ಗುರುವಾರ , ಮೇ 6, 2021
31 °C

ವಾರಕ್ಕೊಂದು ವಿಜ್ಞಾನ ಪ್ರಯೋಗಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ವಿಜ್ಞಾನ ಮತ್ತು ತಂತ್ರಜ್ಞಾನ ಇಂದು ಅವಶ್ಯವಿದ್ದು, ಪ್ರತಿಯೊಬ್ಬರಲ್ಲೂ ಪ್ರತಿಭೆ ಇದೆ. ನಿಶ್ಚಿತ ಗುರಿಯನ್ನು ಇಟ್ಟುಕೊಂಡು ಜೀವನದಲ್ಲಿ ಮುಂದೆ ಬರಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿದ್ದರಾಮ ಮನಹಳ್ಳಿ ಹೇಳಿದರು.

 

ನಗರದ ಬಸವೇಶ್ವರ ಶಿಶುವಿಹಾರ ಶಾಲೆಯಲ್ಲಿ  ಸಾರ್ವಜನಿಕ ಶಿಕ್ಷಣ ಇಲಾಖೆ  ವತಿಯಿಂದ ಗುಣಾತ್ಮಕ ಶಿಕ್ಷಣಕ್ಕಾಗಿ ಹಮ್ಮಿಕೊಂಡಿರುವ ಪ್ರಾಥಮಿಕ ಹಾಗೂ  ಪ್ರೌಢಶಾಲೆಗಳಲ್ಲಿ ವಾರಕ್ಕೊಂದು ವಿಜ್ಞಾನ ಪ್ರಯೋಗ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು.21ನೇ ಶತಮಾನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಅವಶ್ಯಕತೆ ಇದೆ.  ವಿಜ್ಞಾನ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ ಎಂದರು.ಶಾಲೆಗಳಲ್ಲಿ ಎಲ್ಲ ವಿಷಯಗಳಿಗಿಂತ ವಿಜ್ಞಾನ-ಗಣಿತ ವಿಷಯಗಳ ಕಲಿಕೆ ಕಡಿಮೆಯಾಗಿದೆ. ಇದರ ಬಗ್ಗೆ ಶಿಕ್ಷಕರು ಜಾಗೃತಿ ವಹಿಸಿಸಬೇಕು. ರಾಜ್ಯದಲ್ಲಿ ಜಿಲ್ಲೆಯನ್ನು ವೈಜ್ಞಾನಿಕವಾಗಿ ಮುನ್ನೆಡೆಸೋಣ ಎಂದು ಸಲಹೆ ಮಾಡಿದರು.ಬಿ.ವಿ.ವಿ ಸಂಘದ ಶಾಲಾ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಸಿ.ಎಂ.ಅಥಣಿ ಮಾತನಾಡಿ, ವಿಜ್ಞಾನ ಇದ್ದರೆ ಮಾತ್ರ ಪ್ರತಿಯೊಬ್ಬರು ಬದುಕಲು ಸಾಧ್ಯ ಎಂದರು.ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಜ್ಞಾನ ವಿಷಯ ಪರಿವೀಕ್ಷಕ ಜಾಸ್ಮೀನ್ ಕಿಲ್ಲೇದಾರ ಮಾತನಾಡಿ, ಮಕ್ಕಳೆಂಬ ವಿಜ್ಞಾನದ ಬೀಜಕ್ಕೆ ಈಗಿನಿಂದಲೇ ನೀರುಣಿಸಿದರೆ ಉತ್ತಮ ಸಸಿಯಾಗಿ ಬೆಳೆಯಲು ಸಾಧ್ಯ  ಎಂದು ಹೇಳಿದರು.ಮುಖ್ಯ ಶಿಕ್ಷಕ ಡಿ.ಬಿ. ಅಯ್ಯನಗೌಡರ, ಜ್ಯೋತಿ, ರಾಜೇಶ್ವರಿ, ಎ.ಎಚ್.ಕುರ್ತಕೋಟೆ, ಪಿ.ಎಸ್. ಮೇಲ್ನಾಡ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.