ವಾಣಿಜ್ಯ ವ್ಯವಹಾರ ಸುಸ್ಥಿರತೆಗೆ ಸಲಹೆ

7

ವಾಣಿಜ್ಯ ವ್ಯವಹಾರ ಸುಸ್ಥಿರತೆಗೆ ಸಲಹೆ

Published:
Updated:

ಯಲಹಂಕ: ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ವಾಣಿಜ್ಯ ವ್ಯವಹಾರಗಳಲ್ಲಿ ಸುಸ್ಥಿರತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕಾದ ಅಗತ್ಯವಿದೆ ಎಂದು ಇಂಧನ ಮತ್ತು ಸಂಪನ್ಮೂಲಗಳ ಸಂಸ್ಥೆ (ಟೆರಿ) ದಕ್ಷಿಣ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಪ್ರಣಬ್‌ದಾಸ್ ಗುಪ್ತ ಹೇಳಿದರು.  ಇಲ್ಲಿನ ರೇವಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿರುವ `ಜಾಗತಿಕ ವಾಣಿಜ್ಯ ವ್ಯವಹಾರದ ಪದ್ಧತಿಗಳು~ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.`ವಾಣಿಜ್ಯ ವ್ಯವಹಾರದಲಲಿ ಲಾಭಗಳಿಸುವುದು ಮತ್ತು ಅಭಿವೃದ್ಧಿ ಸಾಧಿಸುವುದು ಸರಿ. ಆದರೆ ಈ ಪ್ರಕ್ರಿಯೆಯನ್ನು  ನಿರಂತರವಾಗಿರುವಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ~ ಎಂದು ಸಲಹೆ ನೀಡಿದರು.

 ಸೀಮನ್ಸ್ ಸಾಫ್ಟ್‌ವೇರ್ ಟೆಕ್ನಾಲಜೀಸ್ ಲಿಮಿಟೆಡ್‌ನ ಮುಖ್ಯಸ್ಥರಾದ ಮೈಕೇಲ್ ಬೇಕರ್ ಮಾತನಾಡಿ, `ಸುಸ್ಥಿರತೆಯನ್ನು ಕಾಯ್ದುಕೊಳ್ಳುವುದು ಒಂದು ಸರ್ಕಾರ ಅಥವಾ ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ. ಇದಕ್ಕೆ ಸಾಮೂಹಿಕ ಸಂಘಟಿತ ಪ್ರಯತ್ನ ಅಗತ್ಯ~ ಎಂದು ಪ್ರತಿಪಾದಿಸಿದರು.ರೇವಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪಿ.ಶ್ಯಾಮರಾಜು ಅಧ್ಯಕ್ಷತೆ ವಹಿಸಿದ್ದರು. ಬೆಸ್ಕಾಂನ ತಾಂತ್ರಿಕ ನಿರ್ದೇಶಕ ರಾಮಕೃಷ್ಣ, ಪ್ರಾಂಶುಪಾಲರಾದ ಡಾ.ಎನ್.ರಮೇಶ್,ಆರ್.ಪಿ.ರೆಡ್ಡಿ, ಎಂಬಿಎ ವಿಭಾಗದ ಮುಖ್ಯಸ್ಥರಾದ ಪ್ರೊ.ಗೀತಾ ಎಂ.ರಾಜಾರಾಂ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry