ಮಂಗಳವಾರ, ಮೇ 18, 2021
31 °C

ವಸ್ತು ಸಂಗ್ರಹಾಲಯ ಸೇರಿದ ಡಿಸ್ಕವರಿ ನೌಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಅಮೆರಿಕ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ನಾಸಾ, `ಡಿಸ್ಕವರಿ~ ಬಾಹ್ಯಾಕಾಶ ನೌಕೆಯನ್ನು  ಸ್ಮಿತ್‌ಸೋನಿಯನ್ ರಾಷ್ಟ್ರೀಯ ವಾಯು ಮತ್ತು ಬಾಹ್ಯಾಕಾಶ ವಸ್ತು ಸಂಗ್ರಹಾಲಯಕ್ಕೆ ಗುರುವಾರ ಸ್ಥಳಾಂತರಿಸಿತು.`ಡಿಸ್ಕವರಿ~ ಬಾಹ್ಯಾಕಾಶ ನೌಕೆಯು ಇನ್ನು ಮುಂದೆ ಈ ಸಂಗ್ರಹಾಲಯದಲ್ಲಿ ಶಾಶ್ವತವಾಗಿ ಪ್ರದರ್ಶನಗೊಳ್ಳಲಿದೆ.

ಸ್ಥಳಾಂತರ ನಡೆದ ಸಂದರ್ಭದಲ್ಲಿ `ಡಿಸ್ಕವರಿ~ ಗಗನನೌಕೆಯಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದ  20ಕ್ಕೂ ಅಧಿಕ ಗಗನಯಾತ್ರಿಗಳು ಉಪಸ್ಥಿತರಿದ್ದರು.ಡಿಸ್ಕವರಿಯು ಕಳೆದ ವರ್ಷ ನಿವೃತ್ತಿ ಹೊಂದುವರೆಗೆ ಒಟ್ಟು 39 ಬಾರಿ ಗಗನಯಾತ್ರಿಗಳನ್ನು ಅಂತರಿಕ್ಷಕ್ಕೆ ಕರೆದೊಯ್ದು ಯಶಸ್ವಿಯಾಗಿ ಭೂಮಿಗೆ ಹಿಂದಿರುಗಿದೆ.  365ಕ್ಕೂ ಅಧಿಕ ದಿನಗಳನ್ನು ಅಂತರಿಕ್ಷದಲ್ಲಿ ಕಳೆದ ಹೆಗ್ಗಳಿಕೆಯನ್ನೂ `ಡಿಸ್ಕವರಿ~ ಹೊಂದಿದೆ.ಗಗನನೌಕೆಯನ್ನು ಸಂಗ್ರಹಾಲಯಕ್ಕೆ ಸೇರ್ಪಡೆಗೊಳಿಸಿದ ಅಂಗವಾಗಿ ನಾಲ್ಕು ದಿನಗಳ ಉತ್ಸವಕ್ಕೂ ಗುರುವಾರ ಅಧಿಕೃತವಾಗಿ ಚಾಲನೆ ನೀಡಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.