ಮಂಗಳವಾರ, ಏಪ್ರಿಲ್ 13, 2021
30 °C

ವಾಣಿಜ್ಯ ಬ್ಯಾಂಕ್ ತೆರೆಯಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸೂರು: ಗ್ರಾಮೀಣ ಭಾಗದಲ್ಲಿ ಕೃಷಿಕನಿಗೆ ಆರ್ಥಿಕ ಶಕ್ತಿ ತುಂಬಲು ಬ್ಯಾಂಕ್‌ಗಳ ಅವಶ್ಯಕವಿದ್ದು, ಬ್ಯಾಂಕ್ ತೆರೆಯುವಂತೆ ಕಳೆದ ಎರಡು ವರ್ಷಗಳ ಹಿಂದೆ ತಹಶೀಲ್ದಾರ್ ಅವರಿಗೆ ಮನವಿ ಮಾಡಿದ್ದರೂ ಈವರೆಗೆ ಕ್ರಮ ತೆಗೆದುಕೊಂಡಿಲ್ಲ ಎಂದು ತಾ.ಪಂ. ಮಾಜಿ ಸದಸ್ಯ ಸತ್ಯನಾರಾಯಣ್ ಆರೋಪಿಸಿದರು. ಪಟ್ಟಣದ ಶಿಕ್ಷಕರ ಭವನದಲ್ಲಿ ಶನಿವಾರ ನಡೆದ ಕಸಬಾ ಹೋಬಳಿ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ ಎರಡು ವರ್ಷದಿಂದ ಹೋಬಳಿ ಮಟ್ಟದಲ್ಲಿ ಬ್ಯಾಂಕ್ ತೆರೆದು ಕೃಷಿಕರಿಗೆ ಸಹಾಯ ಮಾಡುವಂತೆ ಮನವಿ ಮಾಡುತ್ತಿದ್ದೇವೆ. ಈ ಬಗ್ಗೆ ಒಂದು ಬಾರಿಯೂ ಜನಸ್ಪಂದನಲ್ಲಿ ಲೀಡ್ ಬ್ಯಾಂಕ್ ಅಧಿಕಾರಿ ಭಾಗವಹಿಸಿ ವಿಷಯ ಚರ್ಚಿಸುವ ಗೋಜಿಗೆ ಹೋಗಿಲ್ಲ.ಪಕ್ಕದ ತಾಲ್ಲೂಕುಗಳಲ್ಲಿ ಹೋಬಳಿ ಮಟ್ಟದಲ್ಲಿಯೂ ವಾಣಿಜ್ಯ ಬ್ಯಾಂಕ್ ತೆರೆದು ಕೃಷಿಕರಿಗೆ ಅನುಕೂಲ ಮಾಡಿಕೊಡಲಾಗಿದೆ. ಈ ಕೆಲಸ ಹುಣಸೂರು ಕ್ಷೇತ್ರದಲ್ಲಿ ಏಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರು. ತಹಶೀಲ್ದಾರ್ ಲೋಕನಾಥ್ ಉತ್ತರಿಸಿ, ಮುಂದಿನ ಜನಸ್ಪಂದನ ಕಾರ್ಯಕ್ರಮಕ್ಕೆ ಲೀಡ್ ಬ್ಯಾಂಕ್ ಅಧಿಕಾರಿಯನ್ನು ಕರೆದು ಕಾನೂನು ಪರಿಮಿತಿಯಲ್ಲಿ ಬ್ಯಾಂಕ್ ತೆರೆಯುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.ಬಲ್ಲೇನಹಳ್ಳಿ ಕೆಂಪರಾಜು ಮಾತ ನಾಡಿ ‘ಗಿರಿಜನರಿಗೆ ಒದಗಿಸಬೇಕಿರುವ ಸವಲತ್ತುಗಳು ಅನ್ಯರ ಪಾಲಾಗು ತ್ತಿದ್ದು, ಗಿರಿಜನ ಫಲಾನುಭವಿ ಪಟ್ಟಿ ಇತ್ತೀಚೆಗೆ ಸಿದ್ಧಗೊಂಡಿದ್ದು, ಸರ್ಕಾರದ ಮಾನದಂಡ ಪಾಲಿಸದೆ ಶಾಸಕರಿಗೆ ಹಿತ ಬಯಸುವವರ ಹೆಸರು ಪಟ್ಟಿಗೆ ಸೇರಿಸಲಾಗಿದೆ’ ಎಂದು ಆರೋಪಿಸಿದರು.  ಕಾಟಾಚಾರ ಜನಸ್ಪಂದನ: ತಾಲೂಕಿನಲ್ಲಿ ನಡೆಯುತ್ತಿರುವ ಜನಸ್ಪಂದನ ಕಾರ್ಯಕ್ರಮದಿಂದ ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಜನಸ್ಪಂದನದಲ್ಲಿ ತೆಗೆದುಕೊಳ್ಳುವ ತೀರ್ಮಾನಗಳು ಅಧಿಕೃತವಾಗಿ ಅನುಷ್ಟಾನಗೊಳ್ಳದೆ ಎಲ್ಲವೂ ಬಿಳಿ ಹಾಳೆ ಮೇಲೆ ನಿಂತಿದೆ ಎಂದು ಆದಿಜಾಂಬವ ಸಮಾಜದ ಮುಖಂಡ ಡಿ.ಕುಮಾರ್ ಆರೋಪಿಸಿದರು.ಹಳೆ ಬಸ್ ನಿಲ್ದಾಣವನ್ನು  ಸಾರ್ವಜನಿಕರ ಬಳಕೆಗೆ ತೆರವುಗೊಳಿಸಬೇಕು ಎಂಬ ಮನವಿಗೆ ಸಾರಿಗೆ ಅಧಿಕಾರಿ ಎಚ್.ಡಿ.ಕೋಟೆ ಮಾರ್ಗ ಚಲಿಸುವ ಬಸ್‌ಗಳನ್ನು ಹಳೆ ಬಸ್ ನಿಲ್ದಾಣಕ್ಕೆ ವರ್ಗಾಯಿಸುವ ಚರ್ಚೆ ನಡೆದಿದೆ ಎಂದರು. ಜನಸ್ಪಂದನ ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯ ರಮೇಶ್, ತಾ.ಪಂ ಸದಸ್ಯರಾದ ಪರಮೇಶ್ವರಿ, ವೆಂಕಟೇಶ್,    ಪ್ರಸನ್ನಕುಮಾರ್ ಹಾಜರಿದ್ದರು .

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.