ವಾಡಿಲಾಲ್ ರೆಡಿಮೇಡ್

7

ವಾಡಿಲಾಲ್ ರೆಡಿಮೇಡ್

Published:
Updated:

ಐಸ್ ಕ್ರೀಂ ತಯಾರಿಕೆಯಲ್ಲಿ ವಾಡಿಲಾಲ್ ಪ್ರಮುಖ ಹೆಸರು. ಅದು ಈಗ ಸಿದ್ಧ ಆಹಾರ ಕ್ಷೇತ್ರಕ್ಕೂ ಕಾಲಿಟ್ಟಿದೆ. ಸ್ಟಫ್‌ಡ್ ಪರೋಟಾ, ಸಮೋಸ, ಕಚೋರಿಗಳನ್ನು ಹೊರತಂದಿದೆ. ಶೀಘ್ರದಲ್ಲಿಯೇ ರೆಡಿ ಟು ಈಟ್ ಸ್ಪ್ರಿಂಗ್ ರೋಲ್ಸ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.ಇಂದಿನ ಆಧುನಿಕ ಜೀವನದಲ್ಲಿ ಗಂಡ- ಹೆಂಡತಿ ಇಬ್ಬರೂ ದುಡಿಯಲು ಹೊರಗೆ ಹೋಗಬೇಕಾಗುತ್ತದೆ. ನಿತ್ಯ ಹೊರಗಿನ ಊಟ ರುಚಿಸುವುದಿಲ್ಲ. ಮನೆಗೆ ಬಂದು ಮಾಡಲು ಸಮಯವೂ ಇಲ್ಲ, ವ್ಯವಧಾನವೂ ಇಲ್ಲ. ಅಂಥವರನ್ನು ಗಮನದಲ್ಲಿ ಇಟ್ಟುಕೊಂಡು ಸಿದ್ಧಪಡಿಸಿದ ಈ ಉತ್ಪನ್ನಗಳು ಈಗಾಗಲೇ `ಕ್ವಿಕ್ ಟ್ರಿಟ್~ ಮತ್ತು `ಗಾರ್ಡನ್ ಫ್ರೆಷ್~ ಬ್ರಾಂಡ್ ಹೆಸರಿನಲ್ಲಿ ಉತ್ತರದ ರಾಜ್ಯಗಳಲ್ಲಿ ದೊರೆಯುತ್ತಿವೆ. ಸದ್ಯದಲ್ಲಿಯೇ ಬೆಂಗಳೂರಿನ ಆಹಾರಪ್ರಿಯರಿಗೂ ದೊರೆಯಲಿವೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಗಾಂಧಿ ಹೇಳುತ್ತಾರೆ.ತಿನಿಸುಗಳ ತಾಜಾತನ, ರುಚಿ, ಬಾಳಿಕೆ, ಸ್ವಾದವನ್ನು ಕಾಪಾಡಲು ಐಕ್ಯುಎಫ್ ತಂತ್ರಜ್ಞಾನ ಬಳಸಲಾಗುತ್ತಿದೆ. ತಯಾರಿಕೆಯಲ್ಲೂ ಅತ್ಯುತ್ತಮ ಗುಣಮಟ್ಟ, ಶುಚಿತ್ವದ ವಿಷಯದಲ್ಲಿ ಯಾವುದೇ ರಾಜಿಯೇ ಇಲ್ಲ ಎನ್ನುವುದು ಅವರ ವಿವರಣೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry