ವಾನರನ ರಕ್ಷಣೆಗೆ ಮುಂದಾದ ಜನ!

ಬುಧವಾರ, ಮೇ 22, 2019
29 °C

ವಾನರನ ರಕ್ಷಣೆಗೆ ಮುಂದಾದ ಜನ!

Published:
Updated:

ವಿಜಯಪುರ: ಗಾಯಗೊಂಡಿದ್ದ ಕೋತಿಯೊಂದನ್ನು ರಕ್ಷಣೆ ಮಾಡುವ ಮೂಲಕ ಇಲ್ಲಿನ ಜನರು ಪಶು ಪ್ರೇಮವನ್ನು ಮೆರೆದಿದ್ದಾರೆ.ಇಲ್ಲಿನ ಬಸವೇಶ್ವರನಗರ ಬಸ್ ನಿಲ್ದಾಣದ ಬಳಿಯ ಮರವೊಂದರ ಮೇಲೆ ಕೋತಿಗಳು ಕಿತ್ತಾಡುತ್ತಿದ್ದವು.ವಯಸ್ಸಾಗಿದ್ದ ಕೋತಿಯೊಂದು ಗಲಾಟೆಯ ನಡುವೆ ಆಯ ತಪ್ಪಿ ಕೆಳಗೆ ಬಿತ್ತು.ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಕೋತಿಯನ್ನು ನಾಯಿಗಳು ಕಚ್ಚಿ ಮತ್ತಷ್ಟು ನಿತ್ರಾಣಗೊಳಿಸಿವೆ. ಗಾಯಗೊಂಡಿದ್ದ ಕೋತಿಯನ್ನು ಗಮನಿಸಿದ ಜನರು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.

ಅಗತ್ಯ ಚಿಕಿತ್ಸೆ ಕೊಡಿಸುವ ಮೂಲಕ ಕೋತಿಗೆ ಜೀವ ದಾನ ಮಾಡಿದರು.ನಿವೃತ್ತ ಪಶುವೈದ್ಯ ಡಾ.ಶ್ರೀನಿವಾಸರೆಡ್ಡಿ ಅವರ ಸಹಕಾರದಿಂದ ಗಾಯಗಳಿಗೆ ಹೊಲಿಗೆ ಹಾಕಿ ಶುಶ್ರೂಷೆ ಮಾಡಲಾಗಿದೆ.ಚರಂಡಿ ಶುಚಿ

ವಿಜಯಪುರ: ಪಟ್ಟಣದ ವಾರ್ಡ್ ನಂ.11 ರಲ್ಲಿರುವ ಚರಂಡಿಯಲ್ಲಿ ಕಲುಷಿತ ನೀರು ನ್ಲ್ಲಿಲದಂತೆ ಜೆಸಿಬಿ ಯಂತ್ರಗಳ ಮೂಲಕ ಕಸವನ್ನು ಹೊರತೆಗೆಯಲಾಯಿತು.ಸ್ಥಳಕ್ಕೆ ಪುರಸಭಾ ಮುಖ್ಯಾಧಿಕಾರಿ ಎಂ.ಆರ್.ಮಂಜುನಾಥ್, ಸ್ಥಾಯಿಸಮಿತಿಯ ಅಧ್ಯಕ್ಷ ಎಂ.ವೀರಣ್ಣ, ಪುರಸಭಾ ಸದಸ್ಯ ಎಂ.ಮುನಿಶಾಮಪ್ಪ ಅವರು ಭೇಟಿ ನೀಡಿ ಪರಿಶೀಲಿಸಿದರು.ಆಗ್ರಹ: ಮುಖ್ಯ ಚರಂಡಿಯಲ್ಲಿ ಆಗಿಂದಾಗ್ಗೆ ಮಣ್ಣು, ಕಸ ಮುಚ್ಚಿಕೊಂಡು ನೀರು ನಿಂತು ಕಲುಷಿತಗೊಳ್ಳುತ್ತಿದ್ದು, ಕೂಡಲೇ ಚರಂಡಿಗೆ ಶಾಶ್ವತವಾಗಿ ಸಿಮೆಂಟ್ ಗೋಡೆ ನಿರ್ಮಿಸಬೇಕೆಂದು ಬಿ.ಜೆ.ಪಿ ಮುಖಂಡ ಸಿ.ನೀಲಕಂಠಪ್ಪ ಆಗ್ರಹಿಸಿದ್ದಾರೆ.ಹಿಂದಿನ ವರ್ಷದಲ್ಲಿ ಚಿಕುನ್‌ಗುನ್ಯಾದಂತಹ ರೋಗಗಳಿಗೆ ತಾಲ್ಲೂಕಿನ ಜನತೆಯು ತುತ್ತಾಗಿದ್ದಾರೆ. ಸೊಳ್ಳೆಗಳ ಆವಾಸ ಸ್ಥಾನವಾಗಿರುವ ಕೊಳಚೆ ನೀರು ಹರಿಯುವ ಮೋರಿಯನ್ನು ಸರಿಪಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.ಮೋರಿ ಕಿರಿದುಗೊಳಿಸುವುದರಿಂದ ನೀರು ಸರಾಗವಾಗಿ ಹರಿಯುವುದಲ್ಲದೇ ಉಳಿಕೆ ಜಾಗದಲ್ಲಿ ಎರಡೂ ಕಡೆ ವಿಶಾಲವಾದ ರಸ್ತೆಗಳನ್ನು ನಿರ್ಮಿಸಿ, ಅಭಿವೃದ್ಧಿಪಡಿಸುವುದಾದ್ದರಿಂದ ಪಟ್ಟಣದ ಪ್ರಮುಖ ಭಾಗವಾದ ಗಾಂಧಿಚೌಕ, ಮುಖ್ಯರಸ್ತೆ, ಗಂಗಾತಾಯಿ ದೇವಾಲಯದ ಸರ್ಕಲ್, ಎಲ್ಲಮ್ಮತಾಯಿ ಮತ್ತು ಧರ್ಮರಾಯಸ್ವಾಮಿ ದೇವಾಲಯದ ಬೀದಿಗಳಲ್ಲಿ ನಿಲ್ಲಿಸಬಹುದಾದ ವಾಹನಗಳಿಗೆಲ್ಲಾ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದಂತಾಗುತ್ತದೆ ಎಂದರು.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry