ವಾಜಪೇಯಿ ಆರೋಗ್ಯಶ್ರೀ: ತಪಾಸಣೆ ಶಿಬಿರ

7

ವಾಜಪೇಯಿ ಆರೋಗ್ಯಶ್ರೀ: ತಪಾಸಣೆ ಶಿಬಿರ

Published:
Updated:

ದೇವದುರ್ಗ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿನೂತನ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 15ರಂದು ರೋಗಿಗಳ ತಪಾಸಣೆ ಶಿಬಿರ ಸೋಮವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಯಿತು.ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ತಾಲ್ಲೂಕಿನ ನಾಲ್ಕು ಹೋಬಳಿಗಳಲ್ಲಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿನ ಗ್ರಾಮಗಳಿಂದ ಸೋಮವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಾಜಪೇಯಿ ಆರೋಗ್ಯಶ್ರೀ ತಪಾಸಣೆ ಶಿಬಿರದಲ್ಲಿ ಸುಮಾರು 220 ಜನ ರೋಗಿಗಳು ಭಾಗವಹಿಸಿದ್ದರು.ಚಿಕ್ಕ ಮಕ್ಕಳ ವಿವಿಧ ಕಾಯಿಲೆಗಳ ಕುರಿತು ಹೃದಯ ರೋಗ ತಜ್ಞ ಡಾ. ಪ್ರವೀಣ, ನರ ರೋಗ ತಜ್ಞ ಡಾ. ರವಿ ಅವರು ಪರೀಕ್ಷೆ ಮಾಡಿದರು.  ಅ. 19ರಂದು ಶಿಫಾರಸ ಮಾಡಲಾದ 22 ಜನ ರೋಗಿಗಳು ಮತ್ತು ಜೊತೆಗೆ ತೆರಳುವ ಒಬ್ಬರಿಗೆ ಊಟ, ಉಚಿತ ಪ್ರಯಾಣ ಮತ್ತು ವಸತಿ ವ್ಯವಸ್ಥೆಯನ್ನು ಸದರಿ ಯೋಜನೆ ಅಡಿಯಲ್ಲಿ ದೊರೆಯುತ್ತದೆ ಎಂದು ಇಲಾಖೆಯ ಅಧಿಕಾರಿಗಳು ರೋಗಿಗಳಿಗೆ ಮಾಹಿತಿ ನೀಡಿದರು. ಡಾ. ಚಂದ್ರಕಾಂತ, ರಾಜೇಶ, ಶಿವಪ್ಪ, ರವಿಶಂಕ, ಗಂಗಾಧರ, ಶೇಖ್ ಇಮಾಮದ್ದೀನ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry