ಶನಿವಾರ, ಜೂನ್ 12, 2021
23 °C

ವಾಣಿಜ್ಯ ತೆರಿಗೆ: ಗುರಿ ಮೀರಿ ಸಾಧನೆ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 2012-13ನೇ ಹಣಕಾಸು ವರ್ಷದಲ್ಲಿ ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಗುರಿ ಮೀರಿ ಸಾಧನೆ ಸಾಧ್ಯವಾಗಲಿದೆ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಅಂದಾಜಿಸಲಾಗಿದೆ.ಅನೇಕ ಸರಕುಗಳ ಮೇಲೆ ತೆರಿಗೆ ಹೊರೆ ತಗ್ಗಿಸಿದ್ದರೂ, ಹೆಚ್ಚುವರಿ ಸಂಪನ್ಮೂಲ ಸಂಗ್ರಹಿಸಲೂ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.ಒಣಮೆಣಸಿನ ಕಾಯಿ ಮೇಲಿನ `ವ್ಯಾಟ್~ ದರವನ್ನು ಶೇ 5ರಿಂದ ಶೇ 2ಕ್ಕೆ ಇಳಿಸಿರುವುದರ ಜತೆಗೆ ಅಂತರರಾಜ್ಯ ಮಾರಾಟದ ಮೇಲಿನ ಕೇಂದ್ರ ಮಾರಾಟ ತೆರಿಗೆ ದರವನ್ನು ಶೇ 1 ರಿಂದ ಶೇ 2ಕ್ಕೆ ಹೆಚ್ಚಿಸಲಾಗುತ್ತಿದೆ. ಡೀಸೆಲ್ ಮೇಲಿನ ತೆರಿಗೆಯನ್ನೂ ಶೇ 18ರಿಂದ ಶೇ 16.75ಕ್ಕೆ (ಶೇ 1.25ರಷ್ಟಕ್ಕೆ)  ಇಳಿಸಲಾಗಿದೆ.ಸಂಪನ್ಮೂಲ ಸಂಗ್ರಹಕ್ಕೆ ಕ್ರಮ: ಹೆಚ್ಚುವರಿ ಸಂಪನ್ಮೂಲ ಕ್ರೋಡೀಕರಣಕ್ಕೆ ತಾತ್ಕಾಲಿಕ ಶೆಡ್‌ಗಳಲ್ಲಿ ನಡೆಸಲಾಗುವ ಕಲ್ಯಾಣ ಮಂಟಪ, ವಿಚಾರ ಸಂಕಿರಣ ಸಭಾಂಗಣ, ಸಮ್ಮೇಳನ ಸಭಾಂಗಣಗಳ ಮೇಲೆ ಶೇ 10ರಷ್ಟು ತೆರಿಗೆ ವಿಧಿಸಲಾಗಿದೆ.ಜೂಜು ತೆರಿಗೆಯಡಿ ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆಯುವ ಕುದುರೆ ರೇಸ್‌ಗೆ ಸಂಬಂಧಿಸಿದಂತೆ ಖಾಸಗಿ ಬುಕ್‌ಮೇಕರ್‌ಗಳು ಪ್ರತಿ ದಿನ ಪಾವತಿಸುವ ತೆರಿಗೆಯನ್ನು ಕ್ರಮವಾಗಿ 25 ಸಾವಿರ ರೂಪಾಯಿಗಳಿಂದ (ಶೇ 20ರಿಂದ ಶೇ 35ಕ್ಕೆ) 35 ಸಾವಿರಕ್ಕೆ  ಮತ್ತು 8 ಸಾವಿರ ರೂಪಾಯಿಗಳಿಂದ 30 ಸಾವಿರ ರೂಪಾಯಿಗಳಿಗೆ ಏರಿಸಲಾಗಿದೆ. ಅಬಕಾರಿ ಸುಂಕದಿಂದ 10,775 ಕೋಟಿ ರೂಪಾಯಿಗಳ ವರಮಾನ ನಿರೀಕ್ಷಿಸಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.