ಶನಿವಾರ, ಮೇ 21, 2022
25 °C

ವಸತಿ ನಿಗಮದ ಅಧಿಕಾರಿಗಳಿಂದ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ವಾಜಪೇಯಿ ನಗರ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸುವ ಸಲುವಾಗಿ ಖರೀದಿ ಮಾಡಲಾಗಿರುವ ಜಮೀನುಗಳಿಗೆ ಮಂಗಳವಾರ ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮದ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದರು.ಹೂವಿನಾಳ ರಸ್ತೆ, ಚಿಕ್ಕಸಿಂದೋಗಿ ರಸ್ತೆ, ಹೊರತಟ್ನಾಳ ಗ್ರಾಮದ ಬಳಿ ಈ ಉದ್ದೇಶಕ್ಕಾಗಿ ಖರೀದಿ ಮಾಡಲಾಗಿರುವ ಜಮೀನುಗಳಿಗೆ ನಿಗಮದ ಪ್ರಧಾನ ವ್ಯವಸ್ಥಾಪಕ ಪರಶುರಾಮೇಗೌಡ (ಸಾಮಾಜಿಕ ಅಭಿವೃದ್ಧಿ ವಿಭಾಗ), ವಿಶೇಷಾಧಿಕಾರಿ ಉಸ್ಮಾನ್ ಪಾಷಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಯೋಜನೆ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ಆಗಿರುವ ಪ್ರಗತಿ ಕುರಿತು ಚರ್ಚೆ ನಡೆಸಲಾಯಿತು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.ತಾಲ್ಲೂಕಿನ ಹೊರತಟ್ನಾಳ ಮತ್ತು ಗುನ್ನಳ್ಳಿ ಗ್ರಾಮಗಳಲ್ಲಿ ಒಟ್ಟು 21 ಎಕರೆ 32 ಗುಂಟೆ ಜಮೀನು ಖರೀದಿಸಲಾಗಿದ್ದು, ವಿನ್ಯಾಸ ಕಾರ್ಯ ಪ್ರಗತಿಯಲ್ಲಿದೆ ಎಂದು ಸಭೆಗೆ ವಿವರಿಸಲಾಯಿತು.ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 861 ಜನ ಹಮಾಲರಿಗೆ ನಿವೇಶನ ಒದಗಿಸಲು ಹೂವಿನಾಳ ಬಳಿ 18 ಎಕರೆ 10 ಗುಂಟೆ, ಕೊಪ್ಪಳ ಜಿಲ್ಲಾ ಡ್ರೈವರ್ಸ್, ಕ್ಲೀನರ್ಸ್ ಮತ್ತು ವರ್ಕಶಾಪ್ಸ್ ವರ್ಕರ್ಸ್ ಯೂನಿಯನ್‌ನ 177 ಜನ ಫಲಾನುಭವಿಗಳಿಗೆ ನಿವೇಶನ ಒದಗಿಸಲು ಚಿಕ್ಕಸಿಂದೋಗಿ ಗ್ರಾಮದ ಬಳಿ 6 ಎಕರೆ 2 ಗುಂಟೆ ಜಮೀನನ್ನು ದಾನ ರೂಪದಲ್ಲಿ ಪಡೆಯಲಾಗಿದೆ. ನಗರ ನಿವೇಶನ ಯೋಜನೆಯಡಿ 73 ಎಕರೆ ಜಮೀನು ಖರೀದಿಸುವ ಸಲುವಾಗಿ ಅನುದಾನ ಬಿಡುಗಡೆಗಾಗಿ ನಿಗಮಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದೂ ಅಧಿಕಾರಿಗಳು ವಿವರಿಸಿದರು ಎಂದು ಇವೇ ಮೂಲಗಳು ತಿಳಿಸಿವೆ.ಗಂಗಾವತಿ ನಗರಸಭೆ ಹಾಗೂ ಕುಷ್ಟಗಿ ಪುರಸಭೆ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಲಭ್ಯವಿಲ್ಲ. ಹೀಗಾಗಿ ಖಾಸಗಿ ಜಮೀನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ. ಯಲಬುರ್ಗಾ ಪಟ್ಟಣದಲ್ಲಿ 5 ಎಕರೆ 33 ಗುಂಟೆ ಜಮೀನನ್ನು ಖರೀದಿ ಮಾಡಲಾಗಿದ್ದು ವಿನ್ಯಾಸ ಕಾರ್ಯ ಬಾಕಿ ಇದೆ ಎಂದೂ ನಿಗಮದ ಅಧಿಕಾರಿಗಳ ಗಮನಕ್ಕೆ ತರಲಾಯಿತು.ನಗರ ನಿವೇಶನ ಯೋಜನೆಯಡಿ ಪ್ರತಿ ಮನೆಯ ಮೇಲೆ ಮತ್ತೊಂದು ಮನೆ ನಿರ್ಮಿಸುವ (ಜಿ ಪ್ಲಸ್ ಒನ್) ಯೋಜನೆ ಅನುಷ್ಠಾನಗೊಳಿಸಲು ತಾತ್ವಿಕ ಅನುಮೋದನೆ ನೀಡಲಾಗಿದೆ.ಾಜ್ಯದಲ್ಲಿ ಕೊಪ್ಪಳ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಮಾತ್ರ ಇಂತಹ ಮನೆಗಳನ್ನು ನಿರ್ಮಿಸಲು ಅನುಮೋದನೆ ನೀಡಿರುವುದನ್ನು ಸ್ಮರಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.