ವರ್ಷಾಂತ್ಯದಲ್ಲಿ ಭಾರತಕ್ಕೆ ರಷ್ಯಾ ನೌಕೆ

7

ವರ್ಷಾಂತ್ಯದಲ್ಲಿ ಭಾರತಕ್ಕೆ ರಷ್ಯಾ ನೌಕೆ

Published:
Updated:

ನವದೆಹಲಿ (ಪಿಟಿಐ): ರಷ್ಯಾದ ಬಹುನಿರೀಕ್ಷಿತ ಯುದ್ಧವಿಮಾನ ವಾಹಕ ನೌಕೆ `ಎಡ್ಮಿರಲ್ ಗೋರ್ಶ್‌ಕೋವ್' (ಐಎನ್‌ಎಸ್ ವಿಕ್ರಮಾದಿತ್ಯ) ಮುಂದಿನ ವರ್ಷಾಂತ್ಯದ ವೇಳೆಗೆ ಭಾರತೀಯ ನೌಕಾದಳಕ್ಕೆ ಸೇರ್ಪಡೆಗೊಳ್ಳಲಿದೆ ಎಂದು ನೌಕಾದಳದ ಮುಖ್ಯಸ್ಥ ಅಡ್ಮಿರಲ್ ಡಿ.ಕೆ. ಜೋಶಿ ಸೋಮವಾರ ತಿಳಿಸಿದ್ದಾರೆ.

ನೌಕಾ ವಾರ್ಷಿಕ ದಿನಾಚರಣೆಯ ನಂತರ ಈ ವಿಷಯ ತಿಳಿಸಿದ ಅವರು, ಸದ್ಯ ರಷ್ಯಾದಲ್ಲಿ ಈ ನೌಕೆಯ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ ಎಂದು ತಿಳಿಸಿದರು. ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಿಂದ ತಯಾರಿಸಿರುವ ಜಲಾಂತರ್ಗಾಮಿ ನೌಕೆ ಐಎನ್‌ಎಸ್ ಅರಿಹಂತ ಶೀಘ್ರ ಸೇವೆಗೆ ದೊರೆಯಲಿದೆ. ಈ ಎರಡು ನೌಕೆಗಳ ಸೇರ್ಪಡೆಯಿಂದ ಭಾರತೀಯ ನೌಕಾದಳ ಮತ್ತಷ್ಟು ಬಲಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry