ಬುಧವಾರ, ಮೇ 19, 2021
22 °C

ವಾಣಿಜ್ಯ ಬಂದರಿನ ಹೂಳು ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಮಳೆ ನಿಂತರೂ ಮರದ ಹನಿ ನಿಲ್ಲಲ್ಲಿಲ್ಲ ಎನ್ನುವಂತೆ ಮ್ಯಾಂಗ ನೀಸ್ ಅದಿರು ವಹಿವಾಟು ನಿಂತು ಎರಡು ವರ್ಷ ಸಮೀಪಿಸುತ್ತಿದ್ದರೂ ಅದರಿಂದ ಉದ್ಬವಿಸಿರುವ ಸಮಸ್ಯೆಗೆ ಕೊನೆ ಇಲ್ಲ ಎನ್ನುವಂತಾಗಿದೆ. ನೀರಿಗೆ ಬಿದ್ದು ತಳದಲ್ಲಿ ಗಟ್ಟಿಯಾಗಿ ಕುಳಿತಿರುವ ಅದಿರನ್ನು `ಕ್ರೇನ್ ಮೌಟೆಂಡ್ ಗ್ರ್ಯಾಬ್ ಡ್ರಜ್ಜರ್~ನಿಂದ ತೆಗೆಯುತ್ತಿರುವುದೇ ಇದಕ್ಕೆ ಸಾಕ್ಷಿ.ಇಲ್ಲಿಯ ವಾಣಿಜ್ಯ ಬಂದರಿನಲ್ಲಿ ಹೂಳು ತಂಬಿದ್ದರಿಂದ ಸರಕು ಸಾಗಣೆ ಹಡಗುಗಳು ಪೂರ್ಣ ಪ್ರಮಾಣದಲ್ಲಿ ಸರಕುಗಳನ್ನು ತುಂಬಿಕೊಂಡು ಹೋಗಲು ಸಾಧ್ಯವಾಗುತ್ತಿರಲಿಲ್ಲ. ಅಂದಾಜು 50 ಸಾವಿರ ಟನ್ ಸಾಮ ರ್ಥ್ಯದ ಹಡಗಿನಲ್ಲಿ ಕೇವಲ 10ರಿಂದ 12 ಸಾವಿರ ಟನ್ ಸರಕು ಮಾತ್ರ ತುಂಬಬಹುದಾಗಿತ್ತು. ಈ ಹಿನ್ನೆಲೆ ಯಲ್ಲಿ ರಾಜ್ಯ ಸರ್ಕಾರ ಅಂದಾಜು ರೂ. 30 ಕೋಟಿ ವೆಚ್ಚದಲ್ಲಿ ಹೂಳೆತ್ತುವ ಕಾಮಗಾರಿ ಕೈಗೊಂಡಿತ್ತು.ಡ್ರಜ್ಜಿಂಗ್ ಕಾರ್ಪೋರೇಶನ್ ಆಫ್ ಇಂಡಿಯಾ ಹೂಳೆಯುತ್ತ ಕಾಮಗಾರಿ ಕೈಗೊಂಡಿದ್ದು, ಹಡಗು ಬಂದರು ಪ್ರವೇಶಿಸುವ ಮಾರ್ಗದ ಟರ್ನ್ ಬೆಸ್ ಮತ್ತು ಚಾನೆಲ್‌ನಲ್ಲಿ ಸದ್ಯ 9 ಮೀಟರ್ ವರೆಗೆ ಹೂಳೆತ್ತಲಾಗಿದೆ. ಇದರಿಂದಾಗಿ ಸರಕು ಸಾಗಣೆ ಹಡಗು ಹೋಗಲು, ಬರಲು ಅನುಕೂಲವಾಗಿದೆ.ವಾಣಿಜ್ಯ ಬಂದರಿನಿಂದ 2003ರಲ್ಲಿ ಅದಿರು ರಫ್ತು ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಅದಿರನ್ನು ಜಟ್ಟಿಯಿಂದ ಹಡಗುಗಳಿಗೆ ತುಂಬುವ ಸಂದರ್ಭದಲ್ಲಿ ಭಾರಿ ಪ್ರಮಾಣದಲ್ಲಿ ಅದಿರು ನೀರಿಗೆ ಬೀಳುತ್ತಿತ್ತು. 2010ರ ವರೆಗೂ ಅದಿರು ವಹಿವಾಟು ನಡೆದಿದ್ದು ನೀರಿಗೆ ಬಿದ್ದಿರುವ ಅದಿರು ತಳಭಾಗದಲ್ಲಿ ಗಟ್ಟಿ ಯಾಗಿ ಕುಳಿತು ಕೊಂಡಿದೆ. ಜಟ್ಟಿ ಯಿಂದ ಸುಮಾರು 10 ಮೀಟರ್ ದೂರದವರೆಗೆ ತಳಭಾಗ ದಲ್ಲಿ ಅದಿರು ಕುಳಿತು ಕೊಂಡಿರುವುದು ಕಂಡು ಬಂದಿದ್ದು, ಅದನ್ನು `ಕ್ರೈನ್ ಮೌಂ ಟೆಂಡ್ ಗ್ರ್ಯಾಬ್ ಡ್ರಜ್ಜರ್~ ಸಹಾಯ ದಿಂದ ತೆಗೆಯುವ ಕಾರ್ಯ ನಡೆದಿದೆ.`ಅದಿರು, ಉಪ್ಪು, ಮಣ್ಣು ಮಿಶ್ರಣ ಗೊಂಡು ತಳಭಾಗದಲ್ಲಿ ಕುಳಿತು ಗಟ್ಟಿ ಯಾದ ಪದರು ನಿರ್ಮಾ ಣವಾಗಿದೆ. ಅದನ್ನು ತೆಗೆಯುವ ಕಾರ್ಯ ನಡೆಯು ತ್ತಿದೆ. ಈ ಕಾರ್ಯ ಮುಗಿದ ನಂತರ ದೊಡ್ಡ ಹಡಗುಗಳು ಬಂದರಿಗೆ ಪ್ರವೇಶ ಮಾಡಬಹುದಾಗಿದೆ~ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.