ವರ್ಷ ಪೂರೈಸಿದ ಜಯಾ ಸರ್ಕಾರ: ರಾರಾಜಿಸಿದ ಜಾಹೀರಾತು

7

ವರ್ಷ ಪೂರೈಸಿದ ಜಯಾ ಸರ್ಕಾರ: ರಾರಾಜಿಸಿದ ಜಾಹೀರಾತು

Published:
Updated:

ಚೆನ್ನೈ (ಪಿಟಿಐ): ತಮಿಳುನಾಡಿನಲ್ಲಿ ಎಐಎಡಿಎಂಕೆ ಅಧಿಕಾರ ವಹಿಸಿಕೊಂಡು ಒಂದು ವರ್ಷ ಮುಗಿದ ಸಂದರ್ಭದಲ್ಲಿ ಬುಧವಾರ ರಾಜ್ಯದ ಎಲ್ಲ ಪತ್ರಿಕೆಗಳಲ್ಲೂ ಸರ್ಕಾರದ ಸಾಧನೆ ಬಿಂಬಿಸಿಕೊಳ್ಳುವ ಜಾಹೀರಾತು ರಾರಾಜಿಸಿದವು.

ರಾಜಕೀಯ ವ್ಯಕ್ತಿಯೊಬ್ಬರ ವರ್ಚಸ್ಸು ಬಿಂಬಿಸಲು ಮಾಡಿರುವ ಸಾರ್ವಜನಿಕ ಹಣದ ಪೋಲು ಇದು ಎಂದು ಸಿಪಿಐ ಟೀಕಿಸಿದೆ.

ಚೆನ್ನೈ ಮತ್ತು ದೆಹಲಿಯಿಂದ ಪ್ರಕಟವಾಗುವ ಬಹುತೇಕ ಎಲ್ಲ ರಾಷ್ಟ್ರೀಯ ಇಂಗ್ಲಿಷ್ ದೈನಿಕಗಳ ಆವೃತ್ತಿಗಳಲ್ಲಿ ನಾಲ್ಕು ಪುಟಗಳ ಜಾಹೀರಾತು ನೀಡಲಾಗಿತ್ತು. ಜಯಾ ಅವರ ಪೂರ್ಣ ಅಳತೆಯ ಚಿತ್ರವುಳ್ಳ ಈ  `ಜಾಕೆಟ್~ ಜಾಹೀರಾತನ್ನು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕದ ನಿರ್ದೇಶಕರ ಕಚೇರಿ ಬಿಡುಗಡೆ ಮಾಡಿತ್ತು (ಮುಖಪುಟ ಹಾಗೂ ಕೊನೆಯ ಪುಟಗಳನ್ನು ಸುತ್ತುವರಿದು ನೀಡಲಾಗುವ ಜಾಹೀರಾತಿಗೆ ಜಾಕೆಟ್ ಜಾಹೀರಾತು ಎನ್ನಲಾಗುತ್ತದೆ).

ಕೆಲವು ತಮಿಳು ಪತ್ರಿಕೆಗಳಿಗೆ ಕೂಡ ಈ ಜಾಹೀರಾತು ನೀಡಲಾಗಿತ್ತು. ಆದರೆ ಡಿಎಂಕೆ ಕುಟುಂಬ ಸದಸ್ಯರ ಒಡೆತನದ ಪತ್ರಿಕೆಗಳಿಗೆ ಈ ಜಾಹೀರಾತು ನೀಡಿರಲಿಲ್ಲ.

ಈ ಜಾಹೀರಾತಿಗಾಗಿ ಮಾಡಿರುವ ವೆಚ್ಚ ಎಷ್ಟೆಂಬುದನ್ನು ಸರ್ಕಾರ ಬಹಿರಂಗಗೊಳಿಸಿಲ್ಲ. ಆದರೆ ಒಂದು ಅಂದಾಜಿನ ಪ್ರಕಾರ, ಇದಕ್ಕೆ 15ರಿಂದ 25 ಕೋಟಿ ರೂಪಾಯಿ ಖರ್ಚಾಗಿರಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry