ವಾಂತಿಭೇದಿ: ಚುರುಕುಗೊಂಡ ಸ್ವಚ್ಛತಾ ಕಾರ್ಯ

ಗುರುವಾರ , ಜೂಲೈ 18, 2019
23 °C

ವಾಂತಿಭೇದಿ: ಚುರುಕುಗೊಂಡ ಸ್ವಚ್ಛತಾ ಕಾರ್ಯ

Published:
Updated:

ಹುಮನಾಬಾದ್: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಜನ ವಾಂತಿಭೇದಿಯಿಂದ ನರಳುತ್ತಿರುವುದರಿಂದ ಪುರಸಭೆ ಹಾಗೂ ಗ್ರಾಮ ಪಂಚಾಯಿತಿಗಳು ಚರಂಡಿ ಹಾಗೂ ರಸ್ತೆಮಧ್ಯೆ ಸಂಗ್ರಹಗೊಂಡ ಕೊಚ್ಚೆ ಸ್ವಚ್ಛಗೊಳಿಸುವ ಕಾರ್ಯ ಚುರುಕುಗೊಳಿಸಿದ್ದಾರೆ.ಪಟ್ಟಣದ 23ವಾರ್ಡ್‌ಗಳಲ್ಲಿ ಚರಂಡಿ ಸ್ವಚ್ಛಗೊಳಿಸುವ ಕಾರ್ಯ ಚುರುಕುಗೊಳಿಸಲಾಗಿದೆ. ಗಬ್ಬು ನಾರುತ್ತಿರುವ ಸ್ಥಳಗಳಲ್ಲಿ ಜಮೆಕ್ಸಿಲಿನ್ ಪೌಡರ್ ಸಿಂಪರಿಸಲಾಗುತ್ತಿದೆ.ಪುರಸಭೆ ವತಿಯಿಂದ ಪೂರೈಸುವ ನೀರನ್ನು ಪ್ರತಿನ್ಯಿ ಕಾಯಿಸಿ, ಸೋಸಿ ಕುಡಿಯುವಂತೆ ಡಂಗೋರ ಮೂಲಕ ನಾಗರಿಕರಲ್ಲಿ ಜಾಗೃತಗೊಳಿಸಲಾಗಿದೆ. ಪಟ್ಟಣದ ಪ್ರಮುಖ ಹಾಗೂ ಓಣಿಗಳ ರಸ್ತೆಮಧ್ಯೆ ಸಂಗ್ರಹಗೊಂಡ ಕೊಚ್ಚೆ ನೀರು ಸ್ವಚ್ಛಗೊಳಿಸಿ, ಯಾವುದಾದರೂ ಓಣಿಗಳಲ್ಲಿ ಪೌಡರ್ ಸಿಂಪರಿಸದಿರುವುದು ಗಮನಕ್ಕೆ ಬಂದಲ್ಲಿ ಸಾರ್ವಜನಿಕರು ಪುರಸಭೆ ನೈರ್ಮಲ್ಯ ನಿರೀಕ್ಷಕರ ಗಮನಕ್ಕೆ ತರಬಹುದು ಎಂದು ಮುಖ್ಯಾಧಿಕಾರಿ ಸತೀಶ ಗುಡ್ಡೆ ಸೂಚಿಸಿದ್ದಾರೆ.ಗ್ರಾಮದಲ್ಲಿ 12ಕ್ಕೂ ಹೆಚ್ಚು ಮಂದಿ ವಾಂತಿಭೇದಿಯಿಂದ ನರಳುತ್ತಿರುವುದನ್ನು ಮನಗಂಡು ಗ್ರಾಮದ ಎಲ್ಲ  ಓಣಿಗಳಲ್ಲಿನ ಚರಂಡಿ ಸ್ವಚ್ಛಗೊಳಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಧುಮ್ಮನಸೂರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಕರಂದ ಕುಲಕರ್ಣಿ ತಿಳಿಸಿದರು.ಜಿಲ್ಲಾ ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳು ಗ್ರಾಮಕ್ಕೆ ಭೇಟಿನೀಡಿ, ರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಗತ್ಯ ಮಾರ್ಗದರ್ಶನ ನೀಡಿದ್ದಾರೆ ಎಂದು ಅವರು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry