ಸೋಮವಾರ, ಮಾರ್ಚ್ 1, 2021
29 °C

ವಾರದಲ್ಲಿ ಎರಡು ಬಾರಿ ಬಿಬಿಎಂಪಿ- ಬಿಡಿಎ ಕಾಮಗಾರಿ ಪರಿಶೀಲನೆ 4ಸಮಸ್ಯೆಗಳಿಗೆ ತುರ್ತು ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾರದಲ್ಲಿ ಎರಡು ಬಾರಿ ಬಿಬಿಎಂಪಿ- ಬಿಡಿಎ ಕಾಮಗಾರಿ ಪರಿಶೀಲನೆ 4ಸಮಸ್ಯೆಗಳಿಗೆ ತುರ್ತು ಪರಿಹಾರ

ಬೆಂಗಳೂರು: `ಮುಂದಿನ ದಿನಗಳಲ್ಲಿ ವಾರದಲ್ಲಿ 2 ಬಾರಿ ಬಿಬಿಎಂಪಿ ಮತ್ತು ಬಿಡಿಎ ಕಾಮಗಾರಿಗಳ ಪರಿಶೀಲನೆ ನಡೆಸಲಾಗುವುದು. ಇದರೊಂದಿಗೆ ಮೂರು ತಿಂಗಳುಗಳಲ್ಲಿ 198 ವಾರ್ಡ್‌ನ 28 ಶಾಸಕರ ಕ್ಷೇತ್ರಕ್ಕೆ ತೆರಳಿ ಅವರ ಸಮಸ್ಯೆಗಳನ್ನು ಚರ್ಚಿಸಿ, ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು~ ಎಂದು  ಮುಖ್ಯಮಂತ್ರಿ ಸದಾನಂದಗೌಡ ಭರವಸೆ ನೀಡಿದರು.ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಗರದ ವಿವಿಧೆಡೆ ಮಂಗಳವಾರ ಹಮ್ಮಿಕೊಂಡಿದ್ದ ಕಾಮಗಾರಿಗಳ ಶಂಕುಸ್ಥಾಪನೆ, ಪ್ರಗತಿ ಪರಿಶೀಲನೆ ಮತ್ತು ಬಡವರಿಗಾಗಿ ನಿರ್ಮಿಸಿರುವ ವಸತಿಗೃಹಗಳ ಉದ್ಘಾಟನೆ ಹಾಗೂ ಸ್ವಾಧೀನ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಬೆಂಗಳೂರು ನಗರಾಭಿವೃದ್ಧಿಗೆ ಐದೂವರೆ ಸಾವಿರ ಕೋಟಿ ರೂಪಾಯಿ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿರಿಸಲಾಗಿದ್ದು, ಅದರ ಸದ್ಬಳಕೆಗೆ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಗೊಂಡ ಹೊರ ವರ್ತುಲ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಬಗ್ಗೆ ಸರ್ಕಾರ ಈಗಾಗಲೇ ನೀಲನಕ್ಷೆ ತಯಾರಿಸಿದೆ~ ಎಂದು ಹೇಳಿದರು.`ನಗರದ ಒಟ್ಟು ಹದಿನೈದು ಪ್ರದೇಶಗಳಲ್ಲಿ ಮೂರು ಅಂತಸ್ತಿನ ಸುಸಜ್ಜಿತ ಮನೆಗಳಿರುವ ಬಡಾವಣೆಗಳನ್ನು ನಿರ್ಮಿಸಲಾಗುವುದು. 87 ಕೋಟಿ ರೂಪಾಯಿ ವೆಚ್ಚದಲ್ಲಿ ನಾಯಂಡಹಳ್ಳಿ ಮೇಲ್ಸುತುವೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಶೀಘ್ರವೇ ಪೂರ್ಣಗೊಳ್ಳಲಿದೆ.ಅರ್ಕಾವತಿ, ಕೆಂಪೇಗೌಡ ಮತ್ತು ಶಿವರಾಮಕಾರಂತ ಬಡಾವಣೆಗಳಲ್ಲಿ ಒಟ್ಟು ಹತ್ತು ಸಾವಿರಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲು ಬಿಡಿಎ ಈಗಾಗಲೇ ಯೋಜನೆ ರೂಪಿಸಿದ್ದು, ಆರು ಸಾವಿರ ಮನೆಗಳ ನಿರ್ಮಾಣಕ್ಕೆ ಗುತ್ತಿಗೆ ನೀಡಲಾಗಿದೆ~ ಎಂದು ಹೇಳಿದರು.`ಬೇಸಿಗೆಯಲ್ಲಿ ನೀರಿನ ಅಭಾವ ಹೆಚ್ಚಿರುವುದರಿಂದ 110 ಕೋಟಿ ರೂಪಾಯಿ ವೆಚ್ಚದಲ್ಲಿ ಒಟ್ಟು 12 ಕೆರೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು. 630 ಕೋಟಿ ರೂಪಾಯಿ ವೆಚ್ಚದಲ್ಲಿ  ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ~ ಎಂದರು.ಹಲಗೆವಡೇರಹಳ್ಳಿಯಲ್ಲಿ ಆರ್ಥಿಕ ದುರ್ಬಲ ವರ್ಗಗಳಿಗೆ ವಸತಿ ಸಮುಚ್ಛಯ, ಕಂಠೀರವ ಸ್ಟುಡಿಯೊ ಜಂಕ್ಷನ್‌ನಲ್ಲಿ ಹೊರವರ್ತುಲ ರಸ್ತೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ನಂದಿನಿ ಬಡಾವಣೆಯಲ್ಲಿ ಬಡವರಿಗಾಗಿ ನಿರ್ಮಿಸಿರುವ ಮನೆಗಳ ಸ್ವಾಧೀನ ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಅಭಿವೃದ್ಧಿ ಆಯುಕ್ತ ಸುಬೀರ್ ಹರಿಸಿಂಗ್, ಬಿಡಿಎ ಆಯುಕ್ತ ಭರತ್‌ಲಾಲ್ ಮೀನಾ, ಉಪಮೇಯರ್ ಎಸ್.ಹರೀಶ್ ಇತರರು ಉಪಸ್ಥಿತರಿದ್ದರು.ಶಿಲ್ಪೋದ್ಯಾನಕ್ಕೆ ಶಂಕುಸ್ಥಾಪನೆಬನಶಂಕರಿ ಆರನೇ ಹಂತದಲ್ಲಿರುವ ಶಿಲ್ಪೋದ್ಯಾನದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, `ಉತ್ತರಹಳ್ಳಿಯಿಂದ ಪೂರ್ಣಪ್ರಜ್ಞಾ ಬಡಾವಣೆಗೆ ಮೇಲ್ಸತುವೆ ನಿರ್ಮಿಸುವ ಮೂಲಕ ಸಾರ್ವಜನಿಕರಿಗೆ ಸಂಚಾರ ಮುಕ್ತ ಸೇವೆ ಒದಗಿಸಲು ಸಾಧ್ಯವಾಗುತ್ತದೆ~ ಎಂದರು.ರಸ್ತೆ ಹಾಗೂ ಪೊಲೀಸ್ ಠಾಣೆ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಒದಗಿಸುವಂತೆ ಈ ಭಾಗದ ಶಾಸಕ ಎಂ.ಕೃಷ್ಣಪ್ಪ  ಅವರು ಮಂಡಿಸಿದ ಬೇಡಿಕೆಗೆ ಸ್ಪಂದಿಸಿದ ಮುಖ್ಯಮಂತ್ರಿ `ಈ ಭಾಗದಲ್ಲಿ ಜಿಗಣಿ ಮತ್ತು ತಲಘಟ್ಟಪುರದಲ್ಲಿ ಮಾತ್ರ ಪೊಲೀಸ್ ಠಾಣೆಯಿರುವುದರಿಂದ ಹೆಚ್ಚುವರಿಯಾಗಿ ಬನ್ನೇರುಘಟ್ಟದಲ್ಲಿ ಪೊಲೀಸ್ ಠಾಣೆ ನಿರ್ಮಾಣಕ್ಕೆ ಶೀಘ್ರವೇ ಒಪ್ಪಿಗೆ ನೀಡಲಾಗುವುದು~ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ, `ಕುಡಿವ ನೀರು, ಮೈದಾನ, ಉದ್ಯಾನ ಹಾಗೂ ರಸ್ತೆಗಳಿಗೆ ಸರ್ಕಾರ ಆದ್ಯತೆ ನೀಡಿದೆ. ಶಿಲ್ಪೋದ್ಯಾನ ಪ್ರವಾಸಿಗರನ್ನು ಆಕರ್ಷಿಸಲಿದೆ~ ಎಂದರು.  ನಂದಿನಿ ಬಡಾವಣೆ ಮತ್ತು ರಾಜರಾಜೇಶ್ವರಿ ಬಡಾವಣೆಯಲ್ಲಿ ಬಡವರಿಗೆ 5ರಿಂದ 10ಲಕ್ಷ ರೂಪಾಯಿಗಿಂತ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸುವ ವ್ಯವಸ್ಥೆ ಮಾಡಿದೆ~ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.