ಭಾನುವಾರ, ಜೂನ್ 13, 2021
25 °C

ವರ್ಷಾ ನೃತ್ಯ ಸೊಬಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವರ್ಷಾ ಜಯರಾಂ ಮತ್ತು ಗುರು ಶ್ರೀ ಕಿರಣ್ ಸುಬ್ರಹ್ಮಣ್ಯ ಅವರು ಇಸ್ಕಾನ್‌ನ ಶ್ರೀ ಕೃಷ್ಣ ಕಲಾಕ್ಷೇತ್ರದಲ್ಲಿ ನಡೆದ  `ಶ್ರೀ ಕೃಷ್ಣ ಲೀಲಾ ನೃತ್ಯ ಸೇವಾ~ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭರತನಾಟ್ಯದ ಮೂಲಕ ರಂಜಿಸಿದರು.ವರ್ಷಾ ಜಯರಾಂ ತನ್ನ ಐದನೇ ವಯಸ್ಸಿನಿಂದ ಗುರು ಚಿತ್ರಾ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಆರಂಭಿಸಿದ್ದರು. ಮೂಡಬಿದಿರೆಯ ಆಳ್ವಾಸ್ ನುಡಿಸಿರಿ, ಹಂಪಿ ಉತ್ಸವದಲ್ಲಿ  ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದ್ದಾರೆ.ಇಸ್ಕಾನ್ ಕೃಷ್ಣ ಕಲಾಕ್ಷೇತ್ರ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಭಾರತೀಯ ಸಂಸ್ಕೃತಿ, ಪರಂಪರೆಗೆ ಹೆಚ್ಚು ಒತ್ತು ನೀಡುವುದು ಈ ಕಾರ್ಯಕ್ರಮದ ಆಶಯ.ವರ್ಷವಿಡೀ ಸಂಗೀತ, ಗಾಯನ ಹಾಗೂ ನೃತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಈ ಸಂಸ್ಥೆಯ ಉದ್ದೇಶವಾಗಿದೆ. ಕಲಾರಾಧನೆಯ ಮೂಲಕ ದೇವರ ಉಪಾಸನೆ ಮಾಡುವುದು ಇಸ್ಕಾನ್ ಸಂಸ್ಥೆಯ ಗುರಿಯಾಗಿದೆ. ಈ ನಿಟ್ಟಿನಲ್ಲಿ ಕೃಷ್ಣ ಕಲಾಕ್ಷೇತ್ರವು ಶ್ರಮಿಸುತ್ತಿದೆ. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.