ಭಾನುವಾರ, ಮೇ 16, 2021
23 °C

ವಾಗ್ದಂಡನೆ ಪ್ರಕ್ರಿಯೆ ಅಪ್ರಸ್ತುತ: ದಿನಕರನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ, (ಪಿಟಿಐ): ಸಿಕ್ಕಿಂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ರಾಜೀನಾಮೆ ಸಲ್ಲಿಸಿರುವುದರಿಂದ ತಮ್ಮ ವಿರುದ್ಧದ ವಾಗ್ದಂಡನೆ ಪ್ರಕ್ರಿಯೆ ಈಗ ಅಪ್ರಸ್ತುತ ಎಂದು ಪಿ. ಡಿ. ದಿನಕರನ್ ರಾಜ್ಯಸಭೆ ನೇಮಿಸಿರುವ ಸಮಿತಿಗೆ ಪತ್ರ ಬರೆದಿದ್ದಾರೆ.ಕೋಲ್ಕತ್ತ ಹೈಕೋರ್ಟ್‌ನ ನ್ಯಾಯಮೂರ್ತಿ ಸೌಮಿತ್ರ ಸೆನ್ ರಾಜೀನಾಮೆ ನೀಡಿದ ನಂತರ ಲೋಕಸಭೆ ವಾಗ್ದಂಡನೆ ಪ್ರಕಿಯೆಯನ್ನು ರದ್ದುಪಡಿಸಿರುವುದನ್ನು ದಿನಕರನ್ ಉದಾಹರಿಸಿದ್ದಾರೆ.ತಾವು ಈಗ ಅಧಿಕಾರದಲ್ಲಿ ಇಲ್ಲದೆ ಇರುವುದರಿಂದ ವಾಗ್ದಂಡನೆ ಪ್ರಕ್ರಿಯೆ ಅಪ್ರಸ್ತುತವಾಗುತ್ತದೆ ಎಂದು ತಿಳಿಸಿರುವ ಅವರು, ಸಮಿತಿಯು ತಮ್ಮ ಬಗ್ಗೆ ಪೂರ್ವಗ್ರಹಪೀಡಿತ ಭಾವನೆಯನ್ನು ಹೊಂದಿದೆ ಎಂದು ಆಪಾದಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.