ಭಾನುವಾರ, ಜೂನ್ 20, 2021
23 °C

ವಾತ್ಸಲ್ಯದ ಸಿದ್ಧಗಂಗಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾತ್ಸಲ್ಯದ ಸಿದ್ಧಗಂಗಾ

ಅಕ್ಕ-ತಮ್ಮನ ವಾತ್ಸಲ್ಯದ ಕತೆಯನ್ನು `ಸಿದ್ಧಗಂಗಾ~ ಚಿತ್ರದಲ್ಲಿ ಹೇಳಿದ್ದಾರಂತೆ ನಿರ್ದೇಶಕ ಜಿ. ಮೂರ್ತಿ. ಚಿತ್ರೀಕರಣ ಮುಗಿಸಿ ಹಿನ್ನೆಲೆ ಸಂಗೀತ ಅಳವಡಿಸುತ್ತಿರುವ ಅವರು ಇತ್ತೀಚೆಗೆ ಚಿತ್ರದ ಹಾಡುಗಳ ಪ್ರದರ್ಶನ ಏರ್ಪಡಿಸಿದ್ದರು.ಪಿಚ್ಚಳ್ಳಿ ಶ್ರೀನಿವಾಸ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳಲ್ಲಿ ಒಂದು ಹಾಡು ಹೊರತುಪಡಿಸಿ ಮೂರು ಹಾಡುಗಳನ್ನು ಪಿಚ್ಚಳ್ಳಿ ಅವರೇ ಹಾಡಿದ್ದಾರೆ. ಅದಕ್ಕೆ ಸ್ಪಷ್ಟನೆ ಎಂಬಂತೆ ನಿರ್ದೇಶಕರು ನಾಲ್ಕೂ ಹಾಡನ್ನು ತಮಗೇ ಹಾಡಲು ಹೇಳಿದ್ದರು. ಅದನ್ನು ನಿರಾಕರಿಸಿ ಒಂದು ಹಾಡನ್ನು ಚಂದ್ರಿಕಾ ಗುರುರಾಜ್ ಅವರಿಂದ ಹಾಡಿಸಿರುವೆ ಎನ್ನುತ್ತಾರೆ ಪಿಚ್ಚಳ್ಳಿ. ಕೇವಲ ಚರ್ಮವಾದ್ಯಗಳನ್ನೇ ಬಳಸಿ ಹಾಡುಗಳಿಗೆ ರಾಗ ಸಂಯೋಜಿಸಿರುವುದಾಗಿ ಹೇಳಿದ ಪಿಚ್ಚಳ್ಳಿ, ಹಿನ್ನೆಲೆ ಸಂಗೀತವನ್ನು ಕೂಡ ಚರ್ಮವಾದನಗಳಿಂದಲೇ ಮಾಡುತ್ತಿದ್ದಾರಂತೆ. ತಮ್ಮ `ರಂಗ~ ಗುರುಗಳಾದ ಬಿ.ವಿ.ಕಾರಂತರಿಂದ ಚರ್ಮವಾದ್ಯಗಳನ್ನು ಬಳಸುವಾಸೆಯನ್ನು ಬೆಳೆಸಿಕೊಂಡಿದ್ದಾಗಿ ಹೇಳಿಕೊಂಡ ಅವರು, ಕೀಬೋರ್ಡ್, ರಿದಂ ಬಾಕ್ಸ್ ಮುಟ್ಟದೇ, ತಮಟೆ, ನಗಾರಿ, ಡೊಳ್ಳು, ಜೋಂಕಿಣಿ, ದುಡಿ, ಜಗ್ಗಲಿಗೆ, ಎಡಕ, ಉರ್ಮಿ, ತುಂದನ, ಏಕತಾರಿ ಹೀಗೆ ಹಲವು ಚರ್ಮದ ವಾದ್ಯಗಳನ್ನು ಬಳಸಿದ್ದಾರಂತೆ.ಕಲಾನಿರ್ದೇಶನದಿಂದ ಸಿನಿಮಾ ನಿರ್ದೇಶನಕ್ಕೆ ಜಿಗಿದು ರಾಜ್ಯ ಪ್ರಶಸ್ತಿ ಪಡೆದ ನಿರ್ದೇಶಕ ಜಿ.ಮೂರ್ತಿ ಚಿತ್ರವನ್ನು ಏಪ್ರಿಲ್ ಮೊದಲ ವಾರದಲ್ಲಿ ಬಿಡುಗಡೆ ಮಾಡುವ ಹಂಬಲ ವ್ಯಕ್ತಪಡಿಸಿದರು. `ಚಿತ್ರದ ಕತೆ ಕೇಳಿ ಮೆಚ್ಚಿದ್ದ ಶಿವಗಂಗೆ ಸ್ವಾಮೀಜಿ ಕೂಡ ಚಿತ್ರದಲ್ಲಿ ನಟಿಸಿದ್ದಾರೆ.ಒಂದು ಸಿನಿಮಾಗೆ ನಿರ್ಮಾಪಕ, ನಿರ್ದೇಶಕ, ಸಂಗೀತ ನಿರ್ದೇಶಕ, ಸಂಕಲನಕಾರ, ಛಾಯಾಗ್ರಾಹಕ ಪಂಚಭೂತಗಳಿದ್ದಂತೆ~ ಎಂದರು.ನಿರ್ಮಾಪಕ ನಿಡಸಾಲೆ ಪುಟ್ಟಸ್ವಾಮಯ್ಯ ಅವರಿಗೆ ತಮ್ಮದು ಸದಭಿರುಚಿಯ ಚಿತ್ರ ಎನಿಸಿದೆ. ಮಕ್ಕಳಾದಿಯಾಗಿ ವೃದ್ಧರೂ ನೊಡಬಹುದಾದ ತಮ್ಮ ಚಿತ್ರಕ್ಕಾಗಿ ಹಗಲು ಇರುಳು ದುಡಿದ ನಿರ್ದೇಶಕ ವೃತ್ತಿಪರತೆಯನ್ನು ಅವರು ಮೆಚ್ಚಿಕೊಂಡರು.ಬಹಳ ದಿನಗಳ ನಂತರ ಹಾಡಿರುವ ಚಂದ್ರಿಕಾ ಗುರುರಾಜ್ `ಉತ್ತಮ ವಿಷಯವುಳ್ಳ ಚಿತ್ರದಲ್ಲಿ ಹಾಡಿರುವ ಸಂತಸ ಹಂಚಿಕೊಂಡರು. ನಟ ಚೇತನ್, ಚಿತ್ರ ಸಾಹಿತಿ ಜಾನ್‌ಪದ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.