ವಸತಿ ಯೋಜನೆ: ಲಾಟರಿ ಮೂಲಕ ಆಯ್ಕೆ

5
ಕಗ್ಗಲಹಳ್ಳಿ–ಮೊದಲ ಗ್ರಾಮಸಭೆ ಅಧಿಕಾರಿಗಳ ಗೈರು–ಶಿಸ್ತುಕ್ರಮದ ಎಚ್ಚರಿಕೆ

ವಸತಿ ಯೋಜನೆ: ಲಾಟರಿ ಮೂಲಕ ಆಯ್ಕೆ

Published:
Updated:

ಕನಕಪುರ: ತಾಲ್ಲೂಕಿನ ಹಾರೋಹಳ್ಳಿ ಕಗ್ಗಲಹಳ್ಳಿ ಗ್ರಾಮ ಪಂಚಾಯಿತಿಯ 2013–14ನೇ ಸಾಲಿನ ಮೊದಲನೆ ಗ್ರಾಮ ಸಭೆಯು ಪಂಚಾಯಿತಿ ಅಧ್ಯಕ್ಷ ಜಿ.ಎಸ್. ಮಲ್ಲಯ್ಯ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಪಂಚಾಯಿತಿ ಆವರಣದಲ್ಲಿ ನಡೆಯಿತು.ಗ್ರಾಮ ಸಭೆಗೂ ಮುನ್ನ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಅಧ್ಯ ಕ್ಷರು,ಉಪಾಧ್ಯಕ್ಷರ ನೇತೃತ್ವದಲ್ಲಿ ಪಂಚಾ ಯಿತಿ ಅಭಿವೃದ್ಧಿ ಅಧಿಕಾರಿಯು ವಾರ್ಡ್‌ ಸಭೆಗಳನ್ನು ನಡೆಸಿ ಗ್ರಾಮಗಳಲ್ಲಿ ಆಗಬೇ ಕಿರುವ ಅಭಿವೃದ್ಧಿ ಕೆಲಸಗಳನ್ನು ಹಾಗೂ ವಸತಿ ಯೋಜನೆಯಡಿ ಅರ್ಹ ಫಲಾನು ಭವಿಗಳನ್ನು ಪಟ್ಟಿ ಮಾಡಿ ಸಭೆಗೆ ವಿವರಿ ಸಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಅಧಿಕಾರಿ ಬಸವರಾಜು ನೋಡಲ್ ಅಧಿಕಾರಿ ಯಾಗಿ ಸಭೆಯನ್ನು ನಡೆಸಿಕೊಟ್ಟರು.ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡು ತಮ್ಮ ಇಲಾಖೆಯಿಂದ ದೊರೆಯುವ ಯೋಜ ನೆಗಳ, ಸವಲತ್ತುಗಳ ಬಗ್ಗೆ ಸಭೆಗೆ ತಿಳಿಸಿ ಕೊಟ್ಟರು.ಸಭೆಯಲ್ಲಿ ಬಸವ ವಸತಿ ಮತ್ತು ಇಂದಿರಾ ಅವಾಜ್  ವಸತಿ ಯೋಜನೆ ಯಡಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕಿರುವುದರಿಂದ ಪಂಚಾಯಿ ತಿಯಿಂದ  37 ಫಲಾನುಭವಿಗಳನ್ನು ಆಯ್ಕೆ ಮಾಡಬೇಕಿದ್ದು ಒಟ್ಟು 100 ಫಲಾನುಭವಿಗಳ ಪಟ್ಟಿಮಾಡಲಾಗಿತ್ತು. ಈ ಸಂದರ್ಭದಲ್ಲಿ ಸರ್ಕಾರದ ನಿಯಮ ದಂತೆ ಹೆಚ್ಚು ಫಲಾನುಭವಿಗಳಿದ್ದಾಗ ಲಾಟರಿ ಮೂಲಕ ಆಯ್ಕೆ ಮಾಡ ಬೇಕೆಂದು ಅಭಿವೃದ್ಧಿ ಅಧಿಕಾರಿ ವೆಂಕಟ ಕೃಷ್ಣೇಗೌಡ ಸಭೆಗೆ ತಿಳಿಸಿದರು.ಆದರೆ ಇದಕ್ಕೆ ಕೆಲವು ಗ್ರಾಮದ ಸದಸ್ಯರು ವಿರೋಧ ವ್ಯಕ್ತಪಡಿಸಿ ಲಾಟರಿ ಯಲ್ಲಿ ಒಂದೇ ಗ್ರಾಮದ ಫಲಾನು ಭವಿಗಳು ಆಯ್ಕೆಯಾದರೆ ಬೇರೆ ಗ್ರಾಮದ ಫಲಾನುಭವಿಗಳಿಗೆ ವಂಚನೆ ಯಾಗುತ್ತದೆ. ಆದ ಕಾರಣ ಪ್ರತಿ ಗ್ರಾಮ ದಲ್ಲಿ ಆದ್ಯತೆ ಮೇರೆಗೆ ನೀಡಿ ಉಳಿದಂ ತವರಿಗೆ ಮುಂದಿನ ಅವಧಿಯಲ್ಲಿ ನೀಡು ವುದು ಒಳ್ಳೆಯದು ಎಂದು ಸಭೆಗೆ ತಿಳಿಸಿದರು.ಸ್ವಲ್ಪಕಾಲ ಆಯ್ಕೆ ಪ್ರಕ್ರಿಯೆಯಲ್ಲಿ ಗೊಂದಲವಾಗಿ ಕೊನೆಯದಾಗಿ ನೋಡಲ್ ಅಧಿಕಾರಿ ಮತ್ತು ಅಭಿವೃದ್ಧಿ ಅಧಿಕಾರಿ ಸರ್ಕಾರದ ನಿರ್ದೇಶನದಂತೆ ಆಯ್ಕೆ ಮಾಡುವುದೇ ಸರಿಯೆಂದು ಫಲಾನುಭವಿಗಳ ಹೆಸರುಗಳನ್ನು ಡಬ್ಬದಲ್ಲಿ ಹಾಕಿ ಲಾಟರಿ ಮೂಲಕ ಆಯ್ಕೆ ಮಾಡಿದರು.ದೂರು: ಕಗ್ಗಲಹಳ್ಳಿ ವ್ಯಾಪ್ತಿಯಲ್ಲಿ ಕೋತಿಗಳ ಉಪಟಳ ಹೆಚ್ಚಾಗಿದ್ದು, ಬೇರೆ ಕಡೆಯಿಂದಲೂ ಕೋತಿಗಳನ್ನು ತಂದು ಇಲ್ಲಿಗೆ ಬಿಡಲಾಗುತ್ತಿದೆ. ಇದರಿಂದ ಗ್ರಾಮದಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು ಅವುಗಳನ್ನು ನಿಯಂತ್ರಿಸಲು ಪಂಚಾಯಿತಿ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಸಭೆಗೆ ದೂರು ನೀಡಿದರು.ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮದ ಎಚ್ಚರಿಕೆ

: ಗ್ರಾಮ ಸಭೆಯಲ್ಲಿ ಸಾರಿಗೆ, ಆರೋಗ್ಯ, ಆಹಾರ ಮತ್ತು ಜಿಲ್ಲಾ ಪಂಚಾಯಿತಿಯ ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿದ್ದರು. ಇದರಿಂದ ಕುಪಿತಗೊಂಡ ಪಂಚಾಯಿತಿ ಅಧ್ಯಕ್ಷ ಮಲ್ಲಪ್ಪ ಪ್ರತಿ ಭಾರಿ ನಡೆಯುವ ಸಭೆಗಳಿಗೆ ಅಧಿಕಾರಿಗಳು ಗೈರು ಹಾಜರಾಗುತ್ತಿದ್ದು ಅವರಿಂದ  ಸಭೆಗೆ ಯಾವುದೇ ಮಾಹಿತಿ ತಿಳಿಯುತ್ತಿಲ್ಲ. ಗೈರು ಹಾಜರಾದವರ ವಿರುದ್ಧ ಶಿಸ್ತುಕ್ರಮಕ್ಕೆ ಒತ್ತಾಯಿಸಿ ಸಂಬಂಧ ಪಟ್ಟವರಿಗೆ ಕಳಿಸಲು ಸಭೆಯಲ್ಲಿ ನಿರ್ಣಯ ಕೈಗೊಂಡಿರುವುದಾಗಿ ತಿಳಿಸಿ ದರು. ಪಂಚಾಯಿತಿ ಉಪಾಧ್ಯಕ್ಷೆ ಗೌರಮ್ಮ, ಸದಸ್ಯರು, ಗ್ರಾಮದ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry