ವರ್ಷಾ ಆತ್ಮಹತ್ಯೆಗೆ ಬಳಸಿದ್ದು : ಆಶಾ ಭೋಸ್ಲೆಗೆ ಸೇರಿದ ಪಿಸ್ತೂಲ್

7

ವರ್ಷಾ ಆತ್ಮಹತ್ಯೆಗೆ ಬಳಸಿದ್ದು : ಆಶಾ ಭೋಸ್ಲೆಗೆ ಸೇರಿದ ಪಿಸ್ತೂಲ್

Published:
Updated:

 ಮುಂಬೈ (ಪಿಟಿಐ): ವರ್ಷಾ ಭೋಸ್ಲೆ ಆತ್ಮಹತ್ಯೆ ಮಾಡಿಕೊಳ್ಳಲು ಬಳಸಿಕೊಂಡ ಪಿಸ್ತೂಲ್ ಅವರ ತಾಯಿ ಆಶಾ ಭೋಸ್ಲೆಗೆ ಸೇರಿ ಸೇರಿದ್ದು. ಆಶಾ ಅವರು ಈ ಪಿಸ್ತೂಲ್ ಕಳೆದು ಹೋಗಿರುವುದಾಗಿ ಸುಮಾರು ಮೂರು ದಶಕಗಳ ಹಿಂದೆಯೇ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ವರ್ಷಾ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರೊಂದಿಗೆ ಮಂಗಳವಾರ ರಾತ್ರಿ ಕೆಲವು ಕಾಲ ಮಾತನಾಡಿದ ಆಶಾ, ತಮ್ಮ ಮಗಳು ಗುಂಡು ಹಾರಿಸಿಕೊಂಡಿರುವ ಪಿಸ್ತೂಲ್ ತಮ್ಮದೆಂದು; ಇದು ಸುಮಾರು 30 ವರ್ಷಗಳ ಹಿಂದೆ ಕಳೆದುಹೋಗಿತ್ತು ಎಂದೂ ತಿಳಿಸಿದ್ದಾರೆ.ಪೆದ್ದರ್ ರಸ್ತೆಯಲ್ಲಿನ ಮನೆಯಲ್ಲಿ ಆಶಾ ಅವರು ವಾಸವಿದ್ದಾಗ ಈ ಪಿಸ್ತೂಲ್ ನಾಪತ್ತೆಯಾಗಿತ್ತು. ಈ ಬಗ್ಗೆ ಅವರು ಸಂಬಂಧಿಸಿದ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದ್ದ ಕಾರಣ ಅವರ ಬಂದೂಕು ಪರವಾನಗಿಯನ್ನು ರದ್ದು ಮಾಡಲಾಗಿತ್ತು ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಪ್ರದೀಪ್ ಲೋನಾನಂದ್ಕರ್ ಹೇಳಿದ್ದಾರೆ.ಆಶಾ ಅವರ ಫ್ಲಾಟ್‌ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ವರ್ಷಾ ಅವರ ದೇಹವು ಸೋಮವಾರ ಪತ್ತೆ ಆಗಿತ್ತು. ಬೆಲ್ಜಿಯಂ ನಿರ್ಮಿತ 0.6 ವ್ಯಾಸದ ನಳಿಕೆಯ ಪಿಸ್ತೂಲ್‌ನಿಂದ ಅವರು ಗುಂಡುಹಾರಿಸಿಕೊಂಡಿದ್ದರು. ಈ ಪಿಸ್ತೂಲ್‌ನ ವಾರಸುದಾರರ ಬಗ್ಗೆಯೂ ಪೊಲೀಸರು ತನಿಖೆ ಕೈಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry