ಬುಧವಾರ, ನವೆಂಬರ್ 20, 2019
22 °C

ವಲಸೆ ಹಕ್ಕಿಗಳ ಆಟ

Published:
Updated:

ಈಗ ರಾಜ್ಯದೆಲ್ಲೆಡೆ ಚುನಾವಣೆ ಕಾವು ಏರುತ್ತಿದೆ. ಮತದಾರನನ್ನು ಸೆಳೆದು ಅಧಿಕಾರ ಗಿಟ್ಟಿಸುವ ಎಲ್ಲಾ ಆಟಗಳು ಆರಂಭಗೊಂಡಿವೆ. ಆಹಾರ ಅರಸಿ ವಲಸೆ ಬರುವ ಹಕ್ಕಿಗಳನ್ನು ನಾವು ನೋಡಿದ್ದೇವೆ. ಆದರೆ,  ಜನ ಸೇವೆ ಮಾಡಲು ಕಾತರರಾದ ಹಕ್ಕಿಗಳು ಟಿಕೆಟ್ ಸಿಗದೆ ತಮ್ಮ ನಿಷ್ಠೆ ಸಿದ್ಧಾಂತಗಳನ್ನು ಬದಿಗಿರಿಸಿ ಟಿಕೆಟ್ ನೀಡುವ ಪಕ್ಷಕ್ಕೆ ವಲಸೆ ಬರುತ್ತಲಿವೆ.

ಕೆಲವು ಪಕ್ಷಿಗಳಿಗೆ ರತ್ನಗಂಬಳಿಯ ಸ್ವಾಗತ ಸಿಕ್ಕರೆ ಇನ್ನು ಕೆಲವಕ್ಕೆ ತ್ರಿಶಂಕು ಸ್ಥಿತಿ. ಅಧಿಕಾರಕ್ಕಾಗಿ ಹಪಾಹಪಿಸಿ ಬಂದಿರುವ ಈ ಹಕ್ಕಿಗಳಿಗೆ  ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವ ಮೂಲಕ ನಮ್ಮ ಪ್ರಜ್ಞಾವಂತಿಕೆಯನ್ನು ಅಭಿವ್ಯಕ್ತಿಸುವ ಸುವರ್ಣಾವಕಾಶ ನಮಗೆ ಲಭಿಸಲಿದೆ. ಆಸೆ ಆಮಿಷಕ್ಕೆ ಬಲಿಯಾಗದೆ,  ತನ್ಮೂಲಕ ಪ್ರಜಾಪ್ರಭುತ್ವದ ಬೇರುಗಳನ್ನು ಇನ್ನಷ್ಟು ಆಳಕ್ಕೆ ಇಳಿಯುವಂತೆ ಮಾಡುವ ಗುರುತರ ಹೊಣೆ ನಮ್ಮದು.

ಪ್ರತಿಕ್ರಿಯಿಸಿ (+)