ಮಂಗಳವಾರ, ಮೇ 11, 2021
22 °C

ವಾಂತಿ ಭೇದಿ: 10 ಮಂದಿ ಆಸ್ಪತ್ರೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂತೇಮರಹಳ್ಳಿ: ವಾಂತಿ, ಭೇದಿ, ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 10 ಮಂದಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿರುವ ಘಟನೆ ಸಮೀಪದ ದೇಶವಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.ಗ್ರಾಮದಲ್ಲಿ ಈಚೆಗೆ ನಡೆದ ಅಂಬೇಡ್ಕರ್ ಜಯಂತಿಯಲ್ಲಿ ಸಾಮೂಹಿಕವಾಗಿ ಏರ್ಪಡಿಸಿದ್ದ ಊಟದಲ್ಲ ಆದ ವ್ಯತ್ಯಾಸವೇ ಇದಕ್ಕೆ ಕಾರಣ ಎಂದು ಶಂಕಿಸಲಾಗಿದೆ.ವಾಂತಿ ಭೇದಿ ಕಾಣಿಸಿಕೊಂಡಿರುವ ಗ್ರಾಮದ ಸಣ್ಣಮ್ಮ, ಸುಮ, ಪ್ರಜ್ವಲ್, ಶಿವರಾಜು, ಮರಮ್ಮ, ಸಿದ್ದಮ್ಮ, ಮಹೇಶ್ವರಿ, ರಾಧಾ, ರಾಜೇಶ್ವರಿ, ಈಶ್ವರಮ್ಮ ಸಂತೇಮರಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಶನಿವಾರ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಊಟ ಮಾಡ್ದ್ದಿದ ಇವರು ಭಾನುವಾರ ಸಂಜೆ ಅಸ್ವಸ್ಥರಾದರು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು.ಸ್ಥಳಕ್ಕೆ ವೈದ್ಯಾಧಿಕಾರಿ ಡಾ.ಕೃಷ್ಣಪ್ರಸಾದ್ ಭೇಟಿ ನೀಡಿ, ನೀರಿನ ವ್ಯತ್ಯಾಸವಾಗಿದ್ದರೆ ಗ್ರಾಮದ ಎ್ಲ್ಲಲ ಜನರಿಗೂ ವಾಂತಿ ಭೇದಿ ಹರಡುತ್ತಿತ್ತು. ಊಟದಲ್ಲಿ ವ್ಯತ್ಯಾಸ ವಾಗಿರುವುದರಿಂದ ಒಂದು ಬೀದಿಯ ಜನರಲ್ಲಿ ಮಾತ್ರ ವಾಂತಿ ಭೇದಿ ಹರಡಿದೆ. ಜಿಲ್ಲಾ ಸರ್ವೆಕ್ಷಣಾಧಿಕಾರಿಗಳಿಗೆ ವಿಷಯ ತಿಳಿಸಲಾಗಿದೆ. ನೀರಿನ ತಪಾಸಣೆಗೆ ಮಾದರಿ ತೆಗೆದುಕೊಳ್ಳಲಾಗಿದೆ. ಗ್ರಾಮದಲ್ಲಿ ವಾಂತಿ ಭೇದಿ ಹರಡದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯರು, ಕಾರ್ಯದರ್ಶಿ ಬಿ.ಎಂ.ಮಹದೇವಪ್ಪ, ಡಿ.ಪಿ. ರಾಜು ಭೇಟಿ ನೀಡಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.