಾಗುತ್ತಿದೆ. ಸಾಂಸ್ಕೃತಿಕ ನಗರಿಯಲ್ಲಿ ಪ್ರತಿಯೊಬ್ಬರು ಸ್ವಂತ ಸೂರು ಹೊಂದಬೇಕು ಎಂಬುದು ಇದರ ಉದ್ದೇಶ~ ಎಂದು ತಿಳಿಸಿದರು.`ಗುಡಿಸಲುರಹಿತ ಮೈಸೂರು ಮಾಡಬೇಕು ಎಂಬುದು ನಮ್ಮ ಉದ್ದೇಶ. ಹಾಲಿ ಗುಡಿಸಲುಗಳಲ್ಲಿ ವಾಸ ಇರುವವರಿಗೆ ಶೀಘ್ರ ಮನೆಗಳನ್ನು ನೀಡ ಲಾ ಗುವುದು. ಮಾ.3ರಂದು ನಗರಕ್ಕೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು, ಸಚಿವರು ಬಂದು ಗುಡಿಸ ಲುರಹಿತ ನಗರಕ್ಕೆ ಚಾಲನೆ ನೀಡಲಿದ್ದಾರೆ~ ಎಂದರು.`ಮೈಸೂರು ನಗರವನ್ನು ಸುಂದರಗೊಳಿಸುವ ನಿಟ್ಟಿನಲ್ಲಿ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗುತ್ತಿದೆ. ಈಗಾಗಲೇ ಇದಕ್ಕೆ ಚಾಲನೆ ನೀಡಲಾಗಿದ್ದು, ಕಾರ್ಯಾಚರಣೆಯನ್ನು ಮುಂದುವರೆಸಲಾಗು ವುದು. ಮುಂದಿನ ಚುನಾವಣೆಯಲ್ಲಿ ಫ್ಲೆಕ್ಸ್‌ಗಳನ್ನು ಯಾರೂ ಹಾಕುವಂತಿಲ್ಲ. ಫ್ಲೆಕ್ಸ್‌ರಹಿತ ನಗರವಾಗಿ ಮಾರ್ಪಡಿಸಲಾಗುವುದು~ ಎಂದು ತಿಳಿಸಿದರು.`ಜೆಎಸ್‌ಎಸ್ 2ನೇ ಹಂತದ ಬಡಾವಣೆಯಲ್ಲಿ ಎಲ್ಲ ಸೌಕರ್ಯಗಳನ್ನು ಒದಗಿಸಲಾಗಿದೆ. ನಿವೇಶನ ಪಡೆದವರು ಖಾತೆ ಮಾಡಿಸಿಕೊಳ್ಳಲು ಕಚೇರಿಗೆ ಅಲೆದಾಡಬೇಕಾದ ಅವಶ್ಯಕತೆ ಇಲ್ಲ. ಆನ್‌ಲೈನ್ ಮೂಲಕವೇ ಅರ್ಜಿಗಳನ್ನು ಭರ್ತಿ ಮಾಡಿ ಶುಲ್ಕ ಕಟ್ಟಬಹುದು. 6-7 ತಿಂಗಳಲ್ಲಿ ಈ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಚಾಲನೆಗೊಳ್ಳಲಿದೆ~ ಎಂದರು.ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ, `ಮುಡಾ ನಗರದಲ್ಲಿ ಅನೇಕ ಬಡಾವಣೆಗಳನ್ನು ಅಭಿವೃದ್ಧಿ ಮಾಡುತ್ತಿದೆ. ಇನ್ನು ಒಂದು ಬಡಾವಣೆ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರ ಒಪ್ಪಿಗೆ ಸೂಚಿಸಿದರೆ 15 ಸಾವಿರ ನಿವೇಶನಗಳು ಬರುವ ಸಾಧ್ಯತೆ ಇದೆ~ ಎಂದು ಹೇಳಿದರು.ಇಎಸ್‌ಎಸ್ ಅಂಡ್ ಇಎಸ್‌ಎಸ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್‌ನ ಡೆವಲಪರ್ ಶ್ರೀಕಾಂತ ದಾಸ್ ಮಾತನಾಡಿ, `2ನೇ ಹಂತದ ಬಡಾವಣೆ ಅಭಿವೃದ್ಧಿ ಮಾಡಲು 7 ತಿಂಗಳು ಮಾತ್ರ ಕಾಲಾವ ಕಾಶ ಸಿಕ್ಕಿತು. ಹಾಗಾಗಿ ಪೂರ್ಣ ಪ್ರಮಾಣದಲ್ಲಿ ಕೆಲಸ ಪೂರೈಸಲಾಗಲಿಲ್ಲ. ಕೆಲಸ ಬಾಕಿ ಇದೆ. ಆದರೆ ಉತ್ತಮ ಬಡಾವಣೆ ನಿರ್ಮಿಸಿದ್ದೇನೆ ಎಂಬ ಸಂತೃಪ್ತಿ ಇದೆ~ ಎಂದರು.ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ತೋಂಟದಾರ್ಯ, ಮುಡಾ ಆಯುಕ್ತ ಡಾ.ಸಿ.ಜಿ.ಬೆಟಸೂರಮಠ, ಮೇಯರ್ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ, ಜೆಎಸ್‌ಎಸ್ ಮಹಾ ವಿದ್ಯಾಪೀಠ ಉಪ ಕಾರ್ಯದರ್ಶಿ ಎಸ್.ಪಿ. ಮಂಜು ನಾಥ್, ಶಿವರಾತ್ರೀಶ್ವರ ಮಹಾವಿದ್ಯಾ ಪೀಠದ ನೌಕರರ ಗೃಹನಿರ್ಮಾಣ ಸಂಘದ ಅಧ್ಯಕ್ಷ ರಾಜಣ್ಣ ಇದ್ದರು. ಬಡಾವಣೆಯಲ್ಲಿ ನಿರ್ಮಿಸಿರುವ ಒಟ್ಟು 1200 ನಿವೇಶನಗಳ ಪೈಕಿ ಗೋಪಿನಾಥ್ ಮತ್ತು ಸ್ವಾಮಿ ಎಂಬುವರಿಗೆ ಲಾಟರಿ ಎತ್ತುವ ಮೂಲಕ ಸಾಂಕೇತಿಕವಾಗಿ ಗಣ್ಯರು ನಿವೇಶನಗಳನ್ನುಹಂಚಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry