ವಾನರ ಸಂರಕ್ಷಣೆ ತುರ್ತು ಅಗತ್ಯ

7

ವಾನರ ಸಂರಕ್ಷಣೆ ತುರ್ತು ಅಗತ್ಯ

Published:
Updated:

ಹೈದರಾಬಾದ್ (ಪಿಟಿಐ): `ದೈಹಿಕ ರಚನೆಯಲ್ಲಿ ಮನುಷ್ಯನಿಗೆ ಹತ್ತಿರವಾಗಿರುವ ಅಳಿವಿನಂಚಿನಲ್ಲಿರುವ ಚಿಂಪಾಂಜಿ, ಕೋತಿ, ಲೆಮೂರ್ ಸೇರಿದಂತೆ ಇತರೇ ವಾನರ ಪ್ರಭೇದಗಳ ಸಂರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆ~ ಎಂದು ಇಲ್ಲಿ ನಡೆದ ವಿಶ್ವಸಂಸ್ಥೆಯ `11ನೇ ಜೀವ ವೈವಿಧ್ಯ ಮಹಾ ಸಮ್ಮೇಳನ~ದಲ್ಲಿ ವಾನರರ ಕುರಿತು ಬಿಡುಗಡೆಯಾದ ವರದಿ ಹೇಳಿದೆ.`ಪ್ರೈಮೇಟ್ಸ್ ಇನ್ ಪೆರಿಲ್: ದಿ ವಲ್ಡ್ಸ್  25 ಮೋಸ್ಟ್ ಎಂಡೆಂಜರ್ಡ್‌ ಪ್ರೈಮೇಟ್ಸ್~ ವರದಿಯಲ್ಲಿ 25 ವಾನರ ಪ್ರಭೇದಗಳು ಅಳಿವಿನ ಅಂಚಿಗೆ ಸಿಲುಕಿವೆ ಎಂದು ಹೇಳಾಗಿದೆ. ಏಷ್ಯಾದ ಒಂಬತ್ತು, ಮಡಗಾಸ್ಕರ್‌ನ ಆರು, ಆಫ್ರಿಕಾ ಹಾಗೂ ಅಮೆರಿಕದ ನವ ಉಷ್ಣವಲಯದಲ್ಲಿ ಐದು ವಾನರ ಪ್ರಭೇದಗಳು ಅಳಿವಿನಂಚಿನಲ್ಲಿವೆ ಎಂದು ವರದಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry