ವಹಿವಾಟು ಕುಸಿತ: ಹೂಡಿಕೆ ನಷ್ಟ ರೂ.12 ಲಕ್ಷ ಕೋಟಿ

7

ವಹಿವಾಟು ಕುಸಿತ: ಹೂಡಿಕೆ ನಷ್ಟ ರೂ.12 ಲಕ್ಷ ಕೋಟಿ

Published:
Updated:
ವಹಿವಾಟು ಕುಸಿತ: ಹೂಡಿಕೆ ನಷ್ಟ ರೂ.12 ಲಕ್ಷ ಕೋಟಿ

ನವದೆಹಲಿ (ಪಿಟಿಐ): ಕಳೆದ ಹಣಕಾಸು ವರ್ಷದಲ್ಲಿ ಮುಂಬೈ ಷೇರು ವಿನಿಮಯ ಕೇಂದ್ರ (ಬಿಎಸ್‌ಇ) ಮತ್ತು ರಾಷ್ಟ್ರೀಯ ವಿನಿಮಯ ಕೇಂದ್ರದಲ್ಲಿ (ಎನ್‌ಎಸ್‌ಇ) ಒಟ್ಟಾರೆ ವಹಿವಾಟು ಶೇ 25ರಷ್ಟು ಕುಸಿದಿದ್ದು, ಹೂಡಿಕೆದಾರರಿಗೆ ರೂ.12 ಲಕ್ಷ ಕೋಟಿಯಷ್ಟು ನಷ್ಟವಾಗಿದೆ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಹೇಳಿದೆ.2011-12ನೇ ಹಣಕಾಸು ವರ್ಷದ ಆರಂಭದಲ್ಲಿ ರೂ.46.85 ಲಕ್ಷ ಕೋಟಿಯಷ್ಟಿದ್ದ ಪೇಟೆ ಬಂಡವಾಳ ಮೌಲ್ಯ ವರ್ಷಾಂತ್ಯದಲ್ಲಿ ರೂ.34.84 ಲಕ್ಷ ಕೋಟಿಗೆ ಕುಸಿದಿದೆ. ರೂಪಾಯಿ ಅಪಮೌಲ್ಯ, ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ) ಒತ್ತಡದಿಂದ ಪ್ರಮುಖ ಕಂಪೆನಿಗಳ ಷೇರುಗಳ ಮೌಲ್ಯ ಈ ಅವಧಿಯಲ್ಲಿ ಗರಿಷ್ಠ ಮಟ್ಟದಲ್ಲಿ ಕುಸಿದಿದೆ ಎಂದು `ಸೆಬಿ~ ವಾರ್ಷಿಕ ವರದಿ ಹೇಳಿದೆ.ಕಳೆದ ವರ್ಷ  `ಎನ್‌ಎಸ್‌ಇ~ ಯಲ್ಲಿ ರೂ.28.10 ಲಕ್ಷ ಕೋಟಿ ಮತ್ತು `ಬಿಎಸ್‌ಇ~ಯಲ್ಲಿ ರೂ.6.67 ಲಕ್ಷ ಕೋಟಿ ಹೂಡಿಕೆ ಯಾಗಿದ್ದು, ವಹಿವಾಟು ಕ್ರಮವಾಗಿ ಶೇ 21.4 ಮತ್ತು ಶೇ 39.6ರಷ್ಟು ತಗ್ಗಿದೆ. `ಎನ್‌ಎಸ್‌ಇ~ ಮತ್ತು `ಬಿಎಸ್‌ಇ~ ಹೊರತುಪಡಿಸಿದರೆ ಕೋಲ್ಕತ್ತ ಷೇರು ಪೇಟೆಯಲ್ಲಿಯೂ ಗರಿಷ್ಠ ಮಟ್ಟದಲ್ಲಿ ಹೂಡಿಕೆದಾರರ ಹಣ ಕರಗಿಹೋಗಿದೆ.ರಾಷ್ಟ್ರೀಯ ಷೇರುಪೇಟೆಯ ಒಟ್ಟು ಬಂಡವಾಳ ಮೌಲ್ಯ 2011-12ರಲ್ಲಿ ರೂ.60.96 ಲಕ್ಷ ಕೋಟಿಗೆ ಮತ್ತು `ಬಿಎಸ್‌ಇ~ ಬಂಡವಾಳ ಮೌಲ್ಯ ರೂ.62.14 ಲಕ್ಷ ಕೋಟಿಗೆ ಇಳಿದಿದೆ.ಷೇರುಪೇಟೆಯಲ್ಲಿ ಹೆಚ್ಚಿನ ಹಣ ತೊಡಗಿಸಿರುವ ನಗರಗಳ ಪಟ್ಟಿಯಲ್ಲಿ ಮುಂಬೈ, ದೆಹಲಿ ಮೊದಲೆರಡು ಸ್ಥಾನದಲ್ಲಿವೆ ಎಂದೂ ಈ ವರದಿ ಹೇಳಿದೆ.ರಾಷ್ಟ್ರವೊಂದು ಅಂತರರಾಷ್ಟ್ರೀಯ ಮಟ್ಟದ ಹಣಕಾಸು ಕ್ರಿಯಾ ಪಡೆ (ಎಫ್‌ಎಟಿಎಫ್) ಸದಸ್ಯತ್ವ ಹೊಂದಿದ್ದರೆ, ಅಂತಹ ದೇಶಗಳ `ಎನ್‌ಆರ್‌ಐ~ಗಳು ಕೂಡ `ಕ್ಯುಎಫ್‌ಐ~ ಮೂಲಕ ವಹಿವಾಟು ನಡೆಸಬಹುದು ಎಂದು `ಸೆಬಿ~ ಹೇಳಿದೆ.`ಎಫ್‌ಐಐ~: ಸೆಬಿ ಒಪ್ಪಂದ

ನವದೆಹಲಿ(ಪಿಟಿಐ):
ವಿದೇಶಿ ಸಾಂಸ್ಥಿಕ ಹೂಡಿಕೆ) ಹೆಚ್ಚು ಆಕರ್ಷಿಸುವ ನಿಟ್ಟಿನಲ್ಲಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಆರು ದೇಶಗಳ ಜತೆಗೆ ದ್ವಿಪಕ್ಷೀಯ ಷೇರು ವಹಿವಾಟು ಒಪ್ಪಂದ ಮಾಡಿಕೊಳ್ಳಲಿದೆ.

ಭಾರತೀಯ ಷೇರು ದಲ್ಲಾಳಿ ಸಂಸ್ಥೆಗಳಿಗೆ ವಿದೇಶಗಳಲ್ಲಿ ವಹಿವಾಟು ನಡೆಸಲು ಅನುಕೂಲವಾಗುವಂತೆ ಅಲ್ಲಿನ ಷೇರುಪೇಟೆ ನಿಯಂತ್ರಣ ಮಂಡಳಿಗಳೂ ಅವಕಾಶ ಕಲ್ಪಿಸಬೇಕು ಎಂದೂ `ಸೆಬಿ~ ಮನವಿ ಮಾಡಿದೆ.ಹಣಕಾಸು ಸಚಿವಾಲಯದ ಸೂಚನೆ ಮೇರೆಗೆ ಈ ಕ್ರಮಕ್ಕೆ ಮುಂದಾಗಿದ್ದು, ಇದರಿಂದ ಉಭಯ ದೇಶಗಳ ನಡುವೆ `ಅರ್ಹತೆ ಪಡೆದಿರುವ ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಕ್ಯುಎಫ್‌ಐ) ಚಟುವಟಿಕೆ ಹೆಚ್ಚಲಿದೆ ಎಂದು `ಸೆಬಿ~ ವಿಶ್ವಾಸ ವ್ಯಕ್ತಪಡಿಸಿದೆ.ಅಲ್ಲದೆ, ಆಸ್ಟ್ರೇಲಿಯಾ, ಫ್ರಾನ್ಸ್, ಕೆನಡಾ, ಜರ್ಮನಿ, ಹಾಂಕಾಂಗ್ ಜಪಾನ್, ಸಿಂಗಪುರ, ಸ್ವಿಟ್ಜರ್‌ಲೆಂಡ್, ಇಂಗ್ಲೆಂಡ್, ಯುಎಇ ಸೇರಿದಂತೆ 45ಕ್ಕೂ ಹೆಚ್ಚು ದೇಶಗಳ ಜತೆಗೆ `ಕ್ಯುಎಫ್‌ಐ~ ಮೂಲಕ ಷೇರುಪೇಟೆ, ಮ್ಯೂಚುವಲ್ ಫಂಡ್ ಕಾರ್ಪೊರೇಟ್ ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹು ದಾದ ಒಪ್ಪಂದವನ್ನೂ `ಸೆಬಿ~ ಮಾಡಿಕೊಂಡಿದೆ. ಹೊಸದಾಗಿ ಒಪ್ಪಂದ ಮಾಡಿಕೊಂಡಿರುವ ದೇಶಗಳ ಸಾಲಿಗೆ  ಅರ್ಜೆಂಟೀನಾ, ಕೊರಿಯಾ, ಕುವೈತ್, ಟರ್ಕಿ ಖತಾರ್ ಐರ್‌ಲೆಂಡ್ ಮತ್ತು ಲಾತ್ವಿಯಾ ಸಹ ಸೇರಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry