ಗುರುವಾರ , ಜನವರಿ 30, 2020
18 °C

ವಾಮಾಚಾರ: ಬಾಲಕಿ ಬಲಿಗೆ ವಿಫಲ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂತಾಮಣಿ: ನಿಧಿ ಆಸೆಗಾಗಿ ವಾಮಾಚಾರ ನಡೆಸಿ, ಬಾಲಕಿಯೊಬ್ಬಳನ್ನು ಬಲಿಕೊಡುವ ವಿಫಲ ಯತ್ನವೊಂದು ತಾಲ್ಲೂಕಿನ ಯರ್ರೈಗಾರಹಳ್ಳಿಯ ಸಮೀಪ ಬುಧವಾರ ನಡೆದಿದೆ.ಮಹಮದ್‌ ಬಾಷಾ ಎಂಬ ಮಾಂತ್ರಿಕ ನಗರದ ತಪತೇಶ್ವರ ಕಾಲೊನಿಯ ಸುಮಾರು 7 ವರ್ಷದ ಬಾಲಕಿಯನ್ನು ಪೂಜೆ ಮಾಡಿಸುವ ನೆಪದಲ್ಲಿ ಆಕೆಯ ತಾತನ ಸಹಾಯ­ದಿಂದ ಕರೆದುಕೊಂಡು ಹೋಗಿದ್ದ.ಮಾಂತ್ರಿಕ ಬಾಷಾನ ಕ್ಷುದ್ರಪೂಜೆ ಹಾಗೂ ನಡವಳಿಕೆಯಿಂದ ಅನು­ಮಾನ­ಗೊಂಡ ಬಾಲಕಿ ಆತನಿಂದ ತಪ್ಪಿಸಿ­ಕೊಂಡು ಬಂದು ಪೋಷಕರಿಗೆ ತಿಳಿಸಿದ್ದಾಳೆ.ಪೋಷಕರು ಮಾಂತ್ರಿಕ ಬಾಷಾನನ್ನು ಹಿಡಿದು ಧರ್ಮದೇಟು ನೀಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ.ಹಿನ್ನೆಲೆ: ಯರ್ರೈಗಾರಹಳ್ಳಿಯ ಬಳಿ ನಿಧಿ ಇದೆ. ಹೊರತೆಗೆಯಬೇಕಾದರೆ ನರಬಲಿ ಕೊಡಬೇಕು ಎಂದು ಬಾಷಾ ಗ್ರಾಮದ ವೆಂಕಟರವಣಪ್ಪ ಎಂಬುವರಿಗೆ ತಿಳಿಸಿದ್ದಾನೆ.ನಿಧಿ ಆಸೆಯಿಂದ ವೆಂಕಟರವಣಪ್ಪ ಸ್ವಂತ ಮೊಮ್ಮಗಳನ್ನೇ ಬಲಿ ಕೊಡಲು ಯೋಜನೆ ರೂಪಿಸಿದ್ದಾರೆ. ಸೋಮವಾರ ನಗರಕ್ಕೆ ಬಂದು ಮೊಮ್ಮಗಳು ಅನಿಕೇತನಳನ್ನು(7) ಕರೆದುಕೊಂಡು ಹೋಗಿದ್ದಾರೆ.ಮಂಗಳವಾರ ಕ್ಷುದ್ರಪೂಜೆ ಮತ್ತಿ­ತರ ವಾಮಾಚಾರಗಳನ್ನು ಮಾಡು­ತ್ತಿದ್ದದ್ದನ್ನು ಕಂಡು ಹಾಗೂ ಅವರ ಮಾತುಗಳಿಂದ ಬಾಲಕಿಗೆ ಅನುಮಾನ ಬಂದು, ತಪ್ಪಿಸಿಕೊಂಡಿದ್ದಾಳೆ.ನಂತರ ದಾರಿಹೋಕರ ಸಹಾಯ­ದಿಂದ ಮನೆಗೆ ಬಂದು ಪೋಷಕರಿಗೆ ತಿಳಿಸಿದ್ದಾಳೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರತಿಕ್ರಿಯಿಸಿ (+)