ಸೋಮವಾರ, ನವೆಂಬರ್ 18, 2019
20 °C

ವಾಜಪೇಯಿ ವಿರುದ್ಧ ಆರೋಪಕ್ಕೆ ಟೀಕೆ

Published:
Updated:

ಬೆಂಗಳೂರು: `ಎರಡನೆಯ ತಲೆಮಾರಿನ ತರಂಗಾಂತರ ಹಂಚಿಕೆಯಲ್ಲಿ ನಡೆದಿರುವ ಹಗರಣ ಕುರಿತು ವಿಚಾರಣೆ ನಡೆಸಿರುವ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ವರದಿಯು ನಿಷ್ಕಳಂಕ ವ್ಯಕ್ತಿತ್ವದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮೇಲೆ ಆರೋಪ ಮಾಡಿದೆ. ಇದು ನಿರ್ಲಜ್ಜ ನಡವಳಿಕೆ' ಎಂದುಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಹೇಳಿದರು.


ಪಕ್ಷದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `2-ಜಿ ಹಗರಣ ಕುರಿತ ಜೆಪಿಸಿ ವರದಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಅಸ್ವಸ್ಥರಾಗಿರುವ ಅಟಲ್ ಮೇಲೆ ಆರೋಪ ಹೊರಿಸಿರುವು ತಪ್ಪು' ಎಂದರು.

ಪ್ರತಿಕ್ರಿಯಿಸಿ (+)