ವಾಣಿಜ್ಯ ಜಾಹೀರಾತಿನಲ್ಲಿ ಅಶೋಕ ಚಕ್ರ ಬಳಕೆಗೆ ತಡೆ

7

ವಾಣಿಜ್ಯ ಜಾಹೀರಾತಿನಲ್ಲಿ ಅಶೋಕ ಚಕ್ರ ಬಳಕೆಗೆ ತಡೆ

Published:
Updated:

ದುಬೈ (ಪಿಟಿಐ): ಒಮಾನ್‌ನಲ್ಲಿ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ಹೊಂದಿರುವ ಭಾರತೀಯ ಮೂಲದವರ ಒಡೆತನದ ವಾಣಿಜ್ಯ ಸಂಸ್ಥೆಯೊಂದು ತನ್ನ ಎಲ್ಲ ಸ್ತಬ್ಧಚಿತ್ರಗಳು, ಜಾಹೀರಾತು ಫಲಕಗಳು ಹಾಗೂ ಪತ್ರಿಕಾ ಜಾಹೀರಾತಿನಲ್ಲಿ ಭಾರತದ ರಾಷ್ಟ್ರಧ್ವಜದ ಚಿಹ್ನೆಯಾದ ಅಶೋಕ ಚಕ್ರವನ್ನು ಬಳಸುವುದನ್ನು ನಿಲ್ಲಿಸಿದೆ.ಅಶೋಕ ಚಕ್ರದ ಚಿತ್ರವನ್ನು ಬಳಸುವುದರ ವಿರುದ್ಧ ಮಸ್ಕತ್‌ನ ವಕೀಲ ಪಿ.ಇ. ಲಾಲಾಚೆನ್ ಅವರು ಭಾರತೀಯ ರಾಯಭಾರಿ ಜೆ.ಎಸ್‌ಮುಕುಲ್ ಅವರಿಗೆ ದೂರು ಸಲ್ಲಿಸಿದ ನಂತರ ಆ ಉದ್ಯಮ ಸಂಸ್ಥೆಯು ಈ ನಿರ್ಧಾರ ತಳೆದಿದೆ ಎಂದು `ಗಲ್ಫ್ ನ್ಯೂಸ್~ ಪ್ರಕಟಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry