ವಾಜಪೇಯಿ, ಆಡ್ವಾಣಿ ಅವ್ಯವಹಾರದ ಸಾಕ್ಷ್ಯಗಳು ತಮ್ಮ ಬಳಿ ಇವೆ

7

ವಾಜಪೇಯಿ, ಆಡ್ವಾಣಿ ಅವ್ಯವಹಾರದ ಸಾಕ್ಷ್ಯಗಳು ತಮ್ಮ ಬಳಿ ಇವೆ

Published:
Updated:

ನವದೆಹಲಿ (ಪಿಟಿಐ):  ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಆಡ್ವಾಣಿ ಅವರು ನಡೆಸಿರುವ ಅವ್ಯವಹಾರಗಳ ಸಾಕ್ಷ್ಯಗಳು ತಮ್ಮ ಬಳಿ ಇವೆ ಆದರೆ ಅವುಗಳನ್ನು ಕಾಂಗ್ರೆಸ್ ಬಹಿರಂಗಪಡಿಸುವುದಿಲ್ಲ ಮತ್ತು ದ್ವೇಷದ ರಾಜಕಾರಣವನ್ನು ಮಾಡುವುದಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ತಿಳಿಸಿದ್ದಾರೆ.ರಾಬರ್ಟ್ ವಾದ್ರಾ ಅವರ ಮೇಲಿನ ಅರೋಪಗಳನ್ನು ದಿಗ್ವಿಜಯ್ ಸಿಂಗ್ ಅಲ್ಲಗಳೆದರು. ಈ ವಿವಾದದ ಬಗೆಗೆ ಸೋನಿಯಾ ಗಾಂಧಿ ಮೌನವಾಗಿರುವುದು ಯಾಕೆ ಎಂಬ ಪ್ರಶ್ನೆಗೆ ` ಸೋನಿಯಾ ಗಾಂಧಿ ರಾಬರ್ಟ್ ವಾದ್ರಾ ಅಲ್ಲ, ಮತ್ತು ಅವರು ಚಾರ್ಟೆಡ್ ಅಕೌಂಟೆಂಟ್ ಕೂಡ ಅಲ್ಲ ಎಂದು ದಿಗ್ವಿಜಯ್ ಸಿಂಗ್ ಪ್ರತಿಕ್ರಿಯಿಸಿದರು.ಖಾಸಾಗಿ ಸುದ್ದಿವಾಹಿನಿಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry