ವಾಂತಿ-ಭೇದಿ: ಜನತೆ ಆತಂಕ

ಮಂಗಳವಾರ, ಜೂಲೈ 23, 2019
20 °C

ವಾಂತಿ-ಭೇದಿ: ಜನತೆ ಆತಂಕ

Published:
Updated:

ಹೊಸಪೇಟೆ: ತಾಲ್ಲೂಕಿನಲ್ಲಿ ಕಳೆದ ಮೂರು ದಿನಗಳಿಂದ ವಾಂತಿ-ಭೇದಿ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು ಶುಕ್ರವಾರ ಒಂದೇ ದಿನ ಹೊಸ ಪೇಟೆಯ 10 ಜನರಿಗೆ ವಾಂತಿ-ಭೇದಿ ಕಾಣಿಸಿಕೊಂಡಿದ್ದು ಚಿಕಿತ್ಸೆಗೆ ಸ್ಥಳೀಯ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.ಹೊಸಪೇಟೆ ನಗರ ಸೇರಿದಂತೆ ತಾಲ್ಲೂಕಿನ ವಿವಿಧ ಪ್ರದೇಶಗಳಲ್ಲಿ ಕಲುಷಿತ ನೀರು ಸೇವನೆಯಿಂದ 46ಕ್ಕೂ ಹೆಚ್ಚು ಜನರು ಬಳಲುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಸ್ಥಳೀಯ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯ ವೃದ್ದಿ ಯಾಗುತ್ತಿದ್ದು ಎಸ್.ಆರ.ನಗರ, ಚಿತ್ತ ವಾಡಗಿ ವ್ಯಾಪ್ತಿಯ ವರಕೇರಿ ಭಾಗದಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ.  ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಸರಬ ರಾಜುಗೊಂಡ ಕಲುಷಿತ ನೀರು ಸೇವನೆ ಯಿಂದ ನಾಗರೀಕರು ವಾಂತಿ-ಭೇದಿಗೆ ಬಲಿಯಾಗುತ್ತದ್ದಾರೆ. ಅಂಜಿನಿ, ಶ್ರೀನಿವಾಸ, ಹನುಮಂತಪ್ಪ, ಗಂಗಮ್ಮ, ಫಾತಿಮಾ, ನಿಂಗಮ್ಮ, ಸರೋಜಾ, ಹುಸೇನ್ ಸಾಬ್, ನಾಗನಾಯ್ಕ, ಬೇಗಂಬೀ, ನೀಲಾಮ್ಮ, ಕಲ್ಪನಾ, ಪಂಪಣ್ಣ, ಮಲ್ಲಿ, ನೂರ್‌ಜಹಾನ್, ಹನುಮಂತಪ್ಪ ಸೇರಿದಂತೆ 46ಕ್ಕೂ ಹೆಚ್ಚು ಜನರು ಚಿಕಿತ್ಸೆಗೆ ದಾಖಲಾ ಗಿದ್ದಾರೆ.ಮುಂಜಾಗೃತೆ: ಕಳೆದೆರಡು ದಿನ ಗಳಿಂದ ನಿರಂತ ಮಳೆ ಹಾಗೂ ಜಲಾ ಶಯದಲ್ಲಿ ಹೊಸ ನೀರು ಬರುತ್ತಿದ್ದು ಹೆಚ್ಚುತ್ತಿರುವ ವಾಂತಿ-ಭೇದಿ ಪ್ರಕರಣ ಗಳ ಹಿನ್ನೆಲೆಯಲ್ಲಿ ಹೊಸಪೇಟೆ ನಗರ ಸಭೆಯ ಅಧಿಕಾರಿಗಳು ಸೇರಿದಂತೆ ತಾಲ್ಲೂಕು ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಮನೆ-ಮನೆಗೆಳಿಗೆ ಭೇಟಿ ನೀಡುವ ಮತ್ತು ನೀರನ್ನು ಶುದ್ದೀಕರಿಸಿ ಸೇವಿಸಲು ಸಲಹೆ ನೀಡುತ್ತಿದ್ದಾರೆ.ಭೇಟಿ: ವಿಷಯ ತಿಳಿಯುತ್ತಿದ್ದಂತೆ ಉಪವಿಭಾಗಾಧಿಕಾರಿ ಕರಿಗೌಡ, ತಹ ಸೀಲ್ದಾರ ಪಿ.ಎಸ್.ಮಂಜುನಾಥ ಪೌರಾ ಯುಕ್ತ ಕೆ.ರಂಗಸ್ವಾಮಿ ತಾಲ್ಲೂಕು ವೈದ್ಯಾಧಿಕಾರಿ ಡಾ.ಜಂಬಯ್ಯ ನಾಯಕ ಪೊಲೀಸ್ ಉಪವಿಭಾಧಿಕಾರಿ ಹೆಚ್.ಎಸ್.ಕೇರಿ ಸೇರಿದಂತೆ ನಗರಸಭೆಯ ಅಧಿಕಾರಿಗಳು ಪರಿಶೀಲಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry