ವಾಂಖೇಡೆ ಕ್ರೀಡಾಂಗಣ: ನಿಯಮ ಉಲ್ಲಂಘಿಸಿಲ್ಲ

7

ವಾಂಖೇಡೆ ಕ್ರೀಡಾಂಗಣ: ನಿಯಮ ಉಲ್ಲಂಘಿಸಿಲ್ಲ

Published:
Updated:

ಕೊಲ್ಲಾಪುರ (ಪಿಟಿಐ): ವಿಶ್ವಕಪ್ ಕ್ರಿಕೆಟ್ ಪಂದ್ಯಗಳು ನಡೆಯಲಿರುವ ಮುಂಬೈನ ವಾಂಖೇಡೆ ಕ್ರೀಡಾಂಗಣದ ನವೀಕರಣದ ಸಂದರ್ಭದಲ್ಲಿ ಪರಿಸರ ರಕ್ಷಣೆ ನಿಯಮಗಳ ಉಲ್ಲಂಘನೆ ಆಗಿದೆ ಎನ್ನುವ ಮಾಧ್ಯಮ ವರದಿಗಳನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷ ಶರದ್ ಪವಾರ್ ಅವರು ತಳ್ಳಿಹಾಕಿದ್ದಾರೆ.

ಪರಿಸರ ರಕ್ಷಣೆಯ ಅಂಶಗಳನ್ನು ಪರಿಗಣಿಸದೆಯೇ ವಾಂಖೇಡೆ ಕ್ರೀಡಾಂಗಣದ ನವೀಕರಣಕ್ಕೆ ಅವಕಾಶ ನೀಡಲಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಕೋರಿ ಮುಂಬೈ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ.

‘ಕೆಲವರು ಅಭಿವೃದ್ಧಿಪರ ಯೋಚನೆ ಮಾಡುವುದಿಲ್ಲ. ಅವರಿಗೆ ಎಲ್ಲೆಡೆಯೂ ಹುಳುಕು ಹುಡುಕುವುದೇ ಕೆಲಸವಾಗಿರುತ್ತದೆ’ ಎಂದು ಪವಾರ್ ‘ಯಾವುದೇ ಹಂತದಲ್ಲಿ ಪರಿಸರ ರಕ್ಷಣೆಯ ನಿಯಮಗಳನ್ನು  ಮುರಿಯಲಾಗಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry