ಬುಧವಾರ, ಮೇ 18, 2022
24 °C

ವಸತಿ ಶಾಲೆ ಮುಚ್ಚಬಾರದು: ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ನಗರದ ಭೋವಿ ಕಾಲೊನಿಯಲ್ಲಿರುವ ವಸತಿ ಶಾಲೆಯನ್ನು ಮುಚ್ಚಬಾರದು ಎಂದು ಆಗ್ರಹಿಸಿ ವಿವಿಧ ತಾಲ್ಲೂಕುಗಳ ಮಕ್ಕಳು -ಪೋಷಕರು ಮಂಗಳವಾರ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಉಪಕಾರ್ಯದರ್ಶಿ ಬದನೂರು ಅವರಿಗೆ ಮನವಿ ಸಲ್ಲಿಸಿದರು.ಆದಿಮ ಶಕ್ತಿ ವಿದ್ಯಾರ್ಥಿ ವೇದಿಕೆಯ ಹೂಹಳ್ಳಿ ನಾಗರಾಜ್, ಯುವ ವಿದ್ಯಾರ್ಥಿ ಹಿತರಕ್ಷಣಾ ವೇದಿಕೆಯ ಬಿ.ಸುರೇಶಗೌಡ  ನೇತೃತ್ವದಲ್ಲಿ ಪಂಚಾಯಿತಿ ಆವರಣಕ್ಕೆ ಬಂದ ಮುಳಬಾಗಲು ತಾಲ್ಲೂಕಿನ ರಾಮಸಂದ್ರ, ನಂಗಲಿ, ಕೋಲಾರ ತಾಲ್ಲೂಕಿನ ಕೋಡಿಕಣ್ಣೂರು, ಕೋಗಿಲಹಳ್ಳಿ, ಖಾದ್ರಿಪುರ, ನಗರದ ವಿನೋಬ ನಗರ, ಅರಹಳ್ಳಿ, ಶ್ರೀನಿವಾಸಪುರ ತಾಲ್ಲೂಕಿನ ಮೇಡಿಹಟ್ಟಿ, ಕೋನಹಟ್ಟಿ, ತಿಮ್ಮನಹಳ್ಳಿ, ಬಂಗಾರಪೇಟೆಯ 20ಕ್ಕೂ ಹೆಚ್ಚು ಮಕ್ಕಳು ಮತ್ತು ಪೋಷಕರು ಬದನೂರು ಅವರಿಗೆ ಮನವಿ ಸಲ್ಲಿಸಿದರು.ದಿಢೀರನೆ ಶಾಲೆಯನ್ನು ಮುಚ್ಚುವುದರಿಂದ ಬಡ ಪೋಷಕರಿಗೆ ಇನ್ನಷ್ಟು ಕಷ್ಟವಾಗಲಿದೆ ಎಂದರು. ಮನವಿ ಕುರಿತು ಸರ್ಕಾರದ ಗಮನ ಸೆಳೆಯುವುದಾಗಿ ಬದನೂರು ಭರವಸೆ ನೀಡಿದರು. ದಲಿತ ಮುಖಂಡ  ವಿಜಯಕುಮಾರ್ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.