ವಸತಿ ಸಮುಚ್ಛಯಕ್ಕೆ ಅನುದಾನ: ಭರವಸೆ

7

ವಸತಿ ಸಮುಚ್ಛಯಕ್ಕೆ ಅನುದಾನ: ಭರವಸೆ

Published:
Updated:

ಚನ್ನರಾಯಪಟ್ಟಣ: ‘ಶ್ರವಣಬೆಳಗೊಳದಲ್ಲಿ 2006ರಲ್ಲಿ ನಡೆದ ಮಹಾಮಸ್ತಕಾಭಿಷೇಕದ ವೇಳೆ ಆರಂಭಿ ಸಲಾಗಿದ್ದ 4 ವಸತಿ ಸಮುಚ್ಛಯದ ಕಾಮಗಾರಿ ಹಣಕಾಸಿನ ತೊಂದರೆಯಿಂದ ಅರ್ಧಕ್ಕೆ ಸ್ಥಗಿತಗೊಂಡಿದ್ದು,  ಈ ಕಾಮಗಾರಿ ಪೂರ್ಣಗೊಳಿಸಲು ರಾಜ್ಯ ಸರ್ಕಾರ ರೂ 5 ಕೋಟಿ ಬಿಡುಗಡೆ ಮಾಡಲಿದೆ’  ಎಂದು ನವದೆಹಲಿಯ ರಾಜ್ಯದ ವಿಶೇಷ ಪ್ರತಿನಿಧಿ ವಿ.ಧನಂಜಯಕುಮಾರ್ ಭಾನುವಾರ ಭರವಸೆ ನೀಡಿದರು.ಶ್ರವಣಬೆಳಗೊಳದಲ್ಲಿ ನಿವನಿರ್ಮಾಣಗೊಂಡ ರತ್ನತ್ರಯ ಜಿನಮಂದಿರ ವಾಸ್ತು ವಿಧಾನ ಮತ್ತು ಶ್ರೀಶಾಂತಿ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಕ್ಷೇತ್ರದ ಪೀಠಾಧಿಕಾರಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಮಾಜಿ ಶಾಸಕರಾದ ಕೆ.ಪಿ.ಮಗೆಣ್ಣವರ್, ಇಲ್ಕಲ್ ವಿಜಯಕುಮಾರ್, ರಾಜ್ಯ ಅಲ್ಪಸಂಖ್ಯಾತ ಆಯೋಗದ ಸದಸ್ಯೆ  ಪದ್ಮಾ ಜೈನ್, ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ, ರಾಷ್ಟ್ರೀಯ ಜೈನ್ ಮಿಲನ್ ಅಧ್ಯಕ್ಷ  ಸುರೇಂದ್ರ ಕುಮಾರ್ ಹೆಗ್ಗಡೆ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry