ವಸತಿ ಬುಕ್ಕಿಂಗ್...

ಶುಕ್ರವಾರ, ಜೂಲೈ 19, 2019
23 °C

ವಸತಿ ಬುಕ್ಕಿಂಗ್...

Published:
Updated:

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ರಾಜ್ಯದ ಹಾಲಿ-ಮಾಜಿ ಮುಖ್ಯಮಂತ್ರಿಗಳ ಆಣೆ-ಪ್ರಮಾಣ ಪ್ರಸಂಗವನ್ನು ಖುದ್ದಾಗಿ ನೋಡಲು ಜನ ಆಸಕ್ತಿ ತಳೆದ್ದ್ದಿದಾರೆ.ಏತನ್ಮಧ್ಯೆ ಹಲವು ಶಾಸಕರು, ಸಚಿವರು, ಮಾಜಿ ಸಚಿವರು ಸಹ ಭಾನುವಾರ ಧರ್ಮಸ್ಥಳಕ್ಕೆ ಬರುವುದಾಗಿ ತಿಳಿಸಿದ್ದು, ದೇವಸ್ಥಾನದ ವಸತಿಗೃಹ ಮತ್ತು ಹೋಟೆಲ್‌ಗಳಲ್ಲಿ ಕೊಠಡಿಗಳಿಗೆ ಭಾರೀ ಬೇಡಿಕೆ ಉಂಟಾಗಿದೆ.ಪ್ರಮುಖ ಸುದ್ದಿ ವಾಹಿನಿಗಳು ಮತ್ತು ಪತ್ರಿಕೆಗಳ ವರದಿಗಾರರು, ಕ್ಯಾಮೆರಾಮನ್‌ಗಳು ಈ ಅಸಾಮಾನ್ಯ ಸಂದರ್ಭವನ್ನು ~ಸೆರೆ ಹಿಡಿಯಲು~ ಭಾರಿ ಸಂಖ್ಯೆಯಲ್ಲಿ ಆಗಮಿಸಲಿದ್ದು, ಜೂನ್ 26-27ರಂದು ತಂಗಲು ಕೊಠಡಿ ಕಾದಿರಿಸಲು ಅದಾಗಲೇ ತುರುಸಿನ ಯತ್ನ ನಡೆಸಿದ್ದಾರೆ. ಸೋಮವಾರ ಆಣೆ-ಪ್ರಮಾಣ ~ಪ್ರಸಂಗ~ ನಡೆದರೂ-ನಡೆಯದಿದ್ದರೂ ಅದೊಂದು ಐತಿಹಾಸಿಕ ಘಟನೆಯಾಗಿಯೇ ದಾಖಲಾಗಲಿದೆ ಎಂದೇ ಕ್ಷೇತ್ರದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry