ವಲಸೆ ಮಸೂದೆ: ಮೂರ್ತಿ ಅಭಿಮತ

7

ವಲಸೆ ಮಸೂದೆ: ಮೂರ್ತಿ ಅಭಿಮತ

Published:
Updated:

ಮುಂಬೈ(ಪಿಟಿಐ): `ಭಾರತೀಯ ಐ.ಟಿ ಕಂಪೆನಿಗಳು ತಮ್ಮ ಸಾಗರೋತ್ತರ ವಹಿವಾಟಿಗೆ ಸ್ಥಳೀಯರನ್ನೇ ಹೆಚ್ಚು ನೇಮಕ ಮಾಡಿಕೊಳ್ಳಬೇಕು' ಎಂದು ಇನ್ಫೊಸಿಸ್ ಅಧ್ಯಕ್ಷ ಎನ್.ಆರ್.ನಾರಾಯಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.ಅಮೆರಿಕದ ವಲಸೆ ನೀತಿ ಸುಧಾರಣೆ ಮಸೂದೆ ಕುರಿತು ಪ್ರತಿಕ್ರಿಯಿಸಿರುವ ಅವರು, `ನಾನು ವೀಸಾ ಆಧಾರಿತ ಕಂಪೆನಿಗಳ ದೊಡ್ಡ ಅಭಿಮಾನಿಯೇನೂ ಅಲ್ಲ. ಯಾವುದೇ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಇದ್ದಾಗ ನಿರುದ್ಯೋಗ ಪ್ರಮಾಣ ಹೆಚ್ಚಿರುತ್ತದೆ. ಆಗ ವಿದೇಶಿಯರಿಗೆ ಉದ್ಯೋಗ ನೀಡದಿರುವುದನ್ನು ಪ್ರೊತ್ಸಾಹಿಸದಿರುವ  ನಿರ್ಧಾರ ಕೈಗೊಳ್ಳುವುದು ಸಹಜ' ಎಂದು ಹೇಳಿದ್ದಾರೆ.ಆದರೆ, ಅಮೆರಿಕದ ವಲಸೆ ನೀತಿ ಸುಧಾರಣೆ ಮಸೂದೆಯು ದೇಶೀಯ ಐ.ಟಿ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry