ಸೋಮವಾರ, ಡಿಸೆಂಬರ್ 16, 2019
18 °C

ವಲಸಿಗರಿಗೆ ಮನ್ನಣೆ ಬೇಡ-ಆಗ್ರಹ

.ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕನಾಯಕನಹಳ್ಳಿ: ಪಕ್ಷದ ಕಾರ್ಯಕರ್ತರಾಗಿ ದುಡಿಯದವರಿಗೆ, ಬೇರೆ ಪಕ್ಷದಿಂದ ವಲಸೆ ಬಂದವರಿಗೆ ಟಿಕೆಟ್ ಕೊಡಬಾರದು ಎಂದು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು ಆಗ್ರಹಿಸಿದರು.ಪಟ್ಟಣದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಎಸ್.ಎನ್.ಸತೀಶ್ ಎಂಬುವರು ಕಾಂಗ್ರೆಸ್‌ನ ಅಭ್ಯರ್ಥಿ ತಾನೇ ಎಂದು ಹೇಳುತ್ತಾ ಪ್ರಚಾರ ಶುರು ಮಾಡಿದ್ದು, ಇವರು ಪಕ್ಷಕ್ಕೆ ಕಾರ್ಯಕರ್ತನಾಗಿ ದುಡಿದೇ ಇಲ್ಲ. ಈ ಹಿಂದೆ ನಡೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದು, ಕೇವಲ ಎರಡು ತಿಂಗಳ ಹಿಂದಷ್ಟೇ ಕಾಂಗ್ರೆಸ್ ಸೇರಿದ್ದು, ಇವರಿಗೆ ಹೈಕಮಾಂಡ್ ಟಿಕೆಟ್ ನೀಡುವ ಒಲವು ತೋರುತ್ತಿದೆ ಎಂಬ ಗುಮಾನಿಯಿದ್ದು, ಕಾರ್ಯಕರ್ತರು ಗಲಿಬಿಲಿಗೊಂಡಿದ್ದಾರೆ ಎಂದರು.ಜಿಲ್ಲಾ ಕಾಂಗ್ರೆಸ್ ಕಮಿಟಿ ಸದಸ್ಯ ರಮೇಶ್‌ಕುಮಾರ್ ಮಾತನಾಡಿ, ಯುವ ಮುಖಂಡ ಸಂತೋಷ್‌ಜಯಚಂದ್ರ ಅವರಿಗೆ ಟಿಕೆಟ್ ನೀಡಿ, ಇಲ್ಲವಾದರೆ ಪಕ್ಷಕ್ಕೆ ದುಡಿದಿರುವ ಯಾವುದೇ       ಕಾರ್ಯಕರ್ತರಿಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು.ಈ ಮಧ್ಯೆ ಕಾರ್ಯಕರ್ತರೊಬ್ಬರು ಮಾತನಾಡುವ ಭರದಲ್ಲಿ ಸಂತೋಷ್ ಜಯಚಂದ್ರ ಅವರಿಗೆ ಟಿಕೆಟ್ ದೊರೆಯದಿದ್ದಲ್ಲಿ ಅವರನ್ನು ಸ್ವತಂತ್ರ ಅಭ್ಯರ್ಥಿಯಾಗಿ ಗೆಲ್ಲಿಸಿಕೊಳ್ಳುತ್ತೇವೆ ಎಂದಾಗ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.ಕೆಪಿಸಿಸಿ ಸದಸ್ಯ ಸೀಮೆಎಣ್ಣೆ ಕೃಷ್ಣಯ್ಯ ಮಾತನಾಡಿದರು. ಈ ಸಂದರ್ಭ ಪುರಸಭೆ ಸದಸ್ಯ ಸಿ.ಪಿ.ಮಹೇಶ್, ತಾಲ್ಲೂಕು ಪಂಚಾಯಿತಿ ಸದಸ್ಯ ಮುಕುಂದಪ್ಪ, ಮುಖಂಡರಾದ ಕೃಷ್ಣೇಗೌಡ, ಗೋವಿಂದರಾಜು, ಚನ್ನಬಸಪ್ಪ, ಶೇಷನಾಯ್ಕ, ವಾಸುದೇವ್ ಸೇರಿದಂತೆ ಅಪಾರ ಸಂಖ್ಯೆಯ ಕಾರ್ಯಕರ್ತರು ಹಾಜರಿದ್ದರು.

ಪ್ರತಿಕ್ರಿಯಿಸಿ (+)