ವಾಜಪೇಯಿ ಜನ್ಮದಿನ ಆಚರಣೆ

7

ವಾಜಪೇಯಿ ಜನ್ಮದಿನ ಆಚರಣೆ

Published:
Updated:

ಹುಬ್ಬಳ್ಳಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 89ನೇ ಹುಟ್ಟುಹಬ್ಬವನ್ನು ಮಂಗಳವಾರ ನೇಕಾರ ನಗರ ರಾಘವೇಂದ್ರ ವೃತ್ತದಲ್ಲಿರುವ ಮಾರುತಿ ರಾಘವೇಂದ್ರ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.ಮಾರುತಿ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ದ್ರುವರಾಜ ಅಂಗಡಿ, ಶಾಸಕ ವೀರಭದ್ರಪ್ಪ ಹಾಲಹರವಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ಟೆಂಗಿನಕಾಯಿ, ಪೂರ್ವ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಶಂಕರಪ್ಪ ಛಬ್ಬಿ, ಪಾಲಿಕೆ ಸದಸ್ಯ ಸತೀಶ ಶೇಜವಾಡಕರ, ರಂಗಾಬದ್ದಿ, ಶಿವು ಮೆಣಸಿನಕಾಯಿ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡು ಸಿಹಿ ಹಂಚಿದರು.ಈ ಸಂದರ್ಭದಲ್ಲಿ ಸುಂಕಣ್ಣಾ ಹೊನ್ನಳ್ಳಿ, ಗದಿಗಯ್ಯ ಗಂಟಾಮಠ, ಬಸವರಾಜ ಸೋಮನಕಟ್ಟಿ, ಅಶೋಕ ರಾಗಿ, ರಾಮಕೃಷ್ಣ ಕಳಸಾ, ಮೂರುಸಾವಿರಪ್ಪ ಚೆನ್ನಿ, ಮೋತಿಲಾಲಸಾ ಮಿಸ್ಕಿನ, ವಿನಾಯಕ ಅಥಣಿ, ಪ್ರಶಾಂತ ಚಡಚಾಳ, ಸುರೇಶ ಪೋಪಳೆ, ಎಸ್.ಜಿ.ಹುರಕಡ್ಲಿ, ರಾಜು ನೀಲಗಾರ, ರಾಜು ಕಾಲವಾಡ, ಪ್ರಕಾಶ ವಾಲಿ, ನಾರಾಯಣ  ಮನ್ನಾಪುರ, ಸತೀಶ ಪತ್ತೆಪೂರ, ರಾಹುಲ್ ಕಮಡೊಳ್ಳಿ ಮತ್ತಿತರರು ಪಾಲ್ಗೊಂಡಿದ್ದರು.ಯಲ್ಲಾಪುರ ಓಣಿ: ಇಲ್ಲಿನ ಯಲ್ಲಾಪುರ ಓಣಿಯ ವೃತ್ತದಲ್ಲಿ ನಡೆದ ವಾಜಪೇಯಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ವೀರಭದ್ರಪ್ಪ ಹಾಲಹರವಿ, ಸಂಸದ ಪ್ರಹ್ಲಾದ ಜೋಶಿ, ಸತೀಶ ಶೇಜವಾಡಕರ, ಶಿವು ಮೆಣಸಿನಕಾಯಿ, ರಂಗಾಬದ್ದಿ, ಮೋಹನಲಾಲ ಜೈನ್ ಪಾಲ್ಗೊಂಡಿದ್ದರು.ಸಾರ್ವಜನಿಕರಿಗೆ ಸಿಹಿ ಹಾಗೂ ಪಲಾವ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಬಸವರಾಜ ಎಸ್.ಕುಂದನಹಳ್ಳಿ, ಎಸ್.ಜಿ.ಹಾಡಕರ ವಿರೂಪಾಕ್ಷಗೌಡ, ಪಾಟೀಲ ಬಸವರಾಜ ಚನ್ನೋಜಿ, ಗಂಗಾಧರ ಕುಲಕರ್ಣಿ, ಪಾಂಡುರಂಗ ಸಣ್ಣಕ್ಕಿ, ಗುರು ಕುಂದನಹಳ್ಳಿ, ಸುರೇಶ ಚಿಂಚಳ್ಳಿ, ವಿನೋದ ಮಡಿವಾಳರ, ಶಂಭುಲಿಂಗ ಹಿರೇಮಠ, ಸಂದೀಪ ಶಿರಸಂಗಿ ಮತ್ತಿತರರು ಪಾಲ್ಗೊಂಡಿದ್ದರು.ಪದ್ಮರಾಜ ನಗರ: ಇಲ್ಲಿನ ನಿವಾಸಿಗಳ ಸಂಘದ ಪದಾಧಿಕಾರಿಗಳು ಹಾಗೂ ಮಹಿಳಾ ಮಂಡಳದ ಸದಸ್ಯರು ಸೇರಿ ವಾಜಪೇಯಿ ಜನ್ಮದಿನ ಆಚರಣೆ ಮಾಡಿದರು. ಮಹಾನಗರ ಪಾಲಿಕೆ ಸದಸ್ಯ ರಾಘವೇಂದ್ರ ರಾಮದುರ್ಗ, ಸಿ.ಎಸ್.ಪೊಲೀಸ್ ಪಾಟೀಲ, ಪ್ರಭು ನಾಟೀಕರ, ಎಂ.ಡಿ.ತಲಗೇರಿ, ಎಸ್.ಎ.ಹರ್ಡಿಕರ, ಎನ್.ಎನ್.ನರಗುಂದೆ, ವಿದ್ಯಾಧರ ಹುರಕಡ್ಲಿ, ವಿದ್ಯಾ ಆನಂದ ಮತ್ತಿತರರು ಉಪಸ್ಥಿತರಿದ್ದರು.ಬೈಕ್ ರ‌್ಯಾಲಿ: ಪಾಲಿಕೆಯ 66ನೇ ವಾರ್ಡ್ ವ್ಯಾಪ್ತಿಯ ನೇಕಾರ ನಗರ, ಗಬ್ಬೂರು ಹಾಗೂ ಬಿಡ್ನಾಳದ ಕಾರ್ಯಕರ್ತರು ಸದಸ್ಯ ನಿಂಗಪ್ಪ ಬಡಿಗೇರ ನೇತೃತ್ವದಲ್ಲಿ ಬೈಕ್ ರ‌್ಯಾಲಿ ನಡೆಸಿದರು.ಹಾಲಿನ ಅಭಿಷೇಕ: ದುರ್ಗದ ಬೈಲ್‌ನಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ವಾಜಪೇಯಿ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡವ ಮೂಲಕ ಹುಟ್ಟುಹಬ್ಬ ಆಚರಿಸಿದರು. ಅವಳಿ ನಗರದಲ್ಲಿನ ಪಾಲಿಕೆ ವ್ಯಾಪ್ತಿಯ 45 ವಾರ್ಡ್‌ಗಳಲ್ಲಿ ಜನ್ಮ ದಿನ ಆಚರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry