ಬುಧವಾರ, ಮೇ 25, 2022
24 °C

ವಸ್ತ್ರಾಭರಣಲೋಕ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತದಲ್ಲಿ ಸೀರೆ ಮತ್ತು ಆಭರಣಗಳಿಗೆ ಎಲ್ಲಿಲ್ಲದ ಮಹತ್ವ. ಪ್ರತಿಯೊಂದು ಪ್ರದೇಶವೂ ಒಂದೊಂದು ಬಗೆಯ ವೇಷಭೂಷಣ, ವಸ್ತ್ರಲಂಕಾರಗಳಿಗೆ ಹೆಸರುವಾಸಿ. ಇಂತಹ ವಿವಿಧ ಬಗೆಯ ವಸ್ತ್ರಗಳನ್ನು ಒಂದೆಡೆ ನೋಡುವ ಅವಕಾಶ ಕಲ್ಪಿಸಿದೆ ಕರ್ನಾಟಕ ಹಸ್ತಶಿಲ್ಪ ಮಂಡಳಿ (ಕ್ರಾಫ್ಟ್ ಕೌನ್ಸಿಲ್).ಅದು ಆಯೋಜಿಸಿದ ಅಖಿಲ ಭಾರತ ವಸ್ತ್ರ ಹಾಗೂ ಆಭರಣ ಪ್ರದರ್ಶನದಲ್ಲಿ ಉತ್ತರದ ಕಾಶ್ಮೀರದಿಂದ ಹಿಡಿದು ದಕ್ಷಿಣದ ಇಳಕಲ್ ವರೆಗಿನ ನೇಕಾರರು ಸಿದ್ಧಪಡಿಸಿದ ವಸ್ತ್ರಗಳೆಲ್ಲ ಇವೆ. ಆಭರಣ ತಯಾರಿಕಾ ಕ್ಷೇತ್ರದಲ್ಲಿ ಹೆಸರು ಮಾಡಿದವರ ಅಲಂಕಾರಿಕ ವಸ್ತುಗಳು ಕೂಡ ಇಲ್ಲಿ ಲಭ್ಯ.ಗುಜರಾತಿನ ಪಟೋಲಾ, ಶಾಲು, ಪಶ್ಚಿಮ ಬಂಗಾಳ, ಓಡಿಶಾದ ಕೈಮಗ್ಗದ ಸೀರೆಗಳು, ರೇಷ್ಮೆ ಸೀರೆಗಳು ಮತ್ತು ಬಾಟಿಕ್‌ಗಳು, ಉತ್ತರ ಪ್ರದೇಶದ ಚಿಕನ್ ಕಸೂತಿ ವಸ್ತ್ರಗಳು, ಬನಾರಸಿ ಸೀರೆಗಳು, ಆಂಧ್ರ ಪ್ರದೇಶದ ಮಂಗಳಗಿರಿ ಸೀರೆಗಳು, ಕೈಮಗ್ಗದ ಟಸ್ಸಾರ್‌ಗಳು,

 

ತಮಿಳುನಾಡಿನ ಕಾಂಚೀಪುರಂ ರೇಷ್ಮೆ ಸೀರೆಗಳು, ಮಧ್ಯಪ್ರದೇಶದ ಮಹೇಶ್ವರಿ ವಸ್ತ್ರ, ಕರ್ನಾಟಕದ ಮೊಳಕಾಲ್ಮೂರು, ಇಳಕಲ್ ಸೀರೆಗಳು, ಕಸೂತಿಯ ವಿವಿಧ ವರ್ಣ ಹಾಗೂ ವಿನ್ಯಾಸದ ಅಪೂರ್ವ ವಸ್ತ್ರಗಳು ಲಭ್ಯ ಇವೆ. ಸೀರೆಗಳಲ್ಲದೇ ದುಪಟ್ಟಾ, ಘಾಗ್ರಾ ಚೋಲಿ, ಟಾಪ್ ಕೂಡ ಇವೆ.ವಿಶಿಷ್ಟವಾದ ಹರಳಿನಿಂದ ತಯಾರಿಸಿರುವ ಬೆಲೆಬಾಳುವ ಸರ, ಬೆಂಡೊಲೆ ಸೇರಿದಂತೆ ವಿವಿಧ ತೆರನಾದ ಆಭರಣಗಳಿವೆ. ಕೈಲಾಶ್ ಪಟವಾ, ಪ್ರೀತಿ ಪಟೇಲ್ ಆಭರಣ ಘಟಕಗಳ ಬೆಳ್ಳಿ ಮತ್ತು ಮುತ್ತಿನ ಆಭರಣಗಳು ಮನಮೋಹಕವಾಗಿವೆ. ದೇಶದ ವಿವಿಧ ಭಾಗದ ಒಟ್ಟು 41 ಹಸ್ತಶಿಲ್ಪ ಕಲಾವಿದರು, ಕಲಾ ಸಂಸ್ಥೆಗಳ ಮಳಿಗೆಗಳಲ್ಲಿ ವೈವಿಧ್ಯಮಯವಾದ ವಸ್ತ್ರಾಭರಣಗಳನ್ನು ಖರೀದಿಸಬಹುದಾಗಿದೆ.ಸ್ಥಳ: ಚಿತ್ರಕಲಾ ಪರಿಷತ್, ಕುಮಾರ ಕೃಪಾ ರಸ್ತೆ. ಬೆಳಿಗ್ಗೆ 10ರಿಂದ ಸಂಜೆ 7.30. ಪ್ರದರ್ಶನ ಮಂಗಳವಾರ ಮುಕ್ತಾಯ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.