ಮಂಗಳವಾರ, ಜೂನ್ 15, 2021
20 °C

ವಸತಿಗೆ ಅರ್ಹರ ಆಯ್ಕೆ: ಶಾಸಕರ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಗಾರಪೇಟೆ: ವಸತಿ ಯೋಜನೆಗಳಲ್ಲಿ ತಯಾರು ಮಾಡಲಾಗಿರುವ ಪಟ್ಟಿಗಳಲ್ಲಿ ವ್ಯತ್ಯಾಸಗಳಿದ್ದರೆ ಸರಿಪಡಿಸಿ, ಅರ್ಹ ಫಲಾನುಭವಿಗಳನ್ನೇ ಆಯ್ಕೆ ಮಾಡಲಾಗುವುದು. ಈ ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಯತ್ನಿಸಬಾರದು ಎಂದು ಶಾಸಕ ಎಂ.ನಾರಾಯಣಸ್ವಾಮಿ ಹೇಳಿದರು.ಇಲ್ಲಿಗೆ ಸಮೀಪದ ಮಾಗೇರಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ತಾಲ್ಲೂಕಿಗೆ ಈಗಾಗಲೇ 10 ಸಾವಿರ ಮನೆ ಬಂದಿವೆ. ಸಾಲದಿದ್ದರೆ ಸರ್ಕಾರದಿಂದ ಇನ್ನೂ 5 ಸಾವಿರ ಮನೆ ಮಂಜೂರು ಮಾಡಿಸಲು ಸಿದ್ಧ. ಇಂಥ ಮನೆಗಳಿಗೆ ಫಲಾನುಭವಿಗಳನ್ನು ಗ್ರಾಮಸಭೆಗಳಿಂದ ಆಯ್ಕೆ ಮಾಡಲಾಗಿದೆ.ನಾನೇ ಖುದ್ದಾಗಿ ಗ್ರಾಮಸಭೆಗಳಲ್ಲಿ ಭಾಗವಹಿಸಿದ್ದೆ. ಆದರೆ ರಾಜಕೀಯ ಉದ್ದೇಶದಿಂದ ಇಡೀ ಪಟ್ಟಿಯನ್ನೇ ರದ್ದುಗೊಳಿಸಿ ಎಂದು ಬೇಡಿಕೆ ಇಡುತ್ತಿರುವುದು ಸಾಧುವಲ್ಲ ಎಂದರು.ವಸತಿ ಯೋಜನೆಯಲ್ಲಿ ಪಟ್ಟಿ ತಯಾರಿಸುವಾಗ ಬಡತನವೊಂದನ್ನೇ ಮಾನದಂಡವನ್ನಾಗಿ ಇಟ್ಟುಕೊಳ್ಳಲಾಗಿದೆ. ಪಕ್ಷಾತೀತವಾಗಿ ಮತ್ತು ಜಾತ್ಯತೀತವಾಗಿ ಪಟ್ಟಿ ತಯಾರಿಸಲಾಗಿದೆ. ಆಕಸ್ಮಾತ್ ಅರ್ಹ ಫಲಾನುಭವಿಗಳ ಹೆಸರು ಬಿಟ್ಟು ಹೋಗಿದ್ದರೆ ಅಂತಹವರ ಹೆಸರನ್ನು ನೀಡುವಂತೆ ಕಾಂಗ್ರೆಸ್‌ನ ಕೆಲವು ಮುಖಂಡರಿಗೆ ತಿಳಿಸಿದ್ದೆ.

 

ಆದರೆ ಕೆಲ ಕಾಂಗ್ರೆಸ್ ನಾಯಕರು ಅನಗತ್ಯ ಗೊಂದಲ ಎಬ್ಬಿಸಿ ರಾಜಕೀಯ ಪ್ರಯೋಜನ ಪಡೆಯಲು ಹೊರಟಿದ್ದಾರೆ ಎಂದು ನಾರಾಯಣಸ್ವಾಮಿ ದೂರಿದರು.ಈಗಲೂ ಕಾಲ ಮಿಂಚಿಲ್ಲ. ಅರ್ಹ ಫಲಾನುಭವಿಗಳ ಪಟ್ಟಿ ಒದಗಿಸಿ. ಯೋಜನೆಯಡಿ ಎಲ್ಲರಿಗೂ ಮನೆ ಒದಗಿಸೋಣ ಎಂದು ಭರವಸೆ ನೀಡಿದರು.ತಾ.ಪಂ. ಇಒ ಶ್ರೀನಿವಾಸ್ ಮಾತನಾಡಿ, ಕಾಂಗ್ರೆಸ್ ಪಕ್ಷದವರು ಈಚೆಗೆ ಪ್ರತಿಭಟನೆ ಮಾಡಿದಾಗ ಜಿ.ಪಂ. ಉಪ ಕಾರ್ಯದರ್ಶಿ ಕ್ಷಮೆ ಕೇಳಿದ್ದು ಬೇರೆ ಕಾರಣಕ್ಕಾಗಿ ಹೊರತು ಪಟ್ಟಿಯಲ್ಲಿ ಲೋಪದೋಷವಿದೆ ಎಂಬ ಕಾರಣಕ್ಕಾಗಿ ಅಲ್ಲ ಎಂದು ಸ್ಪಷ್ಟ ಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.