ವಸ್ತ್ರ ಸಂಹಿತೆ: ಆಕ್ರೋಶ
ಬೀಜಿಂಗ್ (ಐಎಎನ್ಎಸ್): ಲೈಂಗಿಕ ಕಿರುಕುಳ ತಪ್ಪಿಸಿಕೊಳ್ಳುವ ಸಲುವಾಗಿ `ಸಭ್ಯ ಉಡುಗೆ~ ತೊಡುವಂತೆ ಕಂಪೆನಿಯೊಂದು ಮಹಿಳಾ ಪ್ರಯಾಣಿಕರನ್ನು ಕೋರಿಕೊಂಡಿರುವ ವಿಷಯ ಇದೀಗ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.
ಶಾಂಘೈ ಮೆಟ್ರೊ ರೈಲು ಓಡಿಸುವ ಸಂಸ್ಥೆ, `ಲೈಂಗಿಕ ಕಿರುಕುಳ ಇಲ್ಲದಂತೆ ಮಾಡಲು ಎಲ್ಲಾ ಮಹಿಳಾ ಪ್ರಯಾಣಿಕರು ಅರೆಬರೆ ದಿರಿಸು ಬಿಟ್ಟು ಸರಳವಾದ ಉಡುಗೆ ಧರಿಸಬೇಕು~ ಎಂದು ತನ್ನ ಅಧಿಕೃತ ಬ್ಲಾಗ್ನಲ್ಲಿ ಕೋರಿಕೊಂಡಿದೆ.
ಕಿರುಕುಳ ನೀಡುವ ಪುರುಷರಿಗೆ ಉಪದೇಶ ನೀಡದೆ ಮಹಿಳೆಯರಿಗೆ ವಸ್ತ್ರ ಸಂಹಿತೆ ಬಗ್ಗೆ ಪಾಠ ಹೇಳುತ್ತಿದೆ ಎಂದು ಹಲವರು ಕಂಪೆನಿಯ ವಿರುದ್ಧದ ತಮ್ಮಅಸಮಾಧಾನವನ್ನು ಸಾಮಾಜಿಕ ಸಂಪರ್ಕ ತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.