ವಸಂತ ಮೇಳ

7

ವಸಂತ ಮೇಳ

Published:
Updated:

ನಾಲ್ಕು ದಶಕಗಳಿಂದ ಬಡವರ್ಗದ ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗಾಗಿ ದುಡಿಯುತ್ತಿರುವ ವಸಂತನಗರ ಮಹಿಳಾ ಕಲ್ಯಾಣ ಸಂಸ್ಥೆ ಶನಿವಾರ ಮತ್ತು ಭಾನುವಾರ ‘ವಸಂತ ಮೇಳ’ ಏರ್ಪಡಿಸಿದೆ. ಆ ಬಡಾವಣೆ ಮತ್ತು ಸುತ್ತಲಿನ ಬಡಾವಣೆಯ ಮಹಿಳೆಯರು ಆರೋಗ್ಯಕರ ಶಾಪಿಂಗ್ ಮಾಡಲು ಇದೊಂದು ಸದವಕಾಶ.ಮೇಳದಲ್ಲಿ ಮನೆಮಂದಿಗೆಲ್ಲ ಕೊಂಡೊಯ್ಯುವಂತಹ ಸಾವಯವ ಹಣ್ಣು ಮತ್ತು ತರಕಾರಿಗಳ ಪ್ರದರ್ಶನವಿದೆ. ಆಯುರ್ವೇದ ಸೌಂದರ್ಯ ಪ್ರಸಾದನಗಳ ಮಾರಾಟ ಮಳಿಗೆ ಇರುತ್ತದೆ. ಅಡುಗೆಮನೆಯಲ್ಲಿ ಬಳಸಿ ಹಳೆಯದಾದ ಮಿಕ್ಸಿ, ತವಾ, ಪಾತ್ರೆಗಳನ್ನು ಆಕರ್ಷಕ ದರದಲ್ಲಿ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಲಿಡ್ಕರ್‌ನ ಪಾದರಕ್ಷೆ, ಬ್ಯಾಗ್‌ಗಳು ಇರುತ್ತವೆ. ಸೀರೆ ಮಳಿಗೆಯಲ್ಲಿ ಬರೀ ಸೀರೆ ಮಾತ್ರವಲ್ಲ, ಅದರ ಜತೆ ಮ್ಯಾಚಿಂಗ್ ಆಭರಣಗಳು ದೊರಕಲಿವೆ.ಎಂ.ಎಸ್. ರಾಮಯ್ಯ ಕಾಲೇಜಿನ ತಜ್ಞ ವೈದ್ಯರು ಆಯುರ್ವೇದ ಮತ್ತು ಅಲೋಪತಿ ವಿಧಾನದಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಮಹಿಳೆಯರಿಗೆ ಟಿಪ್ಸ್ ನೀಡಲಿದ್ದಾರೆ. ಮೇಳಕ್ಕೆ ಬಂದವರ ಬಾಯಿ ರುಚಿ ತಣಿಸಲು ವೈವಿಧ್ಯಮಯ ಆಹಾರ ಮೇಳವೂ ಇರುತ್ತದೆ.ಸ್ಥಳ: ಭಾರತೀಯ ಪಬ್ಲಿಕ್ ಸ್ಕೂಲ್, 7ನೇ ಅಡ್ಡರಸ್ತೆ, ವಸಂತನಗರ ಹಳೆಯ ಅಂಚೆ ಕಚೇರಿ ಬಳಿ, ವಸಂತನಗರ. ಮಾಹಿತಿಗೆ: 94496 69263, 98452 36967

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry