ಭಾನುವಾರ, ಜೂನ್ 13, 2021
24 °C

ವಸತಿ ಯೋಜನೆ ಮಂಜೂರಾತಿ ಆದೇಶ ಪತ್ರ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕೋಡಿ: `ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನದಡಿ ಸುಮಾರು 5.30 ಕೋಟಿ ರೂಪಾಯಿ ವೆಚ್ಚದಲ್ಲಿ ತಾಲ್ಲೂಕಿನ ಹಿರೇಕೋಡಿ ಗ್ರಾಮಕ್ಕೆ ಕೃಷ್ಣಾ ನದಿಯಿಂದ ಶುದ್ಧೀಕರಿಸಿದ ನೀರು ಸರಬರಾಜು ವ್ಯವಸ್ಥೆ ಕಲ್ಪಿಸುವ ಯೋಜನೆ ಸಮೀಕ್ಷೆ ಕಾರ್ಯ ಮುಗಿದಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ~ ಎಂದು ಜಿ.ಪಂ. ಸದಸ್ಯ ಗಣೇಶ ಪ್ರಕಾಶ ಹುಕ್ಕೇರಿ ಹೇಳಿದರು.ಶನಿವಾರ ತಾಲ್ಲೂಕಿನ ಹಿರೇಕೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 148 ಫಲಾನುಭವಿಗಳಿಗೆ ಗ್ರಾಮೀಣ ಬಸವ ಇಂದಿರಾ ವಸತಿ ಯೋಜನೆಯಡಿ ಮನೆಗಳ ನಿರ್ಮಾಣದ ಮಂಜೂರಾತಿ ಆದೇಶ ಪ್ರತಿಗಳನ್ನು ವಿತರಿಸಿ ಅವರು ಮಾತನಾಡಿದರು.`ಮುಂಬರುವ ದಿನಗಳಲ್ಲಿ  ಸೂರಿಲ್ಲದ ಜನರಿಗೆ ವಸತಿ ಸೌಕರ್ಯ ಕಲ್ಪಿಸಲಾಗುವುದು. ಗ್ರಾಮದಲ್ಲಿ ರೂ 30 ಲಕ್ಷ ವೆಚ್ಚದಲ್ಲಿ ಡಾ.ಅಂಬೇಡ್ಕರ ಭವನ, ಜಿನಮಂದಿರ ನಿರ್ಮಾಣಕ್ಕೆ ರೂ 30 ಲಕ್ಷ,  ಬಸವನಾಳಗಡ್ಡೆಯ ಸರ್ಕಾರಿ ಪ್ರೌಢಶಾಲೆಯ ನಾಲ್ಕು ಕೊಠಡಿಗಳ ನಿರ್ಮಾಣಕ್ಕೆ ರೂ 22 ಲಕ್ಷ  ಅನುದಾನ ಒದಗಿಸಲಾಗಿದೆ. ಗಂಗಾಕಲ್ಯಾಣ ಯೋಜನೆಯಡಿ ಗ್ರಾಮದ ಎಂಟು ಜನ ಸಣ್ಣ ರೈತರಿಗೆ ಕೊಳವೆ ಬಾವಿ ಕೊರೆಯಿಸಲಾಗಿದೆ. ಗ್ರಾಮದ ಸಮಗ್ರ ಅಭಿವೃದ್ಧಿಗೆ ಇನ್ನೂ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ~ ಎಂದರು.ಬೇಸಿಗೆಯಲ್ಲಿ ಜನಜಾನುವಾರುಗಳಿಗೆ ನೀರಿನ ಸಮಸ್ಯೆ ಉಂಟಾಗದಂತೆ ಜಿಎಲ್‌ಬಿಸಿ ಕಾಲುವೆಗೆ ಹಿಡಕಲ್ ಜಲಾಶಯದಿಂದ ಮತ್ತು ಕಾಳಮ್ಮಾವಾಡಿಯಿಂದ ವೇದಗಂಗಾ ನದಿಗೆ ನೀರು ಬಿಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಗಣೇಶ ಹುಕ್ಕೇರಿ ತಿಳಿಸಿದರು.ಗ್ರಾ.ಪಂ. ಸದಸ್ಯ ಬಾಬರ ಪಟೇಲ್, ಮಹಾದೇವ ಪವಾಡಿ, ಪ್ರಹ್ಲಾದ ಪಾಂಡವ, ಕಿಲ್ಲಂದರ ದೇವನ್ನವರ ಮಾತನಾಡಿದರು. ಗ್ರಾ.ಪಂ. ಸದಸ್ಯ ಸೂರ್ಯಕಾಂತ ಚೌಗಲೆ, ಅಜೀತ ಬಾಳಿಕಾಯಿ, ಸುಕುಮಾರ ಘಾಟಗೆ, ಅನ್ಸರ ಮುಜಾವರ, ಲಕ್ಷ್ಮಣ ನಿಂಗಾಗೋಳ, ಗ್ರಾ.ಪಂ. ಪಿಡಿಒ ಕೆ.ಎಸ್.ಅಂಬಲೆ ಮುಂತಾದವರು ಉಪಸ್ಥಿತರಿದ್ದರು. ಸಿದ್ದು ಕರಡೆ ಸ್ವಾಗತಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.