ವಸತಿನಿಲಯ ಸಾಮಗ್ರಿ ಖರೀದಿಯಲ್ಲಿ ಅಕ್ರಮ –ಆರೋಪ

7

ವಸತಿನಿಲಯ ಸಾಮಗ್ರಿ ಖರೀದಿಯಲ್ಲಿ ಅಕ್ರಮ –ಆರೋಪ

Published:
Updated:

ರಾಮನಗರ:  ‘ಸಮಾಜ ಕಲ್ಯಾಣ ಇಲಾಖೆಯು ಕನಕಪುರ ತಾಲ್ಲೂಕಿನಲ್ಲಿ ನಡೆಸುತ್ತಿರುವ ವಸತಿ ಶಾಲೆ, ವಿದ್ಯಾರ್ಥಿನಿಲಯಗಳಲ್ಲಿನ ವಿವಿಧ ವಸ್ತುಗಳ ಖರೀದಿ ವಿಷಯದಲ್ಲಿ 10ರಿಂದ 13 ಕೋಟಿ ರೂಪಾ ಯಿ ಅವ್ಯವಹಾರ ನಡೆದಿದ್ದು, ಇದಕ್ಕೆ ತಾಲ್ಲೂಕು ಹಾಗೂ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅವರೇ ನೇರೆ ಹೊಣೆಗಾರರಾಗಿದ್ದಾರೆ.

ಅವರನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಿ, ಸಮಗ್ರ ತನಿಖೆ ನಡೆಸಬೇಕು’ ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ್‌ ಆಗ್ರಹಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, 'ಎಸ್ಸಿ– ಎಸ್ಟಿ ಸಮುದಾ ಯದ ಮಕ್ಕಳ ಏಳಿಗೆಗಾಗಿ ಬಳಸಬೇಕಾದ ಕೋಟ್ಯಂತರ ರೂಪಾಯಿ ಸರ್ಕಾರಿ ಹಣವನ್ನು ನಿಯಮ ಬಾಹಿರವಾಗಿ ಲೂಟಿ ಮಾಡಿರುವ ಈ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು’ ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.‘ಈ ಪ್ರಕರಣದಲ್ಲಿ ಕನಕಪುರದ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಕಚೇರಿಯ ವ್ಯವಸ್ಥಾಪಕ  ಹಾಗೂ ಇತರ ಸಿಬ್ಬಂದಿ ವರ್ಗದ ಪಾತ್ರವೂ ಪ್ರಮುಖವಾಗಿದ್ದು, ಸಮಗ್ರ ತನಿಖೆ ನಡೆದರೆ ಎಲ್ಲ ಬಹಿರಂಗವಾಗುತ್ತದೆ’ ಎಂದು ಅವರು ಮನವಿ ಮಾಡಿದರು. ‘ತಾಲ್ಲೂಕಿನ 2008–09ನೇ ಸಾಲಿನಿಂದ 2012–13ನೇ ಸಾಲಿ ನವರೆಗೆ ನಡೆದಿರುವ ಹಗರಣ ಇದಾಗಿದೆ.

ವಿದ್ಯಾರ್ಥಿನಿಲಯಗಳಿಗೆ ಮೂಲ ಸೌಕರ್ಯ ಕಲ್ಪಿಸಲು ರೂ 25 ಲಕ್ಷ, ಸೋಲಾರ್‌ ವಾಟರ್‌ ಹೀಟರ್‌ ಮತ್ತು ಕಂಪ್ಯೂಟರ್‌ ಖರೀದಿಗೆ ರೂ 30 ಲಕ್ಷ, ವಿದ್ಯುತ್‌ ದುರಸ್ತಿಗೆ ರೂ 10 ಲಕ್ಷ, ಕೊಳವೆ ಬಾವಿ ಕೊರೆಸಲು ರೂ 14 ಲಕ್ಷ, ಗ್ಯಾಸ್‌ ಸ್ಟವ್‌ ಅಳವಡಿಕೆ ಮತ್ತು ದುರಸ್ತಿಗೆ ರೂ 18 ಲಕ್ಷ, ಹತ್ತಿ ಹಾಸಿಗೆ ಹೊಲೆಸಲು ರೂ 14 ಲಕ್ಷ, ವಿದ್ಯಾರ್ಥಿನಿಲಯಗಳ ಕಟ್ಟಡ ದುರಸ್ತಿಗೆ ರೂ 3.50 ಕೋಟಿ, ’ಎಮರ್ಜೆನ್ಸಿ’ ವಿದ್ಯುತ್‌ ದೀಪ ಖರೀದಿಸಲು ರೂ 5 ಲಕ್ಷ, ಕಂಪ್ಯೂಟರ್‌ ಖರೀದಿಗೆ ರೂ 20 ಲಕ್ಷ, ಸಮವಸ್ತ್ರ  ಹೊಲಿಸಲು ರೂ 9 ಲಕ್ಷ, ಹೀಗೆ ವಿವಿಧ ಬಗೆಯಲ್ಲಿ ಹಣ ಬಿಡುಗಡೆ ಮಾಡಿಸಿಕೊಂಡು ಮನ ಬಂದಂತೆ ಖರ್ಚು ಮಾಡಿದ್ದಾರೆ’ ಎಂದು ದೂರಿದರು.‘ಸರ್ಕಾರಿ ನಿಯಮವನ್ನು ಗಾಳಿಗೆ ತೂರಿ, ತನ್ನ ಸಂಬಂಧಿ ಅಥವಾ ಬೇಕಾದವರಿಗೆ ಗುತ್ತಿಗೆ ನೀಡಿ ಸ್ವಜನ ಪಕ್ಷಪಾತವನ್ನು ಅಧಿಕಾರಿಗಳು ಮಾಡಿದ್ದಾರೆ. ಕನಕಪುರದಲ್ಲಿಯೇ ಇಲ್ಲದ ಗುತ್ತಿಗೆ ಕಂಪೆನಿಗಳಿಂದ ವಿವಿಧ ಪದಾರ್ಥಗಳನ್ನು ಖರೀದಿಸಲಾಗಿದೆ. ಇದರಲ್ಲಿ ಒಂದೆರಡು ಗುತ್ತಿಗೆ ಕಂಪೆನಿಗಳು ವಾರ್ಡನ್‌ ಸಂಬಂಧಿಕರದ್ದಾಗಿವೆ ಎಂದು ಹೇಳಲಾಗುತ್ತಿದೆ’ ಎಂದು ಅವರು ಆರೋಪಿಸಿದರು.‘ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ವಸ್ತುಗಳನ್ನು ಖರೀದಿಸುವ ಸಂದರ್ಭ ದಲ್ಲಿ ಅದಕ್ಕೆ ಜಿಲ್ಲಾ ಪಂಚಾಯಿತಿಯಿಂದ ಆಡಳಿತಾತ್ಮಕ ಅನುಮೋದನೆ ಪಡೆಯ ಬೇಕು ಎಂಬ ನಿಯಮ ಇದೆ. ಆದರೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಈ ನಿಯಮ ಪಾಲಿಸದೆ, ಬಿಲ್ಲುಗಳನ್ನು ತಯಾರಿಸಿ ಹಣ ಡ್ರಾ ಮಾಡಿದ್ದಾರೆ’ ಎಂದು ಅವರು ದೂರಿದರು.

’ಅಲ್ಲದೆ ಯಾವುದೇ ಖರೀದಿ ವಿಷಯದಲ್ಲಿಯೂ ಟೆಂಡರ್‌ ಕರೆದಿಲ್ಲ. ಲಕ್ಷಕ್ಕಿಂತ ಹೆಚ್ಚು ಮೊತ್ತದ ವಸ್ತು ಖರೀದಿಸುವಾಗ ಕಡ್ಡಾಯವಾಗಿ ಟೆಂಡರ್‌ ಕರೆಯಬೇಕು. ಮಾಧ್ಯಮಗಳಲ್ಲಿ ಅದನ್ನು ಪ್ರಕಟಿಸಿ ಸಾರ್ವಜನಿಕರ ಗಮನಕ್ಕೆ ತರಬೇಕು. ಆದರೆ ಹಾಗೆ ಮಾಡದೆ, ತನಗೆ ಬೇಕಾದವರಿಗೆ ಟೆಂಡರ್‌ ನೀಡುವ ಮೂಲಕ ಸಮಾಜ ಕಲ್ಯಾಣಾಧಿಕಾರಿ ಭ್ರಷ್ಟಾಚಾರ ಎಸಗಿದ್ದಾರೆ’ ಎಂದು ಅವರು ಕಿಡಿಕಾರಿದರು.‘ಕನಕಪುರ ತಾಲ್ಲೂಕಿನ ವಸತಿ ನಿಲಯ ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ 10ರಿಂದ 13 ಕೋಟಿ ರೂಪಾಯಿ ಅವ್ಯವಹಾರ ಆಗಿದ್ದರೆ ಜಿಲ್ಲಾ ಮಟ್ಟದಲ್ಲಿ ಇನ್ನೆಷ್ಟು ಅವ್ಯವಹಾರ ಆಗಿರಬಹುದು’ ಎಂದು ಅವರು ಅನುಮಾನ ವ್ಯಕ್ತ ಪಡಿಸಿದರು. ‘ತಾವು ತಪ್ಪು ಮಾಡುತ್ತಿ ದ್ದೇವೆ ಎಂದು ಗೊತ್ತಿರುವ ಅಧಿಕಾರಿಗಳು ಮಹಾಲೇಖಪಾಲರಿಂದ ಲೆಕ್ಕ ಪರಿ ಶೋಧನೆ ಮಾಡಿಸದೆ, ಜಿಲ್ಲಾ ಪಂಚಾ ಯಿತಿಯ ಲೆಕ್ಕ ತನಿಖಾ ಅಧೀಕ್ಷಕರಿಂದ ತಪಾಸಣೆ ಮಾಡಿ ಸಿದ್ದಾರೆ. ತಮ್ಮ ತಪ್ಪುಗಳನ್ನು ಮುಚ್ಚಿ ಹಾಕಿಕೊಳ್ಳುವ ಉದ್ದೇಶದಿಂದ ಈ ಅಧಿಕಾರಿಗಳು ಈ ರೀತಿ ಮಾಡಿದ್ದಾರೆ’ ಎಂದು ಅವರು ದೂರಿದರು.‘ತಾಲ್ಲೂಕಿನಲ್ಲಿ ನಡೆದಿರುವ ಹಗ ರಣದ ಕುರಿತು ಸಾಕಷ್ಟು ಮಾಹಿತಿ ಯನ್ನು ಸಂಗ್ರಹಿಸಿದ್ದು, ಆ ದಾಖಲೆ ಗಳನ್ನು ಲೋಕಾಯುಕ್ತರಿಗೆ ನೀಡಿ, ತನಿಖೆ ಕೈಗೊಳ್ಳುವಂತೆ ದೂರು ನೀಡಲಾ ಗುವುದು. ಅಲ್ಲದೆ ಈ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿಯೂ ಪ್ರಕ ರಣದ ದಾಖಲಿಸಿ ಹೋರಾಟ ನಡೆಸ ಲಾಗುವುದು’ ಎಂದು ಅವರು ಪ್ರತಿ ಕ್ರಿಯಿಸಿದರು.

ಈ ಅಧಿಕಾರಿಗಳ ವಿರುದ್ಧ ಎಸ್ಸಿ–ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣದ ದಾಖಲಿಸಿಕೊಂಡು, ಸರ್ಕಾರ ವೇ ಸ್ವಯಂ ಪ್ರೇರಣೆಯಿಂದ ಸಿ.ಒ.ಡಿ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು. ಬಿಎಸ್‌ಪಿ ಮುಖಂಡರಾದ ಕೃಷ್ಣಪ್ಪ, ಲಿಂಗ ರಾಜು, ಶಿವಮಾದು, ಬಸವ ರಾಜು ಉಪ ಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry