ವಾಂಖೆಡೆ ಕ್ರೀಡಾಂಗಣ: ಅಧಿಕಾರಿಗಳ ಅಸಮಾಧಾನ

7

ವಾಂಖೆಡೆ ಕ್ರೀಡಾಂಗಣ: ಅಧಿಕಾರಿಗಳ ಅಸಮಾಧಾನ

Published:
Updated:

ಮುಂಬೈ (ಪಿಟಿಐ): ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿರುವ ವಾಂಖೆಡೆ ಕ್ರೀಡಾಂಗಣದಲ್ಲಿ ಕೈಗೊಂಡಿರುವ ಸುರ ಕ್ಷತಾ ಕ್ರಮಗಳ ಬಗ್ಗೆ ಅಗ್ನಿಶಾಮಕ ದಳದ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಅಗ್ನಿ ಆಕಸ್ಮಿಕ ಸಂಭವಿಸಿದರೆ ಜನರ ರಕ್ಷಣೆಗೆ ಮಾಡಲಾಗಿರುವ ವ್ಯವಸ್ಥೆ ಗಳು ತೃಪ್ತಿದಾಯಕವಾಗಿಲ್ಲ. ಆದ್ದ ರಿಂದ ಈ ವಿಷಯವಾಗಿ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ)ಯಿಂದ ವಿವ ರಣೆ ಕೇಳಲಾಗುವುದು ಎಂದು ಅಧಿ ಕಾರಿಗಳು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.ವಾಂಖೆಡೆ ಕ್ರೀಡಾಂಗಣದ ನವೀಕ ರಣ ಕಾರ್ಯವು ಅಂತಿಮ ಹಂತದ ್ಲಲಿದೆ. ಅಲ್ಲಿಗೆ ಭೇಟಿ ನೀಡಿದ ಅಗ್ನಿ ಶಾಮಕ ದಳದ ತಂಡವು ಪರಿಶೀಲನೆ ಪೂರ್ಣಗೊಳಿಸಿದೆ. ಅನೇಕ ಹಂತಗಳಲ್ಲಿ ಅಗ್ನಿ ಆಕಸ್ಮಿಕದಿಂದ ರಕ್ಷಣೆ ನೀಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿಲ್ಲವೆಂದು ಸ್ಪಷ್ಟವಾಗಿ ವರದಿ ನೀಡಿದೆ. ಪಂದ್ಯಗ ಳನ್ನು ನಡೆಸಲು ಅಂತಿಮ ಅನುಮತಿ ಪಡೆಯುವ ಮುನ್ನ ಈ ಎಲ್ಲ ಕೊರತೆಗಳನ್ನು ನಿವಾರಿಸಬೇಕೆಂದು ನಿರ್ದೇಶನ ನೀಡಲಾಗುವುದೆಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry