ವಾಜರಹಳ್ಳಿ ಭೂಮಿ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

7

ವಾಜರಹಳ್ಳಿ ಭೂಮಿ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Published:
Updated:

ಬೆಂಗಳೂರು: ಬೆಂಗಳೂರು ನಗರ ಗೃಹ ನಿರ್ಮಾಣ ಸಹಕಾರ ಸೊಸೈಟಿ ಕನಕ­ಪುರ ರಸ್ತೆ ಬಳಿಯ ವಾಜರ­ಹಳ್ಳಿಯಲ್ಲಿ ವಶಪ­ಡಿ­ಸಿಕೊಂಡಿದ್ದ ಭೂಮಿಯನ್ನು ಹಿಂತಿರು­ಗಿಸುವ ಸಂಬಂಧ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಹೈಕೋರ್ಟ್‌ ಕಾಯ್ದಿರಿಸಿದೆ.ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಡಬೇಕು ಎಂದು ಕೋರಿ ವಾಜರ­ಹಳ್ಳಿಯ ಭೂ ಮಾಲೀಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠ ತೀರ್ಪನ್ನು ಕಾಯ್ದಿರಿಸಿದೆ.ಬೆಂಗಳೂರು ನಗರ ಗೃಹ ನಿರ್ಮಾಣ ಸಹಕಾರ ಸೊಸೈಟಿ 1999ರಲ್ಲಿ ಬಡಾವಣೆ ನಿರ್ಮಾಣ­ಕ್ಕಾಗಿ 80 ಎಕರೆ ಭೂಮಿಯನ್ನು ಸ್ವಾಧೀನ­ಪಡಿಸಿ­ಕೊಂಡಿತ್ತು. ಆದರೆ ಈ ಪ್ರದೇಶದಲ್ಲಿ ನಿಗದಿತ ಅವಧಿಯಲ್ಲಿ ಯಾವುದೇ ಕಾಮಗಾರಿ ನಡೆದಿರಲ್ಲಿಲ್ಲ. ಇದನ್ನು ಪ್ರಶ್ನಿಸಿ ಇಬ್ಬರು ಭೂ ಮಾಲೀಕರು ಸುಪ್ರೀಂಕೋರ್ಟ್‌ ಮೆಟ್ಟಿಲೇ­ರಿದ್ದರು. ಆಗ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಡುವಂತೆ ಸುಪ್ರೀಂಕೋರ್ಟ್‌ ಆದೇಶ ನೀಡಿತ್ತು.ಈ ಆದೇಶದ ಆಧಾರ ಮೇಲೆ ಇತರೆ ಭೂ ಮಾಲೀಕರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವಾದ ಹಾಗೂ ಪ್ರತಿ ವಾದ ಆಲಿಸಿರುವ ಪೀಠ ತೀರ್ಪನ್ನು ಕಾಯ್ದಿರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry