ಸೋಮವಾರ, ಮೇ 25, 2020
27 °C

ವಸತಿ ರಹಿತರಿಗೆ ಸೂರು: ವರ್ತೂರ್ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಕ್ಷೇತ್ರದಲ್ಲಿ ವಸತಿ ರಹಿತರಿಗೆ ಸೂರು ಕಲ್ಪಿಸಲು ಶೀಘ್ರ ಕ್ರಮ ಕೈಗೊಳ್ಳುತ್ತೇನೆ. ಅರ್ಹ ಫಲಾನುಭವಿಗಳ ಪಟ್ಟಿಯನ್ನು ಆಯಾ ಗ್ರಾಮಗಳಲ್ಲಿರುವ ಬಡವರನ್ನು ಗುರುತಿಸಿ ತಯಾರಿಸಲಾಗುವುದು. ಈ ಬಗ್ಗೆ ವಸತಿ ಸಚಿವರ ಜೊತೆ ಚರ್ಚಿಸಿರುವೆ  ಎಂದು ಶಾಸಕ ಆರ್. ವರ್ತೂರ್ ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.ತಾಲ್ಲೂಕಿನ ಕಡಗಟ್ಟೂರಿನಲ್ಲಿ ಭಾನುವಾರ ತಮ್ಮ ಬಣದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ದೊಂಬರಾಟಕ್ಕೆ ಮಂಗಳವಾರ ಸಂಜೆಯೊಳಗೆ ತೆರೆ ಬೀಳಲಿದೆ. ಬಿಜೆಪಿ ಹೈಕಮಾಂಡ್ ನಿಯೋಗ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಯಡಿಯೂರಪ್ಪ ನಿರಪರಾಧಿ ಎಂದು ಮನವರಿಕೆ ಮಾಡಿಕೊಡಲಿದೆ ಎಂದು ತಿಳಿಸಿದರು.ವಿಧಾನಸಭೆ ವಿಸರ್ಜನೆಯಾಗುವುದಿಲ್ಲ, ಮುಖ್ಯಮಂತ್ರಿಗಳು ಬದಲಾವಣೆಯಾಗುವುದಿಲ್ಲ. ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರ ಪರವಾಗಿದೆ ಎಂದರು.

ಜಿಪಂ ಸದಸ್ಯ ಜಿ. ಎಸ್. ಅಮರ್‌ನಾಥ್, ಮುಖಂಡ ಪುಟ್ಟಸ್ವಾಮಾಚಾರ್,  ಕಲ್ವಮಂಜಲಿಯ ಕೆ.ಎನ್. ಚಂದ್ರೇಗೌಡ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಕೃಷ್ಣೇಗೌಡ ಮಾತನಾಡಿದರು.ತಾಪಂ ಸದಸ್ಯರಾದ ಎನ್.ಕೆ. ನಾಗರಾಜ್, ಮುನಿಬೈರಪ್ಪ, ಭೂ ಬ್ಯಾಂಕ್ ನಿರ್ದೇಶಕ ಜಂಭಾಪುರ ವೆಂಕಟರಾಮ್, ಗ್ರಾಪಂ ಅಧ್ಯಕ್ಷರಾದ ಗಾಂಧಿ ನಾರಾಯಣಸ್ವಾಮಿ, ನರಸಿಂಹಮೂರ್ತಿ, ಸದಸ್ಯ ರಾಂಪುರ ಚಂದ್ರೇಗೌಡ, ಕಲ್ವಮಂಜಲಿ ಸೋಮಣ್ಣ, ಎಂ. ರಾಜೇಶ್, ಮುನ್ನಾಸಾಬ್, ಬೈರಂಡಹಳ್ಳಿಯ ರಾಮೇಗೌಡ, ನಾರಾಯಣಸ್ವಾಮಿ, ನಾಗರಾಜ್, ನರಸಾಪುರ ಗೋಪಿ, ವಿ.ಸಿ.ಒಡೆಯರ್, ಹುಲ್ಲಕಂಲ್ಲು ಈರಪ್ಪ, ಟಿ. ನಾರಾಯಣಸ್ವಾಮಿ, ಚಲ್ಲಹಳ್ಳಿ ನಾರಾಯಣಸ್ವಾಮಿ, ಅಪ್ಪಯ್ಯಣ್ಣ ವೇದಿಕೆಯಲ್ಲಿದ್ದರು.ಗ್ರಾಪಂ ಸದಸ್ಯ ಕೆ. ಪಿ. ದೇವರಾಜ್ ನೇತೃತ್ವದಲ್ಲಿ ಪಟೇಲ್ ನಾರಾಯಣಗೌಡ, ಡಿ.ಆರ್. ನಾಗರಾಜ್, ಶ್ರೀನಿವಾಸಗೌಡ, ಎನ್. ವಿ. ವೆಂಕಟೇಶ್, ಹನುಮಂತಪ್ಪ, ಗುರುಮೂರ್ತಿ, ಚಂದ್ರೇಗೌಢ, ವೆಂಕಟೇಶಪ್ಪ, ಶ್ರೀನಿವಾಸ್, ಜಿ. ರಮೇಶ್, ಆನಂದ್, ವೆಂಕಟಚಲಪತಿ, ತಿಮ್ಮಣ್ಣ, ಮಂಜುನಾಥ್, ಕೋದಂಡಪ್ಪ, ಕೃಷ್ಣಪ್ಪ, ಕೆ.ಎಸ್. ವೆಂಕಟೇಶಪ್ಪ ಸೇರಿದಂತೆ 40 ಕ್ಕೂ ಮಂದಿ ಇದೇ ಸಂದರ್ಭದಲ್ಲಿ ಶಾಸಕರ ಬಣಕ್ಕೆ ಸೇರ್ಪಡೆಯಾದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.